ಟಿ20 ವಿಶ್ವಕಪ್ ಸೂಪರ್-8 ಲೆಕ್ಕಾಚಾರ: ಎರಡು ಸ್ಥಾನಕ್ಕಾಗಿ 4 ತಂಡಗಳ ನಡುವೆ ಬಿಗ್ ಫೈಟ್..!

Published : Jun 15, 2024, 12:05 PM ISTUpdated : Jun 15, 2024, 01:31 PM IST
ಟಿ20 ವಿಶ್ವಕಪ್ ಸೂಪರ್-8 ಲೆಕ್ಕಾಚಾರ: ಎರಡು ಸ್ಥಾನಕ್ಕಾಗಿ 4 ತಂಡಗಳ ನಡುವೆ ಬಿಗ್ ಫೈಟ್..!

ಸಾರಾಂಶ

ಸದ್ಯ 20 ತಂಡಗಳ ಪೈಕಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಆಪ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳು ಸೂಪರ್‌-8 ಹಂತ ಪ್ರವೇಶಿಸಿವೆ. ಇನ್ನುಳಿದ 2 ಸ್ಥಾನಕ್ಕಾಗಿ 4 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುತ್ತಿದೆ. ರೇಸ್‌ನಲ್ಲಿರುವ ತಂಡಗಳು ಯಾವುವು? ಮುಂದಿನ ಹಂತದ ಪೈಪೋಟಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಬಾರ್ಬಡೊಸ್‌: ಈ ಬಾರಿ ಟಿ20 ವಿಶ್ವಕಪ್‌ನ ಲೀಗ್‌ ಪಂದ್ಯಗಳು ಮುಕ್ತಾಯದ ಹಂತ ತಲುಪಿದ್ದು, ಸೂಪರ್‌-8ಕ್ಕೇರಲು ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಸದ್ಯ 20 ತಂಡಗಳ ಪೈಕಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಆಪ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳು ಸೂಪರ್‌-8 ಹಂತ ಪ್ರವೇಶಿಸಿವೆ. ಇನ್ನುಳಿದ 2 ಸ್ಥಾನಕ್ಕಾಗಿ 4 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುತ್ತಿದೆ. ರೇಸ್‌ನಲ್ಲಿರುವ ತಂಡಗಳು ಯಾವುವು? ಮುಂದಿನ ಹಂತದ ಪೈಪೋಟಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಗುಂಪು ‘ಎ’

ಭಾರತ 6 ಅಂಕದೊಂದಿಗೆ 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್‌-8ಕ್ಕೇರಿದ್ದು, 4 ಪಂದ್ಯಗಳಲ್ಲಿ 5 ಅಂಕ ಪಡೆದಿರುವ ಅಮೆರಿಕ ಕೂಡಾ ಸೂಪರ್ 8ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನು 3 ಪಂದ್ಯಗಳಲ್ಲಿ ಎರಡು ಅಂಕ ಗಳಿಸಿರುವ ಪಾಕಿಸ್ತಾನ ತಂಡವು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಕೆನಡಾ, ಐರ್ಲೆಂಡ್‌ ತಂಡಗಳು ಸೂಪರ್ 8 ಹಂತಕ್ಕೇರಲು ವಿಫಲವಾಗಿವೆ.

ಇಂದು ಭಾರತ vs ಕೆನಡಾ ಫೈಟ್‌: ಪಂದ್ಯವೇ ಮಳೆಗಾಹುತಿಯಾಗುವ ಭೀತಿ..!

ಗುಂಪು ‘ಬಿ’

ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಮುಂದಿನ ಹಂತಕ್ಕೇರಿದೆ. ಮತ್ತೊಂದು ಸ್ಥಾನ ಖಾಲಿ ಇದ್ದು, ಇಂಗ್ಲೆಂಡ್‌(3), ಸ್ಕಾಟ್ಲೆಂಡ್‌(5) ನಡುವೆ ಸ್ಪರ್ಧೆ ಇದೆ. ಆಸೀಸ್ ವಿರುದ್ಧ ಗೆದ್ದರೆ ಸ್ಕಾಟ್ಲೆಂಡ್‌ ಸೂಪರ್‌-8ಕ್ಕೇರಲಿದ್ದು, ಇಂಗ್ಲೆಂಡ್‌ ಹೊರಬೀಳಲಿದೆ. ಒಂದು ವೇಳೆ ಸ್ಕಾಟ್ಲೆಂಡ್‌ ಸೋತು, ಅತ್ತ ಇಂಗ್ಲೆಂಡ್‌ ತಂಡ ನಮೀಬಿಯಾ ವಿರುದ್ಧ ಗೆದ್ದರೆ ಸ್ಕಾಟ್ಲೆಂಡ್‌ ಹೊರಬೀಳಲಿದ್ದು, ಇಂಗ್ಲೆಂಡ್‌ ಸೂಪರ್‌-8ಕ್ಕೇರಲಿದೆ. ನಮೀಬಿಯಾ, ಒಮಾನ್‌ ಈಗಾಗಲೇ ಹೊರಬಿದ್ದಿವೆ.

ಗುಂಪು ‘ಸಿ’

‘ಸಿ’ ಗುಂಪಿನಲ್ಲಿ ಸೂಪರ್‌-8ಕ್ಕೇರುವ ತಂಡಗಳು ಅಧಿಕೃತಗೊಂಡಿವೆ. ಅಫ್ಘಾನಿಸ್ತಾನ ಹಾಗೂ ವೆಸ್ಟ್‌ಇಂಡೀಸ್‌ ತಲಾ 3 ಜಯದೊಂದಿಗೆ ಮುಂದಿನ ಸುತ್ತು ಪ್ರವೇಶಿಸಿದೆ. ಗುಂಪಿನ ಅಗ್ರಸ್ಥಾನಕ್ಕಾಗಿ ಮಾತ್ರ ಆಫ್ಘನ್‌-ವಿಂಡೀಸ್‌ ನಡುವೆ ಪೈಪೋಟಿ ಇದೆ. ನ್ಯೂಜಿಲೆಂಡ್‌, ಉಗಾಂಡ ಹಾಗೂ ಪಪುವಾ ನ್ಯೂ ಗಿನಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.

ಪಾಕಿಸ್ತಾನ ಸೂಪರ್ 8 ಕನಸು ನುಚ್ಚುನೂರು; ಯುಎಸ್‌ಎ & ಭಾರತ ಮುಂದಿನ ಹಂತಕ್ಕೆ ಲಗ್ಗೆ..!

ಗುಂಪು ‘ಡಿ’

ದ.ಆಫ್ರಿಕಾ ಸತತ 3 ಪಂದ್ಯ ಗೆದ್ದು ಸೂಪರ್‌-8ಕ್ಕೇರಿದೆ. ಇನ್ನೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ-ನೆದರ್‌ಲೆಂಡ್ಸ್‌ ನಡುವೆ ಪೈಪೋಟಿ ಇದೆ. ಬಾಂಗ್ಲಾದೇಶ(4 ಅಂಕ) ಕೊನೆ ಪಂದ್ಯದಲ್ಲಿ ನೇಪಾಳ ವಿರುದ್ಧ ಸೆಣಸಲಿದ್ದು, ಗೆದ್ದರೆ ಮುಂದಿನ ಸುತ್ತು ಪ್ರವೇಶಿಸಲಿದೆ. ನೆದರ್‌ಲೆಂಡ್ಸ್‌ ತಂಡ ಶ್ರೀಲಂಕಾ ವಿರುದ್ಧ ಆಡಬೇಕಿದ್ದು, ಗೆದ್ದರೂ ಅತ್ತ ಬಾಂಗ್ಲಾ ಸೋತರೆ ಮಾತ್ರ ಸೂಪರ್‌-8ಕ್ಕೇರಬಹುದು. ಲಂಕಾ ಈಗಾಗಲೇ ರೇಸ್‌ನಿಂದ ಹೊರಬಿದ್ದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 World Cup: ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
U19 World Cup: ಪಾಕಿಸ್ತಾನದ 19 ವರ್ಷಗಳ ಹಳೆಯ ದಾಖಲೆ ಧೂಳೀಪಟ ಮಾಡಿದ ಭಾರತ!