Vaibhav Sooryavanshi: 3 ಪಂದ್ಯ, 2 ಫಿಫ್ಟಿ, 151 ರನ್!: ಜಿಂಬಾಬ್ವೆಯಲ್ಲಿ ಕೇವಲ 4 ದಿನದಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ ಹಣವೆಷ್ಟು ಗೊತ್ತಾ?

Published : Jul 29, 2026, 09:02 PM IST
vaibhav suryavanshi

ಸಾರಾಂಶ

ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 151 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ನಾಲ್ಕು ದಿನಗಳ ಪ್ರವಾಸದಲ್ಲಿ ಪಂದ್ಯ ಶುಲ್ಕ ಮತ್ತು ಬಹುಮಾನದ ಹಣ ಸೇರಿ ಅವರು ಒಟ್ಟಾರೆ ಸಂಪಾದಿಸಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕೇವಲ 15ರ ಹರೆಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇತಿಹಾಸ ಬರೆದ ಭಾರತದ ಯುವ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ, ಕ್ರಿಕೆಟ್ ಅಂಗಳದಲ್ಲಿ ತಮ್ಮ ಸಂಚಲನವನ್ನು ಮುಂದುವರಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಬೆಂಚ್ ಕಾಯಿಸಿದ್ದ ವೈಭವ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ, ಜಿಂಬಾಬ್ವೆ ಪ್ರವಾಸದಲ್ಲಿ ಆ ಎಲ್ಲಾ ವೈಫಲ್ಯಗಳನ್ನು ಭರ್ಜರಿಯಾಗಿ ಮೆಟ್ಟಿ ನಿಂತಿದ್ದಾರೆ.

ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸೂರ್ಯವಂಶಿ!

ಜಿಂಬಾಬ್ವೆ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಬ್ಯಾಟ್‌ನಿಂದ ರನ್ ಹೊಳೆ ಹರಿಯಿತು. ಮೊದಲ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಭರ್ಜರಿ 50 ರನ್ ಬಾರಿಸಿದ ಅವರು, ಎರಡನೇ ಪಂದ್ಯದಲ್ಲಿ 9 ಎಸೆತಗಳಲ್ಲಿ ಚುರುಕಾದ 20 ರನ್ ಗಳಿಸಿದರು. ಇನ್ನು ಮೂರನೇ ಪಂದ್ಯದಲ್ಲಂತೂ 49 ಎಸೆತಗಳಲ್ಲಿ ಭರ್ಜರಿ 81 ರನ್ ಚಚ್ಚಿದರು. ಒಟ್ಟಾರೆಯಾಗಿ ಈ ಸರಣಿಯ ಮೂರು ಪಂದ್ಯಗಳಲ್ಲಿ 50.33 ರ ಸರಾಸರಿ ಹಾಗೂ 180 ರ ಪ್ರಚಂಡ ಸ್ಟ್ರೈಕ್ ರೇಟ್‌ನಲ್ಲಿ 151 ರನ್ ಕಲೆಹಾಕಿದ ವೈಭವ್, ಮೂರನೇ ಪಂದ್ಯದ 'ಪಂದ್ಯಶ್ರೇಷ್ಠ' ಹಾಗೂ ಇಡೀ ಸರಣಿಯ 'ಸರಣಿಶ್ರೇಷ್ಠ' ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

4 ದಿನದ ಸರಣಿಯಲ್ಲಿ ಬಂತು ಭಾರೀ ಬಹುಮಾನ!

ಕೇವಲ ನಾಲ್ಕು ದಿನಗಳ ಕಾಲ ನಡೆದ ಈ ಸರಣಿಯಲ್ಲಿ ವೈಭವ್ ರನ್ ಅಷ್ಟೇ ಅಲ್ಲದೆ ಭಾರಿ ಮೊತ್ತದ ಬಹುಮಾನವನ್ನೂ ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ. ಮೂರನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗಾಗಿ 1 ಸಾವಿರ ಡಾಲರ್ ಅಂದರೆ ಸುಮಾರು 83,500 ರೂಪಾಯಿಗಳನ್ನು ಪಡೆದಿದ್ದರೆ, ಸರಣಿಶ್ರೇಷ್ಠ ಪ್ರಶಸ್ತಿಗೆ 2 ಸಾವಿರ ಡಾಲರ್ ಅಂದರೆ ಸುಮಾರು 1.67 ಲಕ್ಷ ರೂಪಾಯಿಗಳನ್ನು ತಮ್ಮದಾಗಿಸಿಕೊಂಡರು. ಇದರ ಜೊತೆಗೆ ಅಂತರರಾಷ್ಟ್ರೀಯ ಟಿ20 ಪಂದ್ಯಕ್ಕೆ ಬಿಸಿಸಿಐ ನೀಡುವ 3 ಲಕ್ಷ ರೂಪಾಯಿ ಪಂದ್ಯ ಶುಲ್ಕದಂತೆ, ಮೂರು ಪಂದ್ಯಗಳಿಗೆ ಒಟ್ಟು 9 ಲಕ್ಷ ರೂಪಾಯಿ ಪಡೆದಿದ್ದಾರೆ. ಹೀಗಾಗಿ ಜಿಂಬಾಬ್ವೆಯ ಕೇವಲ ನಾಲ್ಕು ದಿನಗಳ ಪ್ರವಾಸದಿಂದ ವೈಭವ್ ಸೂರ್ಯವಂಶಿ ಒಟ್ಟಾರೆಯಾಗಿ 11.87 ಲಕ್ಷಕ್ಕೂ ಅಧಿಕ ಹಣವನ್ನು ಗಳಿಸಿದಂತಾಗಿದೆ.

ಐಪಿಎಲ್‌ನಲ್ಲೂ ಅಭೂತಪೂರ್ವ ಯಶಸ್ಸು!

ಜಿಂಬಾಬ್ವೆ ಸರಣಿಗೂ ಮುನ್ನ ನಡೆದ 2026ರ ಐಪಿಎಲ್ ಋತುವಿನಲ್ಲೂ ವೈಭವ್ ಅಭೂತಪೂರ್ವ ಯಶಸ್ಸು ಕಂಡಿದ್ದರು. ಆರೆಂಜ್ ಕ್ಯಾಪ್, ಉದಯೋನ್ಮುಖ ಆಟಗಾರ, ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಮತ್ತು ಅತ್ಯಂತ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಸೇರಿದಂತೆ ಐದು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಐಪಿಎಲ್ ಹರಾಜಿನಲ್ಲಿ 1.10 ಕೋಟಿ ರೂಪಾಯಿ ಬೆಲೆ ಪಡೆದಿದ್ದ ಇವರು, 1.12 ಕೋಟಿ ರೂಪಾಯಿ ಪಂದ್ಯ ಶುಲ್ಕ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 55 ಲಕ್ಷ ರೂಪಾಯಿ ಬಹುಮಾನದ ಜೊತೆಗೆ ಒಂದು ಹೊಸ ಕಾರನ್ನೂ ಪಡೆದಿದ್ದರು. ಈ ಮೂಲಕ ಐಪಿಎಲ್ ಒಂದರಲ್ಲೇ ಅವರು ಒಟ್ಟು 2.77 ಕೋಟಿ ರೂಪಾಯಿ ಸಂಪಾದಿಸಿ ಎಲ್ಲರ ಹುಬ್ಬೇರಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಗಾಯ; ಬೆಂಕಿಗೆ ತುಪ್ಪ ಸುರಿಯುವಂತೆ ಸವಾಲು ಹಾಕಿದ ಗ್ಲೆನ್ ಮೆಕ್‌ಗ್ರಾತ್!
Vaibhav Sooryavanshi: ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾದ ವೈಭವ್; ಟೀಮ್ ಇಂಡಿಯಾದ ಯುವ ಪ್ರತಿಭೆಗೆ ಉಪನಾಯಕನ ಪಟ್ಟ!