
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಸೋಮವಾರ ಅತ್ಯದ್ಭುತ ಚೇಸ್ ಹಾಗೂ ಸೂಪರ್ ಓವರ್ ಥ್ರಿಲ್ಲರ್‌ಗೆ ಸಾಕ್ಷಿಯಾಯಿತು. ರೋಚಕ ಪೈಪೋಟಿಗೆ ಕಾರಣವಾದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಸೂಪರ್ ಓವರ್‌ನಲ್ಲಿ ಸೋಲಿನ ಆಘಾತಕ್ಕೊಳಗಾಯಿತು. ತಂಡ ಟೂರ್ನಿಯ 4 ಪಂದ್ಯಗಳಲ್ಲಿ 2ನೇ ಸೋಲು ಕಂಡಿದೆ. ಅತ್ತ ಯುಪಿ ಆಡಿದ 4 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್ ಕಲೆಹಾಕಿತು. ಸ್ಮೃತಿ ಮಂಧನಾ(6) ಮಿಂಚಿಲಿಲ್ಲ. ಡ್ಯಾನಿ ವ್ಯಾಟ್ ಹಾಡ್ಜ್ 41 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಎಲೈಸಿ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 90 ರನ್ ಗಳಿಸಿ ಔಟಾಗದೆ ಉಳಿದರು. ಅವರದ್ದು ಟೂರ್ನಿಯಲ್ಲಿದು ಮೂರನೇ ಅರ್ಧಶತಕ.
ಪಾಕಿಸ್ತಾನ ಎದುರು ಭಾರತ ಹೀನಾಯವಾಗಿ ಸೋಲುತ್ತೆ ಎಂದು ಭವಿಷ್ಯ ನುಡಿದಿದ್ದ IIT ಬಾಬಾ ಈಗ ಫುಲ್ ಟ್ರೋಲ್!
ದೊಡ್ಡ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ 180ಕ್ಕೆ ಆಲೌಟಾಗಿ ಪಂದ್ಯ ಟೈ ಮಾಡಿಕೊಂಡಿತು. ಆರಂಭಿಕ ಆಟಗಾರ್ತಿ ಕಿರಣ್ ನಾವ್ಗಿಗೆ 12 ಎಸೆತಗಳಲ್ಲಿ 24, ವೃಂದಾ ದಿನೇಶ್ 14, ನಾಯಕಿ ದೀಪ್ತಿ ಶರ್ಮಾ 13 ಎಸೆತಗಳಲ್ಲಿ 25 ರನ್ ಸಿಡಿಸಿದರು. ಕೊನೆ ಓವರ್‌ನಲ್ಲಿ 18 ರನ್ ಬೇಕಿದ್ದಾಗ ಸೋಫಿ ಎಕ್ಲೆಸ್ಟೋನ್ 2 ಸಿಕ್ಸರ್, 1 ಬೌಂಡರಿ ಸಿಡಿಸಿ, 5ನೇ ಎಸೆತದಲ್ಲಿ ಸಿಂಗಲ್ ಪಡೆದರು. ಕೊನೆ ಎಸೆತಕ್ಕೆ 1 ರನ್ ಬೇಕಿದ್ದಾಗ ರನ್‌ಔಟ್ ಕ್ರಾಂತಿ ಬಾಲ್ ಡಾಟ್ ಮಾಡಿದರು. ಆದರೂ ರನ್ ಓಡಿದರೂ, ಎಕ್ಲೆಸ್ಟೋನ್ ರನೌಟ್ ಆದರು.
01ನೇ ಬಾರಿ
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೂಪರ್ ಓವರ್ ಆಡಿಸಲಾಯಿತು.
ಚಾಂಪಿಯನ್ಸ್ ಟ್ರೋಫಿ: ಭಾರತ ಎದುರು ಹೀನಾಯವಾಗಿ ಸೋಲುತ್ತಿದ್ದಂತೆ ಅಚ್ಚರಿ ಹೇಳಿಕೆ ಕೊಟ್ಟ ಪಾಕ್ ನಾಯಕ ರಿಜ್ವಾನ್!
ಹೇಗಿತ್ತು ಸೂಪರ್ ಓವರ್
ಸೂಪರ್ ಓವರ್‌ನಲ್ಲಿ ಯುಪಿ ಮೊದಲು ಬ್ಯಾಟ್ ಮಾಡಿ 1 ವಿಕೆಟ್‌ಗೆ 8 ರನ್ ಗಳಿಸಿತು. ಶಿನೆಲ್ಲೆ ಹೆನ್ರಿ 4 ರನ್ ಗಳಿಸಿ, 3ನೇ ಎಸೆತದಲ್ಲಿ ಔಟಾದರು. 9 ರನ್ ಗುರಿ ಪಡೆದ ಆರ್‌ಸಿಬಿ 04 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಿಚಾ ಘೋಷ್-ಸ್ಮೃತಿ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಡಬ್ಲ್ಯುಪಿಎಲ್: ಡೆಲ್ಲಿಗೆ ಇಂದು ಜೈಂಟ್ಸ್ ಸವಾಲು
ಬೆಂಗಳೂರು: 3ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ಬಾರಿ ಕೊನೆ ಸ್ಥಾನಿಯಾಗಿದ್ದ ಗುಜರಾತ್ ಈ ಬಾರಿ 3 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದೆ. ಪ್ಲೇ-ಆಫ್ ನಿರೀಕ್ಷೆಯಲ್ಲಿರುವ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.
ಮತ್ತೊಂದೆಡೆ ಕಳೆದೆರಡೂ ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿರುವ ಡೆಲ್ಲಿ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 2ರಲ್ಲಿ ಸೋಲನುಭವಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.