
ಮುಂಬೈ (ನ.15) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಾಲ್ಯದ ಫೋಟೋಗಳಲ್ಲಿ ಅತ್ಯಂತ ಜನಪ್ರಿಯ ಫೋಟೋ ಎಂದರೆ ಪುಟ್ಟ ಮಗುವಾಗಿದ್ದಾಗ ಬ್ಯಾಟ್ ಹಿಡಿದು ನಿಂತ ಫೋಟೋ. ಇದೀಗ ಸಚಿನ್ ತೆಂಡೂಲ್ಕರ್ ಈ ಪೋಸ್ ರಿಕ್ರಿಯೇಟ್ ಮಾಡಿದ್ದಾರೆ. ಆದರೆ ಇದು ಕೇವಲ ಫೋಟೋಗೆ ನೀಡಿದ ಪೋಸ್ ಮಾತ್ರವಲ್ಲ. ಇದರ ಹಿಂದೆ ಹಲವು ನೆನಪುಗಳಿವೆ. ಕಾರಣ ಸಚಿನ್ ತೆಂಡೂಲ್ಕರ್ 4 ವರ್ಷ ಮಗುವಾಗಿದ್ದಾಗ ಹಿಡಿದ ಅದೇ ಬ್ಯಾಟ್ ಹಿಡಿದು ಇದೀಗ ಪೋಸ್ ನೀಡಿದ್ದಾರೆ. ಬರೋಬ್ಬರಿ 49 ವರ್ಷ ಬಳಿಕವೂ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಬ್ಯಾಟ್ ಹಾಗೇ ಕಾಪಾಡಿಕೊಂಡಿದ್ದಾರೆ.
ಸಚಿನ್ 11ನೇ ವಯಸ್ಸಿಗೆ ಕ್ರಿಕೆಟ್ ಕೋಚಿಂಗ್ ಪಡೆಯಲು ಆರಂಭಿಸಿದ್ದರು. ಆದರೆ ಸಚಿನ್ ಕ್ರಿಕೆಟ್ ಶುರುವಾಗಿದ್ದ 4ನೇ ವಯಸ್ಸಿನಲ್ಲಿ. ಪುಟ್ಟ ಮಗುವಾಗಿದ್ದ ಸಚಿನ್‌ಗೆ ಬ್ಯಾಟ್ ಹಿಡಿದು ಆಟವಾಡುವುದು ಬಲು ಇಷ್ಟವಾಗಿತ್ತು. ಹೀಗಾಗಿ ಅಂದು ಸಚಿನ್ ಪೋಷಕರು ಪುಟ್ಟ ಮಗು ಸಚಿನ್ ಕೈಗೆ ಬ್ಯಾಟ್ ನೀಡಿ ಫೋಟೋ ತೆಗೆಸಿದ್ದರು. ಸಚಿನ್ ಕೂಡ ಬ್ಯಾಟ್ ಹಿಡಿದು ಅದ್ಭುತ ಪೋಸ್ ನೀಡಿದ್ದರು. ಇದೀಗ ಸಚಿನ್ ತೆಂಡೂಲ್ಕರ್ 49 ವರ್ಷಗಳ ಬಳಿಕ ಅದೇ ಬ್ಯಾಟ್ ಹಿಡಿದು ಅದೇ ರೀತ್ ಪೋಸ್ ನೀಡಿದ್ದಾರೆ.
ಕಳೆದ 49 ವರ್ಷಗಳಿಂದ ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟ್‌ನ್ನು ಕಾಪಾಡಿಕೊಂಡ ಬಂದಿದ್ದಾರೆ. ಇದೀಗ ಹಳೇ ನೆನಪುಗಳನ್ನು ಮೆಲುಕು ಹಾಕುತ್ತಾ ಫೋಟೋ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲೇ ಸಚಿನ್ ತೆಂಡೂಲ್ಕರ್ ದಿಗ್ಗಜ ಕ್ರಿಕೆಟಿಗನಾಗುತ್ತಾನೆ ಅನ್ನೋ ಸೂಚನೆ ನೀಡಿದ ಫೋಟೋ ಇದು. ಇದೀಗ ಸಚಿನ್ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿ ಹಲವು ವರ್ಷಗಳೇ ಉರುಳಿದರೂ ಸಚಿನ್ ಕ್ರಿಕೆಟ್, ಬ್ಯಾಟಿಂಗ್ ಅಭಿಮಾನಿಗಳ ಮನದಲ್ಲಿ ಹಚ್ಚ ಹಸುರಾಗಿದೆ.
ಸಚಿನ್ ತೆಂಡೂಲ್ಕರ್ ವೃತ್ತಿಪರ ಕ್ರಿಕೆಟ್ ಆರಂಭಿಸಿದ್ದು 11ನೇ ವಯಸ್ಸಿನಲ್ಲಿ. ಸಚಿನ್ ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ಆಸಕ್ತಿ ಹೊಂದಿದ್ದರು. 5 ಹಾಗೂ 6ನೇ ವಯಸ್ಸಿನಲ್ಲೇ ಕ್ರಿಕೆಟ್ ಆಟ ಶುರು ಮಾಡಿದ್ದರು. ಮಕ್ಕಳ ಜೊತೆ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. 11ನೇ ವಯಸ್ಸಿಗೆ ಸಚಿನ್ ತೆಂಡೂಲ್ಕರ್ ಸಹೋದರ ಅಜಿತ್ ತೆಂಡೂಲ್ಕರ್ ನೆರವಿನಿಂದ ವೃತ್ತಿಪರ ಕ್ರಿಕೆಟ್ ಆರಂಭಿಸಿದ್ದು. ಕೋಚ್ ರಮಾಕಾಂತ್ ಅಚ್ರೇಕರ್ ಮಾರ್ಗದರ್ಶನದಲ್ಲಿ ಸಚಿನ್ ಕೋಚಿಂಗ್ ಆರಂಭಿಸಿದ್ದರು.
15ನೇ ವಯಸ್ಸಿಗೆ ಮುಂಬೈ ಪರ ಫಸ್ಟ್ ಕ್ಲಾಸ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮುಂಬೈ ತಂಡದಿಂದ ಟೀಂ ಇಂಡಿಯಾ ತಂಡಕ್ಕೆ ಎಂಟ್ರಿಕೊಡಲು ಕೇವಲ ಒಂದೇ ವರ್ಷ ಸಾಕಾಯಿತು. ಸಚಿನ್ ಅಷ್ಟರಲ್ಲೇ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದರು. 16ನೇ ವಯಸ್ಸಿಗೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದರು. 1989ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಸಟಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಇತಿಹಾಸವೇ ಸೃಷ್ಟಿಯಾಗಿದೆ.
ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಶತಕವನ್ನು 1990ರಲ್ಲಿ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ದ ಒಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದರು. ಈ ವೇಳೆ ಸಚಿನ್ ವಯಸ್ಸು ಕೇವಲ 17. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.