ಟಿ20 ವಿಶ್ವಕಪ್ ಗೆಲ್ಲಲು ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ; ಮಾರ್ಕ್‌ರಮ್‌ಗೆ ನಾಯಕ ಪಟ್ಟ!

Published : Jan 02, 2026, 06:40 PM IST
south africa squad

ಸಾರಾಂಶ

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಏಯ್ಡನ್ ಮಾರ್ಕ್‌ರಮ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ನಿವೃತ್ತಿಯಿಂದ ವಾಪಸಾದ ಕ್ವಿಂಟನ್ ಡಿ ಕಾಕ್ ಮತ್ತು ಗಾಯದಿಂದ ಚೇತರಿಸಿಕೊಂಡ ವೇಗಿ ಏನ್ರಿಚ್ ನೋಕಿಯ ತಂಡಕ್ಕೆ ಮರಳಿದ್ದಾರೆ. 

ಜೋಹಾನ್ಸ್‌ಬರ್ಗ್‌: ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ 15 ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಏಯ್ಡನ್ ಮಾರ್ಕ್‌ರಮ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. ಇತ್ತೀಚೆಗಷ್ಟೇ ನಿವೃತ್ತಿ ವಾಪಾಸ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿರುವ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಮಾರಕ ವೇಗಿ ಏನ್ರಿಚ್ ನೋಕಿಯ ಕೂಡಾ ಹರಿಣಗಳ ಪಡೆಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ತಂಡದಲ್ಲಿ ನಾಯಕ ಏಯ್ಡನ್ ಮಾರ್ಕ್‌ರಮ್ ಮಾತ್ರವಲ್ಲದೇ, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೋರ್ಜಿ, ಡೆವಾಲ್ಡ್ ಬ್ರೆವೀಸ್, ಜಾನ್ಸನ್ ಸ್ಮಿತ್, ಡೇವಿಡ್ ಮಿಲ್ಲರ್ ಹಾಗೂ ಡೊನೊವನ್ ಪೆರೆರಾ ಅವರನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್ ವಿಭಾಗ ಎದುರಾಳಿ ಪಡೆಯನ್ನು ಕಾಡಲು ಸಜ್ಜಾಗಿದೆ. ಇನ್ನು ಕಗಿಸೋ ರಬಾಡ, ಖ್ವೆನಾ ಮಫಾಕಾ, ಏನ್ರಿಚ್ ನೋಕಿಯ, ಲುಂಗಿ ಎಂಗಿಡಿ ಹಾಗೂ ಕಾರ್ಬಿನ್ ಬಾಶ್ ಅವರನ್ನೊಳಗೊಂಡ ವೇಗದ ಬೌಲಿಂಗ್ ಪಡೆ ಕೂಡಾ ಸದೃಢವಾಗಿದೆ. ಇನ್ನು ಸ್ಪಿನ್ ವಿಭಾಗವನ್ನು ಕೇಶವ್ ಮಹರಾಜ್ ಮುನ್ನಡೆಸಲಿದ್ದಾರೆ. ಇವರಿಗೆ ಜಾರ್ಜ್‌ ಲಿಂಡೆ, ಏಯ್ಡನ್ ಮಾರ್ಕ್‌ರಮ್, ಡೊನೊವನ್ ಪೆರೆರಾ ಸಾಥ್ ನೀಡಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್, ಕೆನಡಾ ಹಾಗೂ ಯುಎಇ ತಂಡಗಳು ಸ್ಥಾನ ಪಡೆದಿವೆ.

 

ಕಳೆದ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದ್ದ ದಕ್ಷಿಣ ಆಫ್ರಿಕಾ:

ಕಳೆದ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಭಾರತ ಎದುರು ರೋಚಕ ಸೋಲು ಅನುಭವಿಸುವ ಮೂಲಕ ಚೋಕರ್ಸ್ ಪಟ್ಟವನ್ನು ಮತ್ತೊಮ್ಮೆ ಅಲಂಕರಿಸಿತ್ತು. ಅಂದಹಾಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಇದುವರೆಗೂ ಐಸಿಸಿ ಟಿ20 ವಿಶ್ವಕಪ್‌ ಗೆಲ್ಲಲು ಸಾಧ್ಯವಾಗಿಲ್ಲ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಹೀಗಿದೆ:

ಏಯ್ಡನ್ ಮಾರ್ಕ್‌ರಮ್(ನಾಯಕ), ಡೇವಿಡ್ ಮಿಲ್ಲರ್, ಡೆವಾಲ್ಡ್ ಬ್ರೆವೀಸ್, ಟೋನಿ ಡಿ ಜೋರ್ಜಿ, ಜೇಸನ್ ಸ್ಮಿತ್, ಕ್ವಿಂಟನ್ ಡಿ ಕಾಕ್, ಕಾರ್ಬಿನ್ ಬಾಶ್, ಡೆನೊವನ್ ಪೆರೆರಿಯಾ, ಮಾರ್ಕೊ ಯಾನ್ಸನ್, ಜಾರ್ಜ್ ಲಿಂಡೆ, ಕಗಿಸೋ ರಬಾಡ, ಲುಂಗಿ ಎಂಗಿಡಿ, ಏನ್ರಿಚ್ ನೋಕಿಯ, ಖ್ವೆನಾ ಮಫಾಕ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

12 ವರ್ಷಗಳ ಬಳಿಕ ಕ್ರೀಡಾಭಿಮಾನಿಗಳಿಗೆ ಭರ್ಜರಿ ವರ್ಷ, 2026ರಲ್ಲಿ 5 ವಿಶ್ವಕಪ್‌ ನೋಡುವ ಭಾಗ್ಯ!
2025ರ ಸರ್ವಶ್ರೇಷ್ಠ ಟಿ20 ಕ್ರಿಕೆಟ್ ತಂಡ ಪ್ರಕಟ; ಮೂವರು ಭಾರತೀಯರಿಗೆ ಸ್ಥಾನ! ಆದ್ರೆ ಪಾಂಡ್ಯ ಔಟ್