ಬಾಗೇಶ್ವರ ಧಾಮದಲ್ಲಿ ಧೀರೇಂದ್ರ ಶಾಸ್ತ್ರಿ ಪಾದ ಮುಟ್ಟಿ ನಮಸ್ಕರಿಸಿದ ಕ್ರಿಕೆಟಿಗ ಕುಲದೀಪ್‌ ಯಾದವ್‌!

Published : Jul 06, 2023, 07:15 PM IST
ಬಾಗೇಶ್ವರ ಧಾಮದಲ್ಲಿ ಧೀರೇಂದ್ರ ಶಾಸ್ತ್ರಿ ಪಾದ ಮುಟ್ಟಿ ನಮಸ್ಕರಿಸಿದ ಕ್ರಿಕೆಟಿಗ ಕುಲದೀಪ್‌ ಯಾದವ್‌!

ಸಾರಾಂಶ

ಟೀಮ್‌ ಇಂಡಿಯಾ ಸ್ಟಾರ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಇತ್ತೀಚೆಗೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿರುವ ಬಾಗೇಶ್ವರ ಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ಬಾಬಾ ಧೀರೇಂದ್ರ ಶಾಸ್ತ್ರೀ ಅಶೀರ್ವಾದ ಪಡೆದುಕೊಂಡರು. ಈ ಫೋಟೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

ನವದೆಹಲಿ (ಜು.6): ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಐದು ಪಂದ್ಯಗಳ ಟಿ20 ಸರಣಿ ಆಡಲಿರುವ ಭಾರತ ತಂಡಕ್ಕೆ 15 ಸದಸ್ಯರ ಟೀಮ್‌ಅನ್ನು ಬುಧವಾರ ಪ್ರಕಟಿಸಲಾಗಿದೆ. ಟೀಮ್‌ ಇಂಡಿಯಾದ ಸ್ಟಾರ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಕೊನೆಯದಾಗಿ ಟೀಮ್‌ ಇಂಡಿಯಾ ಪರ ಆಡಿದ್ದ ಕುಲದೀಪ್‌ ಯಾದವ್‌ ಆ ಬಳಿಕ, ಗಾಯ ಹಾಗೂ ಕಳಪೆ ಫಾರ್ಮ್‌ನ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದರು. ತಂಡಕ್ಕೆ ವಾಪಾಸಾಗುವ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಈ ಹಂತದಲ್ಲಿ ನಡೆದ ಐಪಿಎಲ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಕುಲದೀಪ್‌ ಯಾದವ್‌ ಆಡಿದ 14 ಪಂದ್ಯಗಳಿಂದ 10 ವಿಕೆಟ್‌ಗಳನ್ನು ಉರುಳಿಸಿದ್ದರು. ವೆಸ್ಟ್‌ ಇಂಡೀಸ್‌ ಪ್ರವಾಸದ ಟಿ20 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲಿಯೇ 28 ವರ್ಷದ ಸ್ಪಿನ್ನರ್‌ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿರುವ ಬಾಗೇಶ್ವರ ಧಾಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಧಾರ್ಮಿಕ ನಾಯಕ ಬಾಬಾ ಧೀರೇಂದ್ರ ಕುಮಾರ್ ಶಾಸ್ತ್ರೀ ಅವರನ್ನು ಭೇಟಿಯಾಗಿ ಪಾದಮುಟ್ಟಿ ನಮಸ್ಕಾರ ಪಡೆದರು.

ಧೀರೇಂದ್ರ ಶಾಸ್ತ್ರಿ ಅವರ ಪಾದಗಳ ಪಕ್ಕದಲ್ಲಿ ಕುಲದೀಪ್ ಕೈ ಜೋಡಿಸಿ ಕುಳಿತಿರುವ ವಿವಿಧ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. "ಭಾರತೀಯ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಮತ್ತು ನಮ್ಮ ಸರ್ಕಾರದ ಪ್ರೀತಿ ಹೊಂದಿರುವ ಕುಲದೀಪ್ ಯಾದವ್ ಅವರು ನಮ್ಮ ನಾಯಕರ ಜನ್ಮದಿನವನ್ನು ಆಚರಿಸಲು ಧಾಮ್‌ಗೆ ಭೇಟಿ ನೀಡಿದರು ಮತ್ತು ಅವರ ಆಶೀರ್ವಾದವನ್ನೂ ಪಡೆದರು" ಎಂದು ಬಾಗೇಶ್ವರ್ ಧಾಮ್ ಸರ್ಕಾರ್ ಅವರ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಕುಲದೀಪ್ ಹೊರತಾಗಿ ಯುಜ್ವೇಂದ್ರ ಚಹಾಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಕೂಡ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರಂತಹ ಯುವ ಆಟಗಾರರು ಕೂಡ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ

ಟೆಸ್ಟ್ ಮತ್ತು ಏಕದಿನ ತಂಡಗಳಲ್ಲೂ ಸ್ಥಾನ ಪಡೆದಿರುವ ಮುಖೇಶ್ ಕುಮಾರ್, ಟಿ20 ಟೀಮ್‌ ಕರೆಯನ್ನೂ ಪಡೆದಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ ಸಹ ವಿಕೆಟ್ ಕೀಪರ್ ಆಗಿ ತಂಡಕ್ಕೆ ಮರಳಿದರು. ದುರದೃಷ್ಟವಶಾತ್ ಜಿತೇಶ್ ಶರ್ಮಾ ಮತ್ತು ರಿಂಕು ಸಿಂಗ್ ಅವರಿಗೆ ತಂಡದಲ್ಲಿ ಅವಕಾಶ ನೀಡಿಲ್ಲ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌