
ಕಟಕ್ (ಡಿ.09) ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರದ ಪ್ರದರ್ಶನಕ್ಕೆ ಸೌತ್ ಆಫ್ರಿಕಾ ಬೆಚ್ಚಿ ಬಿದ್ದಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಭಾರತ 176 ರನ್ ಟಾರ್ಗೆಟ್ ನೀಡಿತ್ತು. ಬಳಿಕ ಬೌಲಿಂಗ್‌ನಲ್ಲಿ ಮಿಂಚಿನ ದಾಳಿ ಸಂಘಟಿಸಿತ್ತು. ಇದರ ಪರಿಣಾಮ ಸೌತ್ ಆಫ್ರಿಕಾ ಕೇವಲ 12.3 ಓವರ್‌ಗಳಲ್ಲಿ ಕೇವಲ 74 ರನ್‌ಗೆ ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾ ಬರ್ಜರಿ 101 ರನ್ ಗೆಲುವು ಕಂಡಿದೆ.
ಸೌತ್ ಆಫ್ರಿಕಾ 176 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದಿತ್ತು. ಆದರ್ ಅರ್ಶದೀಪ್ ಸಿಂಗ್ ಮಾರಕ ದಾಳಿಗೆ ಕ್ವಿಂಟನ್ ಡಿಕಾಕ್ ವಿಕೆಟ್ ಉರುಳಿ ಬಿದ್ದಿತ್ತು. ಸೌತ್ ಆಫ್ರಿಕಾ 2 ಎಸೆತ ಎದುರಿಸಿತ್ತು. ಆದರೆ ರನ್ ಖಾತೆ ತೆರೆದಿರಲಿಲ್ಲ. ಅಷ್ಟರಲ್ಲೇ ಡಿಕಾಕ್ ವಿಕೆಟ್ ಪತನಗೊಂಡಿತ್ತು. ತ್ರಿಸ್ಟನ್ ಸ್ಟಬ್ಸ್ 14 ರನ್ ಸಿಡಿಸಿ ನಿರ್ಗಮಿಸಿದರೆ, ಇತ್ತ ನಾಯಕ ಆ್ಯಡಿನ್ ಮರ್ಕರ್ಮ್ 14 ರನ್ ಸಿಡಿಸಿ ನಿರ್ಗಮಿಸಿದರು. ಭಾರತದ ದಾಳಿ ಮುಂದುವರಿದಿತ್ತು. ಡೆವಾಲ್ಡ್ ಬ್ರಿವಿಸ್ 22 ರನ್ ಸಿಡಿಸಿ ಹೋರಾಟ ನೀಡುವ ಸೂಚನೆ ನೀಡಿದರು. ಆದರೆ ಸಾಧ್ಯವಾಗಲಿಲ್ಲ. ಡೇವಿರ್ ಮಿಲ್ಲರ್, ಮಾರ್ಕೋ ಜಾನ್ಸೆನ್, ಕೇಶವ್ ಮಹಾರಾಜ್ ಸೇರಿದಂತೆ ಸೌತ್ ಆಫ್ರಿಕಾ ಪಡೆ ಹೋರಾಟ ನೀಡಲು ಸಾಧ್ಯವಾಗಲಿಲ್ಲ.
ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ ಹಾಗೂ ಶಿವ ದುಬೆ ಬೌಲಿಂಗ್ ದಾಳಿ ಸಂಘಟಿಸಿದ್ದರು. ಎಲ್ಲರೂ ವಿಕೆಟ್ ಕಬಳಿಸಿದ್ದಾರೆ. ಈ ಪೈಕಿ ಹಾರ್ದಿಕ್ ಪಾಂಡ್ಯ ಹಾಗೂ ದುಬೆ ತಲಾ ಒಂದೊಂದು ವಿಕೆಟ್ ಕಬಳಿಸಿದರೆ ಇತರರು ತಲಾ 2 ವಿಕೆಟ್ ಕಬಳಿಸಿದರು. ಇದರಿಂದ ಸೌತ್ ಆಫ್ರಿಕಾಾ 12.3 ಓವರ್‌ಗಳಲ್ಲಿ 74 ರನ್‌ಗೆ ಆಲೌಟ್ ಆಯಿತು. ಭಾರತ 101 ರನ್ ಗೆಲುವು ದಾಖಲಿಸಿತು.
100 ರನ್ ಗಡಿದಾಟಿಸಲು ಸೌತ್ ಆಫ್ರಿಕಾ ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಆದರೆ ಭಾರತೀಯ ಬೌಲರ್ ಅವಕಾಶ ನೀಡಲಿಲ್ಲ. ಭಾರತ ವಿರುದ್ದ ಸೌತ್ ಆಫ್ರಿಕಾ 4ನೇ ಅತ್ಯಲ್ಪಮೊತ್ತಕ್ಕ ಆಲೌಟ್ ಆದ ಮುಖಂಭ ಅನುಭವಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.