ಗೆಲುವಿನೊಂದಿಗೆ WPL ಟೂರ್ನಿಗೆ RCB ಗುಡ್ ಬೈ

Published : Mar 12, 2025, 09:16 AM ISTUpdated : Mar 12, 2025, 09:34 AM IST
ಗೆಲುವಿನೊಂದಿಗೆ WPL ಟೂರ್ನಿಗೆ RCB ಗುಡ್ ಬೈ

ಸಾರಾಂಶ

ಸತತ ಸೋಲಿನ ಬಳಿಕ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ 11 ರನ್‌ಗಳಿಂದ ಗೆದ್ದು ಡಬ್ಲ್ಯುಪಿಎಲ್‌ಗೆ ವಿದಾಯ ಹೇಳಿದೆ. ಮುಂಬೈ ಸೋತ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ತಲುಪಿದೆ. ಮುಂಬೈ ಮತ್ತು ಗುಜರಾತ್ ಜೈಂಟ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಗೆದ್ದ ತಂಡ ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ಮುಂಬೈ: ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್‌ ಆರ್‌ಸಿಬಿ ಗೆಲುವಿನೊಂದಿಗೆ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ಗೆ ವಿದಾಯ ಹೇಳಿದೆ. ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 11 ರನ್ ಗೆಲುವು ಸಾಧಿಸಿತು. ಆಡಿದ 8 ಪಂದ್ಯಗಳಲ್ಲಿ 3 ಜಯದೊಂದಿಗೆ 6 ಅಂಕ ಸಂಪಾದಿಸಿದ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಯಿತು. ಇನ್ನು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್‌ 8ರಲ್ಲಿ 5 ಗೆಲುವಿನೊಂದಿಗೆ 2ನೇ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿತು.

ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 3 ವಿಕೆಟ್‌ಗೆ 199 ರನ್ ಕಲೆಹಾಕಿತು. ಶಬ್ಬಿನೇನಿ ಮೇಘನಾ 13 ಎಸೆತಕ್ಕೆ 26 ರನ್ ಗಳಿಸಿ ಔಟಾದ ಬಳಿಕ, ಸ್ಮೃತಿ ಮಂಧನಾ ಹಾಗೂ ಎಲೈಸಿ ಪೆರಿ ತಂಡ ದೊಡ್ಡ ಮೊತ್ತ ಗಳಿಸಲು ನೆರವಾದರು. ಸ್ಮೃತಿ 37 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 53 ರನ್ ಸಿಡಿಸಿದರೆ, ಎಲೈಸಿ ಪೆರಿ 38 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೊಂದಿಗೆ ಔಟಾಗದೆ 49 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್ 22 ಎಸೆತಕ್ಕೆ 36, ಜಾರ್ಜಿಯಾ ವೇರ್‌ಹ್ಯಾಮ್ 10 ಎಸೆತಕ್ಕೆ ಔಟಾಗದೆ 31 ರನ್ ಗಳಿಸಿದರು.

ದೊಡ್ಡ ಗುರಿ ಬೆನ್ನತ್ತಿದ ಮುಂಬೈ 20 ಓವರಲ್ಲಿ 9 ವಿಕೆಟ್‌ಗೆ 188 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಶೀವರ್ ಬ್ರಂಟ್ ಏಕಾಂಗಿ ಹೋರಾಟ ತಂಡಕ್ಕೆ ನೆರವಾಗಲಿಲ್ಲ. ಅವರು 35 ಎಸೆತಗಳಲ್ಲಿ 69 ರನ್ ಸಿಡಿಸಿದರು. ಸ್ನೇಹ ರಾಣಾ 3 ವಿಕೆಟ್ ಕಿತ್ತರು.

ಡೆಲ್ಲಿ ಸತತ 3ನೇ ಬಾರಿ ಫೈನಲ್‌ಗೆ

ಮುಂಬೈ ಸೋಲಿನೊಂದಿಗೆ ಡೆಲ್ಲಿ ತಂಡ ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಯಿತು. ಈ ಮೂಲಕ ತಂಡ ನೇರವಾಗಿ ಫೈನಲ್ ಪ್ರವೇಶಿಸಿದೆ. ತಂಡಕ್ಕಿದು ಸತತ 3ನೇ ಫೈನಲ್. ಮೊದಲೆರಡು ಆವೃತ್ತಿಗಳಲ್ಲೂ ತಂಡ ಫೈನಲ್‌ಗೇರಿತ್ತು. ಆದರೆ ಕ್ರಮವಾಗಿ ಮುಂಬೈ ಹಾಗೂ ಆರ್‌ಸಿಬಿ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು.

01 ನೇ ಜಯ: ಮುಂಬೈ ವಿರುದ್ಧ ಆರ್‌ಸಿಬಿ ಈ ಬಾರಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಆರಂಭಿಕ ಪಂದ್ಯದಲ್ಲಿ ಮುಂಬೈ ಗೆದ್ದಿತ್ತು.

ನಾಳೆ ಎಲಿಮಿನೇಟರ್:

ಮುಂಬೈ-ಗುಜರಾತ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಮುಂಬೈ ಇಂಡಿಯನ್ ಹಾಗೂ 3ನೇ ಸ್ಪಾನಿಯಾದ ಗುಜರಾತ್ ಜೈಂಟ್ಸ್ ನಡುವೆ ಗುರುವಾರ ಎಲಿಮಿನೇಟ‌ರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್ ಗೇರಲಿದೆ. ಮುಂಬೈ 2ನೇ ಬಾರಿ ಫೈನಲ್‌ಗೇರುವ ಕಾತರದಲ್ಲಿದೆ. ಗುಜರಾತ್ ಚೊಚ್ಚಲ ಪೈನಲ್ ಮೇಲೆ ಕಣ್ಣಿಟ್ಟಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ AI ಚಿಪ್ ಇದೆ..': ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕನಿಂದ ವಿಚಿತ್ರ ಆರೋಪ!
'ಭಯ್ಯಾ ಅಲ್ಲ, ಬ್ರದರ್'; ರಿಂಕು ಸಿಂಗ್ ತಮ್ಮ ಫ್ಯಾಮಿಲಿಗೆ ಸುನಿಲ್‌ ನರೈನ್ ಪರಿಚಯಿಸಿದ ವಿಡಿಯೋ ವೈರಲ್!