‘ನನ್ನನ್ನು ಸರ್ ಅನ್ನಬೇಡಿ, ಮಗ ಎಂದು ಕರೆಯಿರಿ’ ವಯಸ್ಸಾದ ಮಹಿಳೆಯ ಮನಗೆದ್ದ ವಿರಾಟ್ ಕೊಹ್ಲಿ

Published : Nov 09, 2026, 07:49 PM IST
virat kohli dont call me sir call me son viral video

ಸಾರಾಂಶ

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli), ತಮ್ಮ ಆಟದಿಂದ ಮಾತ್ರವಲ್ಲದೆ ಅಭಿಮಾನಿಗಳ ಮೇಲಿರುವ ಪ್ರೀತಿ ಮತ್ತು ಗೌರವದಿಂದಲೂ ಕೋಟ್ಯಂತರ ಜನರ ಮನಗೆದ್ದಿದ್ದಾರೆ. ಒಂದು ಹೃದಯಸ್ಪರ್ಶಿ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಿದೆ.

ಕ್ರಿಕೆಟ್ ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ದಾಖಲೆಗಳ ಮೇಲೆ ದಾಖಲೆ ಬರೆಯುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli), ತಮ್ಮ ಆಟದಿಂದ ಮಾತ್ರವಲ್ಲದೆ ಅಭಿಮಾನಿಗಳ ಮೇಲಿರುವ ಪ್ರೀತಿ ಮತ್ತು ಗೌರವದಿಂದಲೂ ಕೋಟ್ಯಂತರ ಜನರ ಮನಗೆದ್ದಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದ 2023ರ ಒಂದು ಹೃದಯಸ್ಪರ್ಶಿ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಿದೆ.

ಅಷ್ಟಕ್ಕೂ ಈ ವಿಡಿಯೋದಲ್ಲಿರುವ ಮಹಿಳೆ ಯಾರು? ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ ಅವರು ಅಷ್ಟೊಂದು ಭಾವುಕರಾಗಿದ್ದೇಕೆ?

ಈ ಘಟನೆ ನಡೆದಿದ್ದು 2023ರ ಜುಲೈನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ವೇಳೆ. ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜೋಶುವಾ ಡಾ ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಪಡೆದಿದ್ದರು.

ವಿಶೇಷವೆಂದರೆ, ಜೋಶುವಾ ಅವರ ತಾಯಿ ತಮ್ಮ ಮಗನ ಆಟ ನೋಡಲು ಮಾತ್ರವಲ್ಲ, ವಿರಾಟ್ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಕೂಡ ಮೈದಾನಕ್ಕೆ ಬಂದಿದ್ದರು. ಮೊದಲ ದಿನದ ಆಟದ ವೇಳೆ ಜೋಶುವಾ ಈ ವಿಚಾರವನ್ನು ಸ್ಟಂಪ್ ಮೈಕ್ ಮೂಲಕ ಕೊಹ್ಲಿ ಬಳಿ ಹೇಳಿಕೊಂಡಿದ್ದರು.

ತಮ್ಮ ತಾಯಿ ಕೊಹ್ಲಿಯ ದೊಡ್ಡ ಅಭಿಮಾನಿ ಎಂಬುದನ್ನು ತಿಳಿದಿದ್ದ ಜೋಶುವಾ, ಎರಡನೇ ದಿನದ ಆಟ ಮುಗಿದ ಬಳಿಕ ಟೀಂ ಇಂಡಿಯಾದ ಬಸ್ ಬಳಿ ಕೊಹ್ಲಿಯನ್ನು ಭೇಟಿಯಾಗುವಂತೆ ತಾಯಿಯನ್ನು ಕರೆದುಕೊಂಡು ಬಂದಿದ್ದರು.

ಬಸ್‌ನಿಂದ ಕೆಳಗಿಳಿದು ಬಂದ ಕೊಹ್ಲಿ, ಜೋಶುವಾ ಅವರ ತಾಯಿಯನ್ನು ಪ್ರೀತಿಯಿಂದ ಮಾತನಾಡಿಸಿದರು. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಣ್ಣಾರೆ ಕಂಡ ಮಹಿಳೆ ಭಾವುಕರಾಗಿ ಅವರನ್ನು ಅಪ್ಪಿಕೊಂಡರು. ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡು ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡರು.

ಈ ಭೇಟಿಯ ಬಗ್ಗೆ ಮಾತನಾಡಿದ್ದ ಜೋಶುವಾ ಅವರ ತಾಯಿ, "ನಾನು ಈ ಪಂದ್ಯಕ್ಕೆ ಬಂದಿದ್ದು ವಿರಾಟ್ ಕೊಹ್ಲಿಯನ್ನು ನೋಡಲು. ನನ್ನ ಮಗನನ್ನು ಪ್ರತಿದಿನ ನೋಡುತ್ತೇನೆ. ಆದರೆ ಕೊಹ್ಲಿಯನ್ನು ಭೇಟಿಯಾಗಿದ್ದು ಇದೇ ಮೊದಲ ಬಾರಿ. ಅವರು ನಿಜಕ್ಕೂ ಅದ್ಭುತ ವ್ಯಕ್ತಿ. ಅವರಂತಹ ಆಟಗಾರನನ್ನು ಭೇಟಿಯಾಗಿದ್ದು ನನ್ನ ಪಾಲಿಗೆ ಗೌರವದ ಕ್ಷಣ" ಎಂದು ಸಂತಸ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೆ, ಕೊಹ್ಲಿ ತಮ್ಮ ತಾಯಿಯ ಪಾಲಿಗೆ ಆ ದಿನವನ್ನು ಮಾತ್ರವಲ್ಲ, ಇಡೀ ವರ್ಷವನ್ನೇ ಸ್ಮರಣೀಯವಾಗಿಸಿದ್ದಾರೆ ಎಂದು ಜೋಶುವಾ ಕೂಡ ಹೇಳಿಕೊಂಡಿದ್ದರು.

ಅಂದು ನಡೆದ ಈ ಸುಂದರ ಕ್ಷಣದ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ವಿರಾಟ್ ಕೊಹ್ಲಿಯ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿರುವ ಕಿಂಗ್ ಕೊಹ್ಲಿ, ಮೈದಾನದ ಹೊರಗೆ ಅಭಿಮಾನಿಗಳ ಪಾಲಿನ ನೆಚ್ಚಿನ ವ್ಯಕ್ತಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs NZ: ಗಂಭೀರ್‌ಗೆ ಈ ಜ್ಞಾನ ಇರಬೇಕು; ಕನ್ನಡಿಗನ ಪರ ಬ್ಯಾಟ್‌ ಬೀಸಿದ ಲೆಜೆಂಡ್! ಹೆಡ್ ಕೋಚ್‌ಗೆ ಮಾಸ್ಟರ್ ಕ್ಲಾಸ್‌
Ind Vs Pak: ಭಾರತಕ್ಕೆ ಸೋಲುಣಿಸಲು ಪಾಕ್ ಮಹಾ ಫ್ರಾಡ್? 4 ವರ್ಷದಲ್ಲಿ 5 ಬಾರಿ ಅಂಡರ್-19 ಆಡಿದ ಆಟಗಾರನ ಕಥೆ ಏನು?