'BCCI ದಿಢೀರ್ ಕೈಬಿಟ್ಟಾಗ ಆದ ನೋವು ಇದೆಯಲ್ಲ' ಈ ಬಿರುಗಾಳಿಯನ್ನ ಸೂರ್ಯಕುಮಾರ್ ಯಾದವ್ ಹೇಗೆ ಎದುರಿಸಿದರು?

Published : Nov 11, 2026, 09:34 AM IST
suryakumar yadav

ಸಾರಾಂಶ

ಟಿ-20 ವಿಶ್ವಕಪ್ ಗೆಲುವಿನ ನಂತರ ತಂಡದಿಂದ ಕೈಬಿಟ್ಟಿದ್ದರಿಂದ ಸೂರ್ಯಕುಮಾರ್ ಯಾದವ್ ಕಠಿಣ ಸಮಯ ಎದುರಿಸಿದ್ದರು. ಈ ಬಗ್ಗೆ ಅವರು ಮುಕ್ತವಾಗಿ ಮಾತನ್ನಾಡಿದ್ದಾರೆ.

ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ದಿಢೀರ್ ತಂಡದಿಂದ ಕೈಬಿಡಲಾಗಿತ್ತು. ಇದು ಅವರ ಅಭಿಮಾನಿಗಳಿಗೆ ತುಂಬಾನೇ ಬೇಸರ ಆಗಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ಬಿಟ್ಟರೆ ಬೇರೆ ಯಾವುದೇ ಟೂರ್ನಿಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ನಾಯಕರಾಗಿ ದೇಸಿಯ ಟೂರ್ನಿಗೆ ಕಂಬ್ಯಾಕ್ ಮಾಡಿದ್ದಾರೆ. ಇದು ಅವರ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೊಸ ಆಯಾಮ ಕೊಟ್ಟರೂ ಅಚ್ಚರಿ ಇಲ್ಲ.

ಇತ್ತೀಚೆಗೆ ಮುಂಬೈನಲ್ಲಿ ಟಿ20 ಮುಂಬೈ ಲೀಗ್‌ನ ಸೆಲೆಬ್ರೇಷನ್ ಆಫ್ ಚಾಂಪಿಯನ್ಸ್ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಬಿಸಿಸಿಐ ತಮ್ಮನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಮುಕ್ತವಾಗಿ ಮಾತನ್ನಾಡಿದ್ದಾರೆ. ನನಗೆ ಟಿ20 ವಿಶ್ವಕಪ್ ಗೆದ್ದ ನಂತರದ ಸಮಯ ಸ್ವಲ್ಪ ಕಷ್ಟಕರವಾಗಿದೆ. ಅದನ್ನು ಹೇಳಲು ನಾನು ಹಿಂಜರಿಯುವುದಿಲ್ಲ. ಯಾಕೆಂದರೆ ನಿಮಗೆ ಪ್ರಾಮಾಣಿಕವಾಗಿಲ್ಲದಿದ್ದರೆ, ಖುಷಿಯಿಂದ ಇರಲು ಸಾಧ್ಯವೇ ಇಲ್ಲ.

ನಿಜ ಹೇಳಬೇಕೆಂದರೆ.. ನನಗೆ ತಂಡದಿಂದ ಹೊರಗುಳಿಯೋದು ತುಂಬಾ ಕಷ್ಟವಾಗಿತ್ತು. ಐಪಿಎಲ್ ಸಮಯದಲ್ಲಿ, ನನ್ನ ಮಗಳು ಮೇ ತಿಂಗಳಲ್ಲಿ ಜನಿಸಿದಳು. ಆಕೆ ಹುಟ್ಟಿದ ಮೇಲೆ ನನ್ನ ಸಂಪೂರ್ಣ ಗಮನ ಕಡೆಗೆ ಜಾರಿತು. ಅವಳಿಂದ ಈಗ ನನ್ನ ಬದುಕು ತುಂಬಾನೇ ಸುಂದರವಾಗಿದೆ.

ತಂಡದಲ್ಲಿ ನನ್ನ ಕೈಬಿಟ್ಟ ನಂತರ ಎರಡು ತಿಂಗಳ ಕಷ್ಟ ಆಯ್ತು. ನಾನು ನನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದ್ದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಯೋಚಿಸಿದ ರೀತಿಯಲ್ಲಿಯೇ ಏಕೆ ಯೋಚಿಸಲು ಪ್ರಾರಂಭಿಸಬಾರದು ಎಂಬ ನಿರ್ಧಾರಕ್ಕೆ ಬಂದೆ. ನನ್ನ ಕ್ರಿಕೆಟ್ ಪ್ರಯಾಣದ ಆರಂಭದಲ್ಲಿ.. ನನ್ನ ಏಕೈಕ ಕನಸು ಮುಂಬೈನ ತಂಡಗಳಲ್ಲಿ ಆಡುವುದು ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವುದು ಎಂದಿದ್ದಾರೆ.

ಪತ್ನಿ ಜೊತೆ ಮಾತುಕತೆ

ನನ್ನ ಕ್ರಿಕೆಟ್ ವೃತ್ತಿ ಬದುಕಿನ ಬಗ್ಗೆ ಪತ್ನಿ ದೇವಿಶಾ ಜೊತೆ ಮಾತನಾಡಿದೆ. ಅವಳು ನನ್ನ ಭಾವನೆಗಳನ್ನು ಪ್ರತಿಧ್ವನಿಸಿದಳು. ನಾನು 15 ವರ್ಷದವನಿದ್ದಾಗ ನನಗಿದ್ದ ಆ ಉತ್ಸಾಹವನ್ನು ಮತ್ತೆ ಹುಟ್ಟಿಹಾಕು ಪ್ರಯತ್ನಿಸಿದಳು ಎಂದಿದ್ದಾರೆ. ನಾನು ಚಿಕ್ಕವನಿದ್ದಾಗ ನನ್ನ ಏಕೈಕ ಗುರಿ ಮುಂಬೈ ಅಂಡರ್-15 ತಂಡವನ್ನು ಪ್ರತಿನಿಧಿಸುವುದಾಗಿತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಂತೆಯೇ ನಾನು ಆ ಗುರಿ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದೆ. ಸಕ್ಸಸ್ ಕೂಡ ಆದೆ ಎಂದಿದ್ದಾರೆ.

ಇದೇ ವೇಳೆ ಯುವ ಕ್ರಿಕಿಟಿಗರನ್ನ ಉದ್ದೇಶಿಸಿ ಮಾತನ್ನಾಡಿದ ಅವರು.. 10-15 ವರ್ಷಗಳ ಹಿಂದೆ ಮಾಡಿದಂತೆ ನನ್ನ ಆಟದ ಮೇಲೆ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಅದೇ ರೀತಿಯಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದ್ದೇನೆ. ನಾನು ಆಟದ ಮೇಲಿನ ಉತ್ಸಾಹ ಮತ್ತು ಸಮರ್ಪಣೆಯನ್ನು ಪುನರುಜ್ಜೀವನಗೊಳಿಸುತ್ತಿದ್ದೇನೆ. ನನಗೆ ಗೊತ್ತು, ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ. ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು ಅಷ್ಟೇ.

ನನ್ನ ಮುಖ್ಯ ಗುರಿ ಯಾವಾಗಲೂ ಇದ್ದಂತೆಯೇ ಇದೆ. ಮುಂಬೈ ಪರ ಪಂದ್ಯಗಳನ್ನು ಗೆಲ್ಲುವುದು ಮತ್ತು ನನ್ನ ತಂಡವನ್ನು ಚಾಂಪಿಯನ್ ಮಾಡುವುದಾಗಿದೆ. ನನ್ನ ಮೊದಲ ಗುರಿ ಟೀಂ ಇಂಡಿಯಾಗೆ ಆಡುವುದು. ಅದನ್ನ ಬಿಟ್ಟು ಮೊದಲ ಗುರಿ ಐಪಿಎಲ್ ಆಡುವ ಬಗ್ಗೆ ಯೋಚಿಸುವುದು ಆಗಬಾರದು. ಪ್ರತಿಯೊಬ್ಬ ಆಟಗಾರನ ಕನಸು ಭಾರತಕ್ಕಾಗಿ ಆಡುವುದು. ಮುಂಬೈ ಮೈದಾನದಲ್ಲಿ ಕ್ರಿಕೆಟ್ ಆಡುವ ಯಾವುದೇ ಮಗುವನ್ನು ನೀವು ಕೇಳಿದರೆ.. ಅವರು ಐಪಿಎಲ್‌ನಲ್ಲಿ ಆಡಲು ಬಯಸುತ್ತೇವೆ ಎಂದು ಹೇಳುವುದಿಲ್ಲ ಎಂದರು.

ನೀವು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಮನ್ನಣೆ ಸಿಗುತ್ತದೆ. ನಂತರ ಎಲ್ಲವೂ ಸುಲಭ ಆಗುತ್ತ ಹೋಗುತ್ತದೆ. ಆದ್ದರಿಂದ ಭಾರತಕ್ಕಾಗಿ ಆಡುವುದೇ ಮೊದಲ ಕನಸಾಗಿರಬೇಕು. ಆದರೆ ಅದನ್ನು ಮಾಡಲು ನೀವು ಒಂದೊಂದೇ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL trade 2027 latest news: ಮಿನಿ ಹರಾಜಿಗೂ ಮುನ್ನ ಇಲ್ಲಿಯವರೆಗೆ ಯಾವ ಆಟಗಾರರು ಯಾರ ಪಾಲು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಕೆಟಿಗ ಪೃಥ್ವಿ ಶಾ ಲವ್​ಸ್ಟೋರಿಯಲ್ಲಿ ಮತ್ತೆ ಟ್ವಿಸ್ಟ್​: ಒಂದಾದ ದಂಪತಿ- ಹುಚ್ಚು ಹಿಡೀತಿದೆ ಅಂತಿರೋ ಫ್ಯಾನ್ಸ್​​