ಮಗ ದೊಡ್ಡವನಾದ, ಅರ್ಜುನ್‌ ಸಾನಿಯಾ ಪ್ರೀ ವೆಡ್ಡಿಂಗ್‌ನಲ್ಲಿ ತಂದೆ ಸಚಿನ್ ತೆಂಡೂಲ್ಕರ್ ಭಾವುಕ ನುಡಿ

Published : Feb 27, 2026, 05:35 PM IST
Arjun Tendulkar Pre wedding

ಸಾರಾಂಶ

ಮಗ ದೊಡ್ಡವನಾದ, ಅರ್ಜುನ್‌ ಸಾನಿಯಾ ಪ್ರೀ ವೆಡ್ಡಿಂಗ್‌ನಲ್ಲಿ ತಂದೆ ಸಚಿನ್ ತೆಂಡೂಲ್ಕರ್ ಭಾವುಕ ನುಡಿ, ಸಚಿನ್ ಕುಟುಂಬ, ಮುಕೇಶ್ ಅಂಬಾನಿ ಕುಟುಂಬ ಸೇರಿದಂತೆ ಆಪ್ತರ ಸಮ್ಮುಖದಲ್ಲಿ ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ. 

ಜಾಮ್ನಗರ್ (ಫೆ.27) ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮದುವೆ ಸಂಭ್ರಮ ಕಳೆಗಟ್ಟಿದೆ. ಮಾರ್ಚ್ 5ರಂದು ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆ ನಡೆಯಲಿದೆ. ಮದುವೆಗೆ ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ಇದೀಗ ಅರ್ಜುನ್ ಹಾಗೂ ಸಾನಿಯಾ ಜೋಡಿಗೆ ಮುಕೇಶ್ ಅಂಬಾನಿ ಕುಟುಂಬ ಜಾಮ್ನಗರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಪೂಜೆ ಹಾಗೂ ಆಪ್ತರ ಸಮಾಗಮ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ. ಅರ್ಜುನ್ ಹಾಗೂ ಸಾನಿಯಾ ಜೋಡಿಯನ್ನುದ್ದೇಶಿ ಮಾತನಾಡಿದ ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ.

ಅರ್ಜುನ್ ಸಾನಿಯಾಗೆ ಸಚಿನ್ ಭಾವುಕ ನುಡಿ

ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಕುರಿತು ಸಚಿನ್ ತೆಂಡೂಲ್ಕರ್ ಮಾತನಾಡಿದ್ದಾರೆ. ನವ ಜೋಡಿಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಸಚಿನ್, ನನಗೆ ಅರ್ಜುನ್ ತೆಂಡೂಲ್ಕರ್ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. ಯಾವಾಗ ಮಗ ಹುಡುಗಿಯನ್ನು ಕರೆದುಕೊಂಡು ಮನೆಗೆ ಬಂದು ನಮಗೆ ಪರಿಚಯಿಸುತ್ತಾನೆ, ಆವಾಗ ಮಗ ದೊಡ್ಡವನಾಗಿದ್ದಾನೆ ಅನ್ನೋದು ಅರ್ಥವಾಗುತ್ತೆ ಎಂದು ಸಚಿನ್ ಹೇಳಿದ್ದಾರೆ.

ಅರ್ಜುನ್ ಹಾಗೂ ಸಾನಿಯಾ ಚಂದೋಕ್ ಇಬ್ಬರು ಒಬ್ಬರನ್ನೊಬ್ಬರು ಅತೀಯಾಗಿ ಪ್ರೀತಿಸುತ್ತಾರೆ. ಅರ್ಜುನ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಕಾರಣ ನೀನು ಜೀವನದಲ್ಲಿ ಅತೀ ವಿಶೇಷ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಿಯಾ. ನೀನು ಎಷ್ಟು ಪ್ರೀತಿಸುತ್ತಿದ್ದೀಯಾ ಅದಕ್ಕಿಂತ ಹೆಚ್ಚು ಆಕೆ ನಿನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಇದೇ ವೇಳೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ ಸಚಿನ್ ಧನ್ಯವಾದ ಹೇಳಿದ್ದಾರೆ. ನವ ಜೋಡಿಗಳಿಗೆ ಆಶೀರ್ವಾದ ಮಾಡಲು ಇದಕ್ಕಿಂತ ಉತ್ತಮ ಸ್ಥಳ ಬೇರೆ ಇಲ್ಲ. ಈ ಕಾರ್ಯಕ್ರಮ ನಮ್ಮೆಲ್ಲರನ್ನು ಬೆಸೆದಿದೆ ಎಂದು ಸಚಿನ್ ಹೇಳಿದ್ದಾರೆ.

ಇದೇ ವೇಳೆ ನೀತಾ ಅಂಬಾನಿ ಕೂಡ ನವ ಜೋಡಿಗಳ ಕುರಿತು ಮಾತನಾಡಿದ್ದಾರೆ. ಅರ್ಜುನ್ ತೆಂಡೂಲ್ಕರ್‌ನ್ನು ಸಣ್ಣವನಿಂದ ನೋಡಿದ್ದೇನೆ. ಇದೀಗ ಅರ್ಜನ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಕುಟುಂಬ ನಮಗೆ ಬೇರೆಯಲ್ಲ. ಸಚಿನ್ ಕುಟುಂಬ ನಮ್ಮ ಕುಟುಂಬ. ನವ ಜೋಡಿಗಳಿಗೆ ನಮ್ಮ ಶುಭಹಾರೈಕೆಗಳು ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಮಾರ್ಚ್ 5ರಂದು ಮದುವೆ

ಮಾರ್ಚ್ 5 ರಂದು ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆ ನಡೆಯಲಿದೆ. ಮುಂಬೈನಲ್ಲಿ ನಡೆಯಲಿರುವ ಮದುವೆಗೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಇನ್ನು ಟೀಂ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್‌ಗೂ ಮುನ್ನ ಕೆಕೆಆರ್‌ಗೆ ಮತ್ತೊಂದು ಶಾಕ್! 18 ಕೋಟಿ ಕೊಟ್ಟ ಖರೀದಿಸಿದ ಆಟಗಾರ ಆಡೋದೇ ಡೌಟ್!
Unwanted IPL Records: ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ರೋಹಿತ್, ಮ್ಯಾಕ್ಸ್‌ವೆಲ್ ಹೆಸರಲ್ಲಿದೆ!