ರಿಷಭ್ ಪಂತ್ ಅಬ್ಬರಕ್ಕೆ ಥಂಡಾ ಹೊಡೆದ ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ..!

Published : Jul 20, 2022, 02:08 PM IST
ರಿಷಭ್ ಪಂತ್ ಅಬ್ಬರಕ್ಕೆ ಥಂಡಾ ಹೊಡೆದ ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ..!

ಸಾರಾಂಶ

2022ರಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ರಿಷಭ್‌ ಪಂತ್ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಹಿಂದಿಕ್ಕಿರುವ ವಿಕೆಟ್ ಕೀಪರ್ ಬ್ಯಾಟರ್ ಹೆಚ್ಚು ಟೀಕೆ ಮತ್ತು ಹೆಚ್ಚು ಪ್ರಶಂಸೆಗೆ ಒಳಗಾದ ಆಟಗಾರ

ಬೆಂಗಳೂರು(ಜು.20): ರಿಷಭ್​​ ಪಂತ್​ರನ್ನ ಟೆಸ್ಟ್​​​​​ನಲ್ಲಷ್ಟೇ ಆಡಿಸಬೇಕು. ಏಕದಿನ ಮತ್ತು ಟಿ20 ಫಾಮ್ಯಾಟ್​​ನಲ್ಲಿ ಅವರು ತಂಡಕ್ಕೆ ಭಾರ. ಆಟದಲ್ಲಿ ಸಿರೀಸ್​ನೆಸ್​​​ ಇಲ್ಲದವನನ್ನು ಟೀಂ​ ಇಂಡಿಯಾದಿಂದ ಶೀಘ್ರವೇ ಕೈಬಿಡಬೇಕು ಅಂತೆಲ್ಲಾ ವಿರೋಧಿಗಳು ರಿಷಭ್ ಪಂತ್​ ಮೇಲೆ ಮುಗಿಬಿದ್ದಿದ್ರು. ಆದ್ರೆ ಇಂಗ್ಲೆಂಡ್​ ವಿರುದ್ಧ ಫೈನಲ್​​ ಒನ್ಡೇಯಲ್ಲಿ ರಿಷಭ್​ ಸೆಂಚುರಿ ಸಿಡಿಸಿ ಏಕದಿನ ಸರಣಿ ಗೆಲ್ಲಿಸಿಕೊಟ್ರು. ಆ ಬಳಿಕ ಇವರ ಬಗೆಗಿದ್ದ ಒಪಿನಿಯನ್​ ಫುಲ್​ ಬದಲಾಗಿದೆ. ರಿಷಭ್ ಪಂತ್​ರನ್ನ ಮ್ಯಾಚ್ ವಿನ್ನರ್​​​, ಡೇರಿಂಗ್​​​​ ಬ್ಯಾಟರ್​​ ತಂಡಕ್ಕೆ ಅಗತ್ಯ ಎಂತೆಲ್ಲಾ ಗುಣಗಾನ ಮಾಡಲಾಗ್ತಿದೆ.  

ನಿಜಕ್ಕೂ ಲೆಫ್ಟಿಮ್ಯಾನ್​​ ಹೆಚ್ಚು ಟೀಕೆ ಮತ್ತು ಹೆಚ್ಚು ಪ್ರಶಂಸೆಗೆ ಒಳಗಾದ ಆಟಗಾರ ಅಂದ್ರೂ ತಪ್ಪಲ್ಲ. ಯಾಕಂದ್ರೆ ಪಂತ್‌ ಟೀಕೆಗಳಷ್ಟೇ ಶಹಬ್ಬಾಸ್​​​ ಕೂಡ ಗಿಟ್ಟಿಸಿಕೊಂಡಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕಂದ್ರೆ 2022ರಲ್ಲಿ ಪಂತ್​ ಮೇನಿಯಾ. ಈ ವರ್ಷ ಹಿಟ್​​ಮ್ಯಾನ್​​​ ರೋಹಿತ್ ಶರ್ಮಾ​ ಹಾಗೂ ಕಿಂಗ್​ ಕೊಹ್ಲಿಯಂತ ದಿಗ್ಗಜರೇ ರಿಷಭ್‌ ಪಂತ್​​​ ಘರ್ಜನೆ ಮುಂದೆ ಸೈಲೆಂಟಾಗಿದ್ದಾರೆ.

ಈ ವರ್ಷ ಹೆಚ್ಚು ರನ್​​, ಹೆಚ್ಚು ಬಾಲ್​ ಎದುರಿಸಿದ್ದು ಪಂತ್: 

ಹೌದು, ಅಚ್ಚರಿ ಅನ್ನಿಸಿದ್ರೂ ಸತ್ಯ. ಈ ವರ್ಷ ಟೀಂ ಇಂಡಿಯಾ ಪರ ಮೂರು ಫಾಮ್ಯಾಟ್​ನಲ್ಲಿ ಅಧಿಕ ರನ್​ ಬಾರಿಸಿದ್ದು ರಿಷಭ್ ಪಂತ್​​. ಈ ವರ್ಷ ಪಂತ್ ಒಟ್ಟು 988 ರನ್​​ ಬಾರಿಸಿದ್ದಾರೆ. ಈ ರೇಸ್​​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾರನ್ನೇ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೇ ಈ ವರ್ಷ ಹೆಚ್ಚು ಬಾಲ್ ಫೇಸ್​ ಮಾಡಿದ ಖ್ಯಾತಿ ಕೂಡ ಇವರ ಹೆಸರಿಗಿದೆ.

ಗುರು ಕಾಣಿಕೆ..! ಮಾಜಿ ಕೋಚ್ ರವಿಶಾಸ್ತ್ರಿಗೆ ಶಾಂಫೇನ್ ಗಿಫ್ಟ್ ಕೊಟ್ಟ ರಿಷಭ್ ಪಂತ್..! ವಿಡಿಯೋ ವೈರಲ್

ಅಧಿಕ ಶತಕ, ಬೌಂಡ್ರಿ-ಸಿಕ್ಸ್​ ಸಿಡಿಸಿದ್ದು ಲೆಫ್ಟಿಮ್ಯಾನ್​: 

ಇನ್ನು ಬರೀ ಅತಿ ಹೆಚ್ಚು ರನ್​ ಅಷ್ಟೇ ಅಲ್ಲ, ಈ ವರ್ಷ ಅಧಿಕ ಶತಕ ಬಾರಿಸಿದ ಖ್ಯಾತಿ ಕೂಡ ಪಂತ್​ರದ್ದು. ಇವರು ಒಟ್ಟು 2 ಸೆಂಚುರಿ ಬಾರಿಸಿದ್ದಾರೆ. ಎರಡೂ ಕೂಡ ಇತ್ತೀಚೆಗೆ ಮುಗಿದ ಇಂಗ್ಲೆಂಡ್​​ ಪ್ರವಾಸದಲ್ಲೇ ಮೂಡಿ ಬಂದಿವೆ. ಇನ್ನು 2022ರಲ್ಲಿ ಪಂತ್​ ದಾಖಲೆಯ 64 ಬೌಂಡ್ರಿ ಹಾಗೂ 12 ಸಿಕ್ಸ್​​ ಬಾರಿಸಿದ್ದಾರೆ. 

ಅತಿ ಹೆಚ್ಚು ಡಕ್​​​ ಮತ್ತು  ಡಿಸ್ಮಿಸಲ್ಸ್​​​​​: 

ಈ ವರ್ಷ ಆರಂಭಗೊಂಡು 7 ತಿಂಗಳಲ್ಲಿ ರಿಷಭ್​ ಪಂತ್ ಒಟ್ಟು ಮೂರು ಬಾರಿ ಶೂನ್ಯ ಸುತ್ತಿದ್ದಾರೆ. ಇವರನ್ನ ಬಿಟ್ರೆ ಯಾರೊಬ್ಬರು ಕೂಡ ಇಷ್ಟೊಂದು ಸಲ ಡಕೌಟ್ ಆಗಿಲ್ಲ. ಇನ್ನು 25 ಬಾರಿ ಡಿಸ್ಮಿಸಲ್ಸ್​ ಆದ ಅಪಖ್ಯಾತಿಗೂ ಇವರ ಭಾಜನರಾಗಿದ್ದಾರೆ. ಇದಿಷ್ಟೇ ಅಲ್ಲದೇ ಅತಿ ಹೆಚ್ಚು ಕ್ಯಾಚ್​ ಮತ್ತು ಸ್ಟಂಪಿಂಗ್ಸ್​ ದಾಖಲೆ ಕೂಡ ಇವರ ಪಂತ್ ಹೆಸರಿನಲ್ಲಿದೆ. ಸೋ ಫೈನಲಿ ನಿಮಗೀಗ ಅರ್ಥ ಆಗಿರ್ಬೇಕು ಅಲ್ವಾ? ಆರಂಭದಲ್ಲೇ ನಾವು ಏಕೆ ಪಂತ್​​  ಹೆಚ್ಚು ಟೀಕೆ ಮತ್ತು ಹೆಚ್ಚು ಪ್ರಶಂಸೆಗೆ ಒಳಗಾದ ಆಟಗಾರ ಎಂದು ಹೇಳಿದ್ವಿ ಅಂತ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ