T20 World Cup ಆ್ಯಂಬ್ರೋಸ್‌ ಬಗ್ಗೆ ನನಗ್ಯಾವ ಗೌರವವೂ ಇಲ್ಲವೆಂದ ಕ್ರಿಸ್‌ ಗೇಲ್‌..!

Suvarna News   | Asianet News
Published : Oct 15, 2021, 08:51 AM IST
T20 World Cup ಆ್ಯಂಬ್ರೋಸ್‌ ಬಗ್ಗೆ ನನಗ್ಯಾವ ಗೌರವವೂ ಇಲ್ಲವೆಂದ ಕ್ರಿಸ್‌ ಗೇಲ್‌..!

ಸಾರಾಂಶ

* ವಿಂಡೀಸ್ ದಿಗ್ಗಜ ಆಟಗಾರ ಕರ್ಟ್ಲಿ ಆ್ಯಂಬ್ರೋಸ್‌ ಮೇಲೆ ಕಿಡಿಕಾರಿದ ಕ್ರಿಸ್ ಗೇಲ್ * ಕರ್ಟ್ಲಿ ಆ್ಯಂಬ್ರೋಸ್‌ ಕುರಿತು ನನಗ್ಯಾವ ಗೌರವವೂ ಇಲ್ಲವೆಂದ ಯೂನಿವರ್ಸಲ್‌ ಬಾಸ್ * ಕ್ರಿಸ್‌ ಗೇಲ್‌ಗೆ ಬುದ್ದಿವಾದ ಹೇಳಿದ ಸರ್ ವೀವ್ ರಿಚರ್ಡ್ಸ್‌

ದುಬೈ(ಅ.15): ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗರಾದ ಕರ್ಟ್ಲಿ ಆ್ಯಂಬ್ರೋಸ್‌ ಹಾಗೂ ಕ್ರಿಸ್‌ ಗೇಲ್‌ (Chris Gayle) ನಡುವೆ ತೀವ್ರ ತಿಕ್ಕಾಟ ಏರ್ಪಟ್ಟಿದೆ. ಗೇಲ್‌ ವಿಂಡೀಸ್‌ ತಂಡದ ಆಡುವ ಹನ್ನೊಂದರ ಬಳಗದ ಮೊದಲ ಆಯ್ಕೆಯ ಆಟಗಾರನಲ್ಲವೆಂದು ಕರ್ಟ್ಲಿ ಆ್ಯಂಬ್ರೋಸ್ (Curtly Ambrose) ನೀಡಿದ ಹೇಳಿಕೆ ಇದೀಗ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದವೊಂದರಲ್ಲಿ ವಿಂಡೀಸ್‌ ಮಾಜಿ ವೇಗದ ಬೌಲರ್‌ ಕರ್ಟ್ಲಿ ಆ್ಯಂಬ್ರೋಸ್‌, ಮುಂಬರುವ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಕ್ರಿಸ್‌ ಗೇಲ್‌ ವೆಸ್ಟ್ ಇಂಡೀಸ್ ತಂಡದ ಮೊದಲ ಆಯ್ಕೆಯ ಆಡುವ ಹನ್ನೊಂದರ ಬಳಗದ ಆಟಗಾರನಾಗುವುದು ಅನುಮಾನ ಎಂದಿದ್ದರು. ಇದಕ್ಕೆ ಗೇಲ್ ತಿರುಗೇಟು ನೀಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಗೇಲ್‌ ವಿಂಡೀಸ್‌ನ ಆಡುವ ಹನ್ನೊಂದರಲ್ಲಿ ಮೊದಲ ಆಯ್ಕೆ ಆಗಿರಲಾರರು ಎನ್ನುವ ಆ್ಯಂಬ್ರೋಸ್‌ರ ಹೇಳಿಕೆಗೆ ಸಿಟ್ಟಾಗಿರುವ ಗೇಲ್‌, ‘ಆ್ಯಂಬ್ರೋಸ್‌ ಬಗ್ಗೆ ನನಗೆ ಗೌರವವಿಲ್ಲ. ಅವರಿಗೆ ಮರ್ಯಾದೆಯೂ ಕೊಡುವುದಿಲ್ಲ. ಅವರು ನನ್ನ ಎದುರಿಗೆ ಬಂದರೆ ಇದನ್ನೇ ಹೇಳುತ್ತೇನೆ’ ಎಂದಿದ್ದಾರೆ.

ನಾನು ವೆಸ್ಟ್ ಇಂಡೀಸ್‌ ತಂಡಕ್ಕೆ (West Indies Cricket Team) ಪಾದಾರ್ಪಣೆ ಮಾಡಿದಾಗ ಕರ್ಟ್ಲಿ ಆ್ಯಂಬ್ರೋಸ್ ಬಗ್ಗೆ ಸಾಕಷ್ಟು ಗೌರವವನ್ನು ಹೊಂದಿದ್ದೆ. ಆದರೆ ನಾನೀಗ ಹೃದಯದ ಅಂತರಾಳದಿಂದ ಹೇಳುತ್ತೇನೆ. ಅವರು ನಿವೃತ್ತಿ ಪಡೆದ ಬಳಿಕ ಅವರಿಗೆ ಏನಾಗಿದೆ ಎಂದು ನನಗೆ ತಿಳಿಯುತ್ತಿಲ್ಲ. ಮಾಧ್ಯಮಗಳ ಮುಂದೆ ಯಾಕಾಗಿ ಈ ರೀತಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿಯುತ್ತಿಲ್ಲ. ಸುದ್ದಿಯಲ್ಲಿರಲು, ಮಾಧ್ಯಮದವರ ಗಮನ ಸೆಳೆಯಲು ಹೀಗೆ ಮಾಡುತ್ತಿರಬೇಕು. ಅದಕ್ಕಾಗಿಯೇ ನಾನೂ ಅವರಿಗೆ ಬೇಕಾದ ರೀತಿಯಲ್ಲಿಯೇ ತಿರುಗೇಟು ನೀಡಿದ್ದೇನೆ ಎಂದು ಕ್ರಿಸ್‌ ಗೇಲ್ ಹೇಳಿದ್ದಾರೆ. 

2012, 2016ರಲ್ಲಿ ಟಿ20 ವಿಶ್ವಕಪ್‌ ಗೆದ್ದಿದ್ದ ವಿಂಡೀಸ್‌ ತಂಡದಲ್ಲಿದ್ದ ಕ್ರಿಸ್‌ ಗೇಲ್‌, ಈ ಬಾರಿಯೂ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವ ಉತ್ಸಾಹದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ವಿಂಡೀಸ್‌ನ ಮಾಜಿ ಕ್ರಿಕೆಟಿಗರು ನಕಾರಾತ್ಮಕವಾಗಿ ಮಾತನಾಡುವುದು, ತಂಡವನ್ನು ಬೆಂಬಲಿಸದೆ ಇರುವುದನ್ನು ಮುಂದುವರಿಸಿದರೆ ಅಂಥವರನ್ನು ಗೌರವಿಸುವುದಿಲ್ಲ ಎಂದು ಯೂನಿವರ್ಸಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ ಹೇಳಿದ್ದಾರೆ.

ಐಪಿಎಲ್ ಹೊಸ 2 ತಂಡಗಳ ಖರೀದಿಗೆ ಭಾರೀ ಡಿಮ್ಯಾಂಡ್‌..!

ಕರ್ಟ್ಲಿ ಆ್ಯಂಬ್ರೋಸ್ ಬೆಂಬಲಕ್ಕೆ ಬಂದ ವೀವ್ ರಿಚರ್ಡ್ಸ್: ಕರ್ಟ್ಲಿ ಆ್ಯಂಬ್ರೋಸ್ ವಿರುದ್ದ ಕಿಡಿಕಾರಿದ್ದ ಕ್ರಿಸ್‌ ಗೇಲ್‌ಗೆ ವಿಂಡೀಸ್ ದಿಗ್ಗಜ ಕ್ರಿಕೆಟಿಗ ಸರ್ ವೀವ್ ರಿಚರ್ಡ್ಸ್‌ (Viv Richards) ಬುದ್ದಿ ಹೇಳಿದ್ದು, ಸಹ ಆಟಗಾರರಾಗಿದ್ದ ಕರ್ಟ್ಲಿ ಆ್ಯಂಬ್ರೋಸ್ ಬೆಂಬಲಕ್ಕೆ ನಿಂತಿದ್ದಾರೆ. 

ಇದು ಕರ್ಟ್ಲಿ ಆ್ಯಂಬ್ರೋಸ್ ಅವರ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಎಷ್ಟು ಸಾಧನೆಯನ್ನು ಮಾಡಿದ್ದಾರೋ, ಅವರಷ್ಟೇ ಸಾಧನೆಯನ್ನು ಕರ್ಟ್ಲಿ ಆ್ಯಂಬ್ರೋಸ್ ಕೂಡಾ ಮಾಡಿದ್ದಾರೆ. ಹಾಗಾಗಿ ಅವರಿಗೂ ಗೌರವ ಸಲ್ಲಬೇಕು. ಒಬ್ಬ ಸಾಧಕನ ಬಾಯಿಂದ ಇಂತಹದ್ದೊಂದು ಅಭಿಪ್ರಾಯ ಬಂದಿದೆಯೆಂದರೆ, ಇನ್ನೊಬ್ಬ ದಿಗ್ಗಜನಾಗಿರುವ ಕ್ರೀಡಾಪಟು ಗೌರವಪೂರ್ವಕವಾಗಿಯೇ ಪ್ರತಿಕ್ರಿಯೆ ನೀಡಬೇಕು ಎಂದು ಸರ್ ವೀವ್ ರಿಚರ್ಡ್ಸ್‌ ಯೂನಿವರ್ಸೆಲ್ ಬಾಸ್ ಖ್ಯಾತಿಯ ಗೇಲ್ ಕಿವಿ ಹಿಂಡಿದ್ದಾರೆ.

T20 World Cup ಟೂರ್ನಿಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..!

ಒಂದು ವೇಳೆ ನಾನು ಕ್ರಿಸ್‌ ಗೇಲ್ ಆಗಿದ್ದರೆ, ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದೆ. ಇಂತಹ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡು ಆಟದ ಮೂಲಕ ಉತ್ತರ ಕೊಡುತ್ತಿದ್ದೆ. ಕೇವಲ ಕರ್ಟ್ಲಿ ಆ್ಯಂಬ್ರೋಸ್ ಮಾತ್ರವಲ್ಲ ಹಲವರು ಗೇಲ್ ಅವರಿಗೆ ವಿಂಡೀಸ್‌ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿವೆ. ನನ್ನ ಪ್ರಕಾರ ಕ್ರಿಸ್ ಗೇಲ್ ಈಗಲೂ ಕೂಡಾ ಉತ್ತಮ ಆಟಗಾರ ಎನ್ನುವುದು ನನ್ನ ಅಭಿಪ್ರಾಯ. ಇಂತಹ ಟೀಕೆಗಳನ್ನು ಸ್ಪೂರ್ತಿಯನ್ನಾಗಿಸಿಕೊಂಡು ಆಡಬೇಕು ಎಂದು ಗೇಲ್‌ಗೆ ವೀವ್ ರಿಚರ್ಡ್ಸ್‌ ಸಲಹೆ ನೀಡಿದ್ದಾರೆ.

ಕ್ರಿಸ್‌ ಗೇಲ್‌ 2021ರಲ್ಲಿ ವಿಂಡೀಸ್ ಪರ 16 ಟಿ20 ಪಂದ್ಯಗಳನ್ನಾಡಿ 17.46ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 227 ರನ್‌ ಬಾರಿಸಿದ್ದಾರೆ. ಇನ್ನು ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್ ತಂಡವು ಅಕ್ಟೋಬರ್‌ 23ರಂದು ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!