ಬೌಲರ್‌ಗಳಿಗಷ್ಟೇ ಅಲ್ಲ ಜರ್ನಲಿಸ್ಟ್‌ಗಳಿಗೂ ಟಕ್ಕರ್ ಕೊಟ್ಟಿದ್ದಾರೆ ರೋಹಿತ್ ಶರ್ಮಾ..!

Published : Aug 01, 2022, 06:14 PM IST
ಬೌಲರ್‌ಗಳಿಗಷ್ಟೇ ಅಲ್ಲ ಜರ್ನಲಿಸ್ಟ್‌ಗಳಿಗೂ ಟಕ್ಕರ್ ಕೊಟ್ಟಿದ್ದಾರೆ ರೋಹಿತ್ ಶರ್ಮಾ..!

ಸಾರಾಂಶ

* ರ್ನಲಿಸ್ಟ್​​ಗಳಿಗೆ ರೋಹಿತ್ ಹೇಗೆಲ್ಲಾ ಟಕ್ಕರ್ ಕೊಟ್ಟಿದ್ದಾರೆ ಗೊತ್ತಾ..? * ಪ್ರಗ್ಯಾನ್ ಓಜಾ ಮಾತಿಗೆ ಟಕ್ಕರ್ ನೀಡಿದ ಹಿಟ್‌ಮ್ಯಾನ್‌ * ಪತ್ರಕರ್ತರನ್ನೂ ಬಿಟ್ಟಿಲ್ಲ ಟೀಂ ಇಂಡಿಯಾ ನಾಯಕ

ಬೆಂಗಳೂರು(ಆ.01): ರೋಹಿತ್ ಶರ್ಮಾ, ಟೀಂ ಇಂಡಿಯಾ ಕ್ಯಾಪ್ಟನ್. ಒನ್​ಡೇ ಕ್ರಿಕೆಟ್​ನಲ್ಲಿ ಮೂರು ಡಬಲ್ ಸೆಂಚುರಿ. ವಿಶ್ವ ಕ್ರಿಕೆಟ್​ನಲ್ಲಿ ಅತಿಹೆಚ್ಚು ಬಾರಿ 150 ಪ್ಲಸ್ ರನ್. ಬೌಲರ್​ಗಳ ಪಾಲಿಗೆ ಹಿಟ್​ ಮ್ಯಾನ್. ಸಿಕ್ಸರ್ ಕಿಂಗ್. ರೋಹಿತ್ ಶರ್ಮಾ ಕೇವಲ ಬೌಲರ್​ಗಳಿಗೆ ಮಾತ್ರ ಸಿಂಹ ಸ್ವಪ್ನರಲ್ಲ. ಜರ್ನಲಿಸ್ಟ್​ಗಳಿಗೂ ಟಕ್ಕರ್ ಕೊಡ್ತಾರೆ. ಒಂದಲ್ಲ, ಎರಡಲ್ಲ, ಹಲವು ಬಾರಿ ಮೀಡಿಯಾಗೆ ಮಾತಿನ ಮೂಲಕ ಟಕ್ಕರ್ ಕೊಟ್ಟು ಜರ್ನಲಿಸ್ಟ್​ಗಳ ಬಾಯಿ ಮುಚ್ಚಿಸಿದ್ದಾರೆ. ಇಂತಹ ಒಂದು ಪ್ರಸಂಗ ಮೊನ್ನೆಯೂ ನಡೆಯಿತು. ಈ ಹಿಂದೆಯೂ ನಡೆದಿತ್ತು.

ಓಜಾಗೆ ಮಾತಿನ ಮೂಲಕ ಟಕ್ಕರ್​: 

ಮಾಜಿ ಆಟಗಾರ ಪ್ರಗ್ಯಾನ್ ಓಜಾ ಈಗ ಕಾಮೆಂಟೇಟರ್​. ಪ್ರಗ್ಯಾನ್ ಓಜಾ ಮಾತನ್ನು ಉಲ್ಲೇಖಿಸಿ, ವರದಿಗಾರರೊಬ್ಬರು ರೋಹಿತ್​​ಗೆ ಪ್ರಶ್ನೆ ಕೇಳುತ್ತಾರೆ. ನಿಮ್ಮ ಮತ್ತು ನಿಮ್ಮ ಒನ್​ಡೇ ಪಾಟ್ನರ್ ಶಿಖರ್ ಧವನ್ ನಡುವಿನ ಫ್ರೆಂಡ್​​ಶಿಪ್ ಹೇಗಿದೆ ಅಂತ. ಓಜಾ ಕಾಮೆಂಟೇಟರ್​​ ಆಗಿದ್ದಾರಾ? ಒಳ್ಳೆಯದು. ಎಂದು ಹೇಳುವ ಮೂಲಕ ಓಜಾಗೆ ಟಕ್ಕರ್ ಕೊಟ್ಟಿದ್ದಾರೆ ರೋಹಿತ್ ಶರ್ಮಾ. 

ನಾನು ಪಾಕಿಸ್ತಾನ ಕೋಚ್ ಆಗಿದ್ದರೆ ಹೇಳುತ್ತಿದ್ದೆ..!: 

2019ರ ಒನ್​ಡೇ ವರ್ಲ್ಡ್​ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ರೋಹಿತ್ ಸೆಂಚುರಿ ಬಾರಿಸಿದ್ದರು. ಭಾರತ 336 ರನ್ ಹೊಡೆದಿದ್ದರೆ, ಪಾಕ್ 212 ರನ್ ಗಳಿಸಿ ಸೋತಿತ್ತು. ಪ್ರೆಸ್​ಮೀಟ್​ಗೆ ಬಂದಿದ್ದ ರೋಹಿತ್​​ಗೆ ಪಾಕ್ ಬ್ಯಾಟಿಂಗ್​ ಲೈನ್ ಅಪ್ ರನ್ ಗಳಿಸಲು ಪರದಾಡುತ್ತಿದೆ. ಇದಕ್ಕೆ ನೀವು ಏನು ಸಲಹೆ ನೀಡುತ್ತೀರಿ ಅಂತ ಪರ್ತಕರ್ತರು ಕೇಳಿದರು. ನಾನು ಎಂದಾದರೂ ಪಾಕಿಸ್ತಾನ ಕೋಚ್ ಆದ್ರೆ ಆಗ ಹೇಳುತ್ತೇನೆ ಎಂದು ಟಕ್ಕರ್ ಕೊಟ್ಟಿದ್ದರು.

Ind vs WI ವಿಂಡೀಸ್ ಎದುರಿನ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ..?

ರಿಷಭ್ ಪಂತ್​ ಎಲ್ಲಿ? ರಿಷಭ್ ಪಂತ್ ನಂ.4 ಸ್ಲಾಟ್​ನಲ್ಲಿ: 

2019ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಿತ್ತು. ಪ್ರೆಸ್‌​ಮೀಟ್​ಗೆ ಬಂದಿದ್ದ ರೋಹಿತ್​ಗೆ, ರಿಷಭ್ ಪಂತ್ ನಂಬರ್ 4 ಸ್ಲಾಟ್​ನಲ್ಲಿ ಬ್ಯಾಟಿಂಗ್ ಬಂದಿದ್ದು ಆಶ್ಚರ್ಯವಾಯ್ತು ಎಂದು ಪ್ರರ್ತಕರ್ತರು ಪ್ರಶ್ನೆ ಹಾಕಿದ್ರು. ರಿಷಭ್ ಪಂತ್ ಎಲ್ಲಿ ಅಂತ ನೀವೇ ಕೇಳುತ್ತಿದ್ದಿರಿ. ಪಂತ್ ನಂಬರ್ 4 ಸ್ಲಾಟ್​ನಲ್ಲಿ ಎನ್ನುವ ಮೂಲಕ ಜರ್ನಲಿಸ್ಟ್​​ಗಳನ್ನು ಸುಮ್ಮನಿರಿಸಿದ್ದರು.

ನನ್ನ ಬಗ್ಗೆ ಒಳ್ಳೆಯದು ಬರಿಯಿರಿ: 

2019ರ ಸೌತ್ ಆಫ್ರಿಕಾ ​ಸರಣಿಯಲ್ಲಿ ರೋಹಿತ್​ಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಓಪನರ್ ಆಗಿ ಬಡ್ತಿ ನೀಡಲಾಗಿತ್ತು. ಈ ಬಗ್ಗೆ ಕೇಳಿದಕ್ಕೆ, ಟಾಪ್​ ಆರ್ಡರ್​ನಲ್ಲಿ ಆಡಲು ಅವಕಾಶ ಸಿಕ್ಕಾಗಲೆಲ್ಲಾ ಉತ್ತಮವಾಗಿ ಆಡುತ್ತೇನೆ. ಆಡದಿದ್ದರೆ ನೀವು ಅಂದರೆ ಮಾಧ್ಯಮದವರು ಏನೇನೋ ಬರೆಯುತ್ತಿರಿ. ಈಗ ಒಳ್ಳೆಯದನ್ನ ಬರೆಯಿರಿ ಎಂದಿದ್ದರು.

ಇವು ಜಸ್ಟ್​ ಮೂರ್ನಾಲ್ಕು ಎಕ್ಸಾಂಪಲ್​ಗಳು ಅಷ್ಟೆ. ರೋಹಿತ್ ಶರ್ಮಾ ಸಾಕಷ್ಟು ಸಲ ತಮಾಷೆಯಾಗಿಯೇ ಜರ್ನಲಿಸ್ಟ್​ಗಳಿಗೆ ಟಕ್ಕರ್ ಕೊಟ್ಟಿದ್ದಾರೆ, ಕೊಡ್ತಾಲೇ ಇದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI