ರವಿಚಂದ್ರನ್ ಅಶ್ವಿನ್ 2011ರಲ್ಲಿ ನವದೆಹಲಿಯಲ್ಲಿ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಭಾರತ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ತಮಿಳುನಾಡಿನ ಮೊದಲ ಆಟಗಾರ ಎನ್ನುವ ಹಿರಿಮೆಗೆ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದಾರೆ.
ಧರ್ಮಾಶಾಲಾ(ಮಾ.07): ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೀಗ ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 100ನೇ ಟೆಸ್ಟ್ ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪರ 100 ಟೆಸ್ಟ್ ಪಂದ್ಯವನ್ನಾಡಿದ 14ನೇ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.
ರವಿಚಂದ್ರನ್ ಅಶ್ವಿನ್ 2011ರಲ್ಲಿ ನವದೆಹಲಿಯಲ್ಲಿ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಭಾರತ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ತಮಿಳುನಾಡಿನ ಮೊದಲ ಆಟಗಾರ ಎನ್ನುವ ಹಿರಿಮೆಗೆ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ 37 ವರ್ಷದ ಅಶ್ವಿನ್, ಭಾರತ ಪರ 100 ಟೆಸ್ಟ್ ಪಂದ್ಯವನ್ನಾಡಿದ ಅತಿಹಿರಿಯ ಕ್ರಿಕೆಟಿಗ ಎನ್ನುವ ಕೀರ್ತಿಗೂ ಪಾತ್ರರಾಗಿದ್ದಾರೆ.
Ravichandran Ashwin celebrates a century of brilliance 🤩
➡ https://t.co/E1y6IIGNcc | pic.twitter.com/y6wEOdyLsi
undefined
ಇಂಗ್ಲೆಂಡ್ ಎದುರು ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಾಕ್ ಕ್ರಾಲಿ ಅವರನ್ನು ಬಲಿ ಪಡೆಯುವ ಮೂಲಕ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ಅಶ್ವಿನ್, ಭಾರತ ಪರ ಅನಿಲ್ ಕುಂಬ್ಳೆ ಬಳಿಕ 500+ ವಿಕೆಟ್ ಕಬಳಿಸಿದ ಎರಡನೇ ಟೀಂ ಇಂಡಿಯಾ ಬೌಲರ್ ಎನ್ನುವ ದಾಖಲೆ ಬರೆದಿದ್ದರು.
ಬ್ಯಾನ್ ಆಗಿದ್ದ ಸಿಮೋನಾ ಟೆನಿಸಲ್ಲಿ ಸ್ಪರ್ಧಿಸಲು ಅರ್ಹ..!
ಈ ಟೆಸ್ಟ್ ಪಂದ್ಯಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್, ಭಾರತ ಪರ 99 ಟೆಸ್ಟ್ ಪಂದ್ಯಗಳನ್ನಾಡಿ 23.91ರ ಸರಾಸರಿಯಲ್ಲಿ 51.3ರ ಸ್ಟ್ರೈಕ್‌ರೇಟ್‌ನಲ್ಲಿ 507 ವಿಕೆಟ್ ಕಬಳಿಸಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಕೆಳಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಕೂಡಾ ಆಗಿರುವ ಅಶ್ವಿನ್ 5 ಶತಕ ಸಹಿತ 26.47ರ ಬ್ಯಾಟಿಂಗ್ ಸರಾಸರಿಯಲ್ಲಿ 3309 ರನ್ ಬಾರಿಸಿದ್ದಾರೆ.
100ನೇ ಟೆಸ್ಟ್ ಕ್ಯಾಪ್ ನೀಡಿದ ದ್ರಾವಿಡ್: ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಧರ್ಮಶಾಲಾ ಟೆಸ್ಟ್ ಪಂದ್ಯವು ರವಿಚಂದ್ರನ್ ಅಶ್ವಿನ್ ಪಾಲಿಗೆ 100ನೇ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ ಬಿಸಿಸಿಐ ವತಿಯಿಂದ ಈ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಸ್ಪಿನ್ ಲೆಜೆಂಡ್ ಅಶ್ವಿನ್ ಅವರನ್ನು ಸನ್ಮಾನಿಸಲಾಯಿತು. ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್, 100ನೇ ಟೆಸ್ಟ್ ಪಂದ್ಯದ ವಿಶೇಷ ಕ್ಯಾಪ್ ನೀಡಿ ಅಶ್ವಿನ್ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಅಶ್ವಿನ್ ಪತ್ನಿ ಹಾಗೂ ಇಬ್ಬರು ಮಕ್ಕಳು ಮೈದಾನದಲ್ಲಿ ಹಾಜರಿದ್ದರು.