
ರಾಂಚಿ[ಅ.20]: ಉಪನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ ಸಿಡಿಸಿ, ಕೆಲ ಹೊತ್ತಿನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ 267 ರನ್’ಗಳ ಜತೆಯಾಟಕ್ಕೂ ತೆರೆ ಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಇದೀಗ ದ್ವಿಶತಕದತ್ತ ಮುನ್ನುಗ್ಗುತ್ತಿದ್ದಾರೆ.
224/3 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ-ರಹಾನೆ ತಂಡವನ್ನು ಮುನ್ನೂರರ ಗಡಿ ದಾಟಿಸಿತು. ಅಜಿಂಕ್ಯ ರಹಾನೆ 167 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸಿದರು. ಇದರೊಂದಿಗೆ ತವರಿನಲ್ಲಿ ಬರೋಬ್ಬರಿ ಮೂರು ವರ್ಷಗಳ ಬಳಿಕ ರಹಾನೆ ಮೊದಲ ಶತಕ ಬಾರಿಸಿದರು. 2016ರ ಅಕ್ಟೋಬರ್’ನಲ್ಲಿ ರಹಾನೆ ಕಡೆಯ ಬಾರಿಗೆ ಭಾರತದಲ್ಲಿ ಶತಕ ಸಿಡಿಸಿದ್ದರು. ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್’ನಲ್ಲಿ ಬಾರಿಸಿದ 11ನೇ ಶತಕವಾಗಿದೆ.
ಅಜಿಂಕ್ಯ ರಹಾನೆ ವಿಕೆಟ್ ಒಪ್ಪಿಸುವ ಮುನ್ನ 192 ಎಸೆತಗಳಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 115 ರನ್ ಬಾರಿಸಿದ್ದರು. ಜಾರ್ಜ್ ಲಿಂಡೆ ಬೌಲಿಂಗ್’ನಲ್ಲಿ ವಿಕೆಟ್ ಕೀಪರ್ ಹೆನ್ರಿಚ್ ಕ್ಲಸೆನ್ ಬೌಲಿಂಗ್’ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಅಂದಹಾಗೆ ಲಿಂಡೆಗಿಂದು ಟೆಸ್ಟ್ ಕ್ರಿಕೆಟ್’ನಲ್ಲಿ ಚೊಚ್ಚಲ ವಿಕೆಟ್ ಆಗಿದೆ.
ಇದೀಗ 82 ಓವರ್ ಮುಕ್ತಾಯದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 332 ರನ್ ಬಾರಿಸಿದ್ದು, ರೋಹಿತ್ ಶರ್ಮಾ 184 ಹಾಗೂ ರವೀಂದ್ರ ಜಡೇಜಾ 7 ರನ್ ಬಾರಿಸಿದ್ದಾರೆ. ಇನ್ನು ಕೇವಲ 16 ರನ್ ಬಾರಿಸಿದರೆ ರೋಹಿತ್ ಟೆಸ್ಟ್ ಕ್ರಿಕೆಟ್’ನಲ್ಲಿ ಚೊಚ್ಚಲ ದ್ವಿಶತಕ ಪೂರೈಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.