
ಮುಂಬೈ (ಅ.06) ಟಿ20 ವಿಶ್ವಕಪ್ 2026ರ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಸೂರ್ಯ ಕುಮಾರ್ ಯಾದವ್ ಕ್ರಿಕೆಟ್ ಬದುಕಿನಲ್ಲಿ ಹಲವು ಕೋಲಾಹಲ ಸೃಷ್ಟಿಯಾಗಿದೆ. ಟೀಂ ಇಂಡಿಯಾ ಟಿ20 ಪಂದ್ಯ ನಾಯಕತ್ವದಿಂದ ಕೊಕ್, ಟೀಂ ಇಂಡಿಯಾದಿಂದಲೂ ಸೂರ್ಯಕುಮಾರ್ ಯಾದವ್‌ಗೆ ಗೇಟ್ ಪಾಸ್ ನೀಡಲಾಗಿತ್ತು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಸೂರ್ಯಕುಮಾರ್ ಯಾದವ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಮುಂಬೈ ರಣಜಿ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲಾಗಿದೆ.
ಅಕ್ಟೋಬರ್ 11 ರಿಂದ ಮುಂಬೈ ರಣಜಿ ಪಂದ್ಯ ಆರಂಭಗೊಳ್ಳುತ್ತಿದೆ. ಸೂರ್ಯಕುಮಾರ್ ಭರ್ಜರಿ ಅಭ್ಯಾಸ ನಡೆಸಿ ರಣಜಿ ಟೂರ್ನಿಗೆ ಲಭ್ಯರಾಗಿದ್ದರು. ಆದರೆ ಮುಂಬೈ ತಂಡದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲಾಗಿದೆ. ಮುಂಬೈ ರಣಜಿ ತಂಡ ಉಪ ನಾಯಕನಾಗಿದ್ದ ಸೂರ್ಯಕುಮಾರ್ ಯಾದವ್ ಬದಲು ಆಯುಷ್ ಮರಾಠೆಯನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.
ಟೀಂ ಇಂಡಿಯಾದ ಮೂರು ಮಾದರಿಯಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲಾಗಿದೆ. ಇದೀಗ ಮುಂಬೈ ರಣಜಿ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಮುಂಬೈ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾಗವ್ ರೆಡ್ ಬಾಲ್ ಕ್ರಿಕೆಟ್ ಬಗ್ಗೆ ಇಂಪ್ರೆಸ್ ಆಗಿಲ್ಲ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಸಲುವಾಗಿ ಇದೀಗ ಆಯುಷ್ ಮರಾಠೆಯನ್ನು ಉಪನಾಯಕನಾಗಿ ಆಯ್ಕೆ ಮಾಡಿದೆ. ಸೂರ್ಯಕುಮಾರ್ ತಂಡದಿಂದಲೇ ಹೊರಬಿದ್ದಿದ್ದಾರೆ.
ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಮುಂಬೈ ಆಯ್ಕೆ ಸಮಿತಿ ಮುಖ್ಯಸ್ಥ ರಮೇಶ್ ಪವಾರ್‌ಗೆ ಸಂದೇಶ ರವಾನಿಸಿದ್ದು. ತಾನು ಮುಂಬೈ ರಣಜಿ ಟೂರ್ನಿಗೆ ಸಕಲ ತಯಾರಿ ನಡೆಸಿದ್ದು, ಲಭ್ಯವಿರುವುದಾಗಿ ತಿಳಿಸಿದ್ದರು. ಈ ಸಂದೇಶ ಕೇವಲ ತನ್ನ ಲಭ್ಯತೆ ಕುರಿತು ಆಗಿರಲಿಲ್ಲ, ತನ್ನನ್ನು ರಣಜಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಿ ಅನ್ನೋ ಮನವಿಯಾಗಿತ್ತು. ಆದರೆ ಮುಂಬೈ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಿದೆ.
ಕಳೆದ 18 ತಿಂಗಳಿನಿಂದ ಸೂರ್ಯಕುಮಾರ್ ಯಾದವ್ ಯಾವುದೇ ರೆಡ್ ಬಾಲ್ ಮ್ಯಾಚ್ ಆಗಿಲ್ಲ. ಸದ್ಯ ಮುಂಬೈ ತಂಡಕ್ಕೆ ಸರಿಯಾದ ಬ್ಯಾಲೆನ್ಸ್ ಬೇಕಿದೆ. ಹೀಗಾಗಿ ತಂಡದ ಬ್ಯಾಲೆನ್ಸ್, ಅವಶ್ಯಕತೆಗೆ ತಕ್ಕಂತೆ ತಂಡದ ಆಯ್ಕೆ ಮಾಡಲಾಗಿದೆ ಎಂದು ಮುಂಬೈ ಆಯ್ಕೆ ಸಮಿತಿ ಹೇಳಿದೆ.
ಯಶಸ್ವಿ ಜೈಸ್ವಾಲ್ ಮುಂಬೈ ತಂಡದ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಶಾರ್ದೂಲ್ ಠಾಕೂರ್ ಇಂಜುರಿ ಕಾರಣದಿಂದ ಆರಂಭಿಕ ಎರಡು ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.