ಅದೊಂದು ಕಾರಣಕ್ಕಾಗಿ ಸಚಿನ್‌ಗಿಂತ ಕೊಹ್ಲಿಯೇ ಗ್ರೇಟ್ ಎಂದ ಎಬಿಡಿ..! ಸುಳ್ಳು ಹೇಳಿದ್ರಾ ಡಿವಿಲಿಯರ್ಸ್‌?

Published : Aug 20, 2026, 03:23 PM IST
Sachin Tendulkar Virat Kohli

ಸಾರಾಂಶ

ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್‌ಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಆದರೆ, ಅಂಕಿಅಂಶಗಳು ಸಚಿನ್ ಪರವಾಗಿದ್ದರೂ, ವಿದೇಶಿ ಸರಣಿಗಳನ್ನು ಗೆಲ್ಲುವ ತಂಡವಾಗಿ ಭಾರತವನ್ನು ರೂಪಿಸಿದ ಕೊಹ್ಲಿಯ ಪ್ರಭಾವವನ್ನು ಎಬಿಡಿ ಶ್ಲಾಘಿಸಿದ್ದಾರೆ.

ಜೊಹಾನ್ಸ್‌ಬರ್ಗ್: ವಿದೇಶಿ ಟೆಸ್ಟ್ ಪಂದ್ಯಗಳ ಪ್ರದರ್ಶನಕ್ಕೆ ಬಂದರೆ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್‌ಗಿಂತ ವಿರಾಟ್ ಕೊಹ್ಲಿನೇ ಬೆಸ್ಟ್. ಹೀಗೆಂದು ಹೇಳಿರುವುದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್. ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಎಬಿಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಮಾತು ಹೇಳಿದ್ದಾರೆ. ಆರ್‌ಸಿಬಿಯಲ್ಲಿ ಕೊಹ್ಲಿ ಜೊತೆ ಆಡಿದ್ದ ಎಬಿಡಿ, ತಮ್ಮ ಮಾಜಿ ಸಹ ಆಟಗಾರನನ್ನು ಹಾಡಿ ಹೊಗಳಿದ್ದಾರೆ.

ವಿದೇಶಿ ಪಿಚ್‌ಗಳಲ್ಲಿ ಸಚಿನ್‌ಗಿಂತ ಕೊಹ್ಲಿ ಬೆಸ್ಟ್?

ವಿದೇಶದ ಬೌನ್ಸಿ ಪಿಚ್‌ಗಳಲ್ಲಿ ಏಷ್ಯಾದ ಬ್ಯಾಟರ್‌ಗಳೂ ಮಿಂಚಬಲ್ಲರು ಅಂತ ಮೊದಲು ದಾರಿ ತೋರಿಸಿದ್ದೇ ಸಚಿನ್. ಆದರೆ, ಆ ನಂಬಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು ವಿರಾಟ್ ಕೊಹ್ಲಿ ಅಂತ ಡಿವಿಲಿಯರ್ಸ್ ಹೇಳಿದ್ದಾರೆ. ಸಚಿನ್ ಶುರುಮಾಡಿದ ದಾರಿಯಲ್ಲಿ ನಡೆದು, ಕೊಹ್ಲಿ ವಿದೇಶಿ ಸರಣಿಗಳಲ್ಲಿ ಭಾರತ ತಂಡದ ಪ್ರದರ್ಶನದ ಮಟ್ಟವನ್ನೇ ಹೆಚ್ಚಿಸಿದರು ಅಂತಾನೂ ಎಬಿಡಿ ಸ್ಪಷ್ಟಪಡಿಸಿದ್ದಾರೆ. ಆದರೆ, ಅಂಕಿಅಂಶಗಳನ್ನು ನೋಡಿದರೆ ಕಥೆಯೇ ಬೇರೆ. 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿರುವ ಸಚಿನ್ ರನ್ ಬೇಟೆಯಲ್ಲಿ ಮುಂದಿದ್ದಾರೆ. ವಿಶೇಷ ಅಂದರೆ, ಸಚಿನ್ ಗಳಿಸಿದ ಒಟ್ಟು ರನ್‌ಗಳಲ್ಲಿ ಶೇ. 55ರಷ್ಟು (8,705 ರನ್) ಬಂದಿದ್ದೇ ವಿದೇಶಿ ನೆಲದಲ್ಲಿ. ಇನ್ನೊಂದೆಡೆ, 123 ಟೆಸ್ಟ್‌ಗಳಿಂದ 9,230 ರನ್ ಗಳಿಸಿರುವ ಕೊಹ್ಲಿ, ವಿದೇಶದಲ್ಲಿ ಆಡಿದ 66 ಪಂದ್ಯಗಳಿಂದ 4,774 ರನ್ ಗಳಿಸಿದ್ದಾರೆ.

SENA ದೇಶಗಳಲ್ಲೂ ಕೊಹ್ಲಿಗಿಂತ ಮುಂದಿದ್ದಾರೆ ಸಚಿನ್:

ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೇ, ಕಳೆದ ವರ್ಷವಷ್ಟೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ. ಇನ್ನು SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿನ ಪ್ರದರ್ಶನವನ್ನು ಗಮನಿಸಿದ್ರೂ ಸಚಿನ್ ಕೊಹ್ಲಿಗಿಂತಲೂ ಕೊಂಚ ಮುಂದಿದ್ದಾರೆ. ಸೆನಾ ದೇಶಗಳ ಎದುರು ಸಚಿನ್ ತೆಂಡೂಲ್ಕರ್ 63 ಪಂದ್ಯಗಳನ್ನು ಆಡಿ 17 ಶತಕ, 23 ಅರ್ಧಶತಕ ಸಹಿತ 51.30 ಬ್ಯಾಟಿಂಗ್ ಸರಾಸರಿಯಲ್ಲಿ 5387 ರನ್ ಸಿಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸೆನಾ ದೇಶಗಳ ವಿರುದ್ದ 46 ಟೆಸ್ಟ್ ಪಂದ್ಯಗಳನ್ನಾಡಿ 12 ಶತಕ, 14 ಅರ್ಧಶತಕ ಸಹಿತ 42.08ರ ಬ್ಯಾಟಿಂಗ್ ಸರಾಸರಿಯಲ್ಲಿ 3,661 ರನ್ ಬಾರಿಸಿದ್ದಾರೆ.

ಕೇವಲ ಅಂಕಿಅಂಶಗಳನ್ನು ಮೀರಿ ನೋಡಬೇಕು ಅನ್ನೋದು ಎಬಿಡಿ ವಾದ. ವಿದೇಶಿ ಟೆಸ್ಟ್ ಸರಣಿಗಳನ್ನು ಗೆಲ್ಲುವ ತಂಡವಾಗಿ ಭಾರತವನ್ನು ರೂಪಿಸಿದ್ದೇ ಕೊಹ್ಲಿಯ ನಾಯಕತ್ವ ಮತ್ತು ಅವರ ಆಟ ಅಂತ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಸಚಿನ್ ಮತ್ತು ಕೊಹ್ಲಿ ಸೃಷ್ಟಿಸಿದ ಈ ಪ್ರಭಾವ, ಈಗಿನ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಿಗೂ ಸಹಾಯ ಮಾಡುತ್ತಿದೆ ಅಂತ ಎಬಿಡಿ ಹೇಳಿದ್ದಾರೆ. ತಾಂತ್ರಿಕವಾಗಿ ಅತ್ಯುತ್ತಮ ಕೌಶಲ್ಯ ಹೊಂದಿರುವ ಕೆ.ಎಲ್. ರಾಹುಲ್ ವಿದೇಶದಲ್ಲಿ ಉತ್ತಮ ಸರಾಸರಿಯಲ್ಲಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು 100 ರನ್ ಗಳಿಸಿದರೆ ಸಾಲದು, ಅದನ್ನು 180ರವರೆಗೆ ಕೊಂಡೊಯ್ಯಲು ಗಮನ ಹರಿಸಬೇಕು ಅಂತಾನೂ ಡಿವಿಲಿಯರ್ಸ್ ಕಿವಿಮಾತು ನೀಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಚಿನ್ vs ಕೊಹ್ಲಿ: ಮಾಸ್ಟರ್ ಬ್ಲಾಸ್ಟರ್‌ ಹೆಸರಿನಲ್ಲಿರುವ ಈ ದಾಖಲೆಗಳನ್ನ ಮುರೀತಾರಾ ಚೇಸ್‌ ಮಾಸ್ಟರ್?
2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಸೆಲೆಕ್ಟ್ ಮಾಡಿದ ರಾಬಿನ್ ಉತ್ತಪ್ಪ..! ಅರ್‌ಸಿಬಿಯಿಂದ ಇಬ್ಬರು, ಏಕೈಕ ಕನ್ನಡಿಗನಿಗೆ ಸ್ಥಾನ