Spirit of Cricket| ಗೆಲುವಿನ ಬಳಿಕ ಧೋನಿ ಎದುರು ಕೈಕಟ್ಟಿ ನಿಂತ ಪಾಕ್ ಆಟಗಾರರು!

By Suvarna NewsFirst Published Oct 25, 2021, 11:17 AM IST
Highlights

* ವಿಶ್ವಕಪ್‌ನಲ್ಲಿ ಭಾರತವನ್ನು ಮೊದಲ ಬಾರಿಗೆ ಸೋಲಿಸಿದ ನಂತರ ಪಾಕ್

* ಗೆಲುವಿನ ಬಳಿಕ ಧೋನಿ ಜೊತೆ ಪಾಕ್ ಆಟಗಾರರ ಮಾತುಕತೆ

* ಮಹಿ ಎದುರು ವಿದ್ಯಾರ್ಥಿಗಳಂತೆ ನಿಂತಿದ್ದ ಪಾಕ್ ಕ್ರಿಕೆಟಿಗರು

ಯುಎಇ(ಅ.25): ವಿಶ್ವಕಪ್‌ನಲ್ಲಿ(ICC World Cup T20) ಭಾರತವನ್ನು(India) ಮೊದಲ ಬಾರಿಗೆ ಸೋಲಿಸಿದ ನಂತರ ಪಾಕಿಸ್ತಾನಿ(Pakistan) ಆಟಗಾರರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಇಡೀ ತಂಡವು ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದ ರೀತಿ ಗಮನಿಸಿದರೆ ಅವರಿಗೆ ಈ ಗೆಲುವು ವಿಶ್ವಕಪ್‌ಗಿಂತ ಅಧಿಕವಾಗಿತ್ತು ಎಂಬುದು ಸ್ಪಷ್ಟಪಡಿಸುತ್ತಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ಪಂದ್ಯವಿರಲಿ ಅದು ಹೈವೋಲ್ಟೇಜ್ ಮ್ಯಾಚ್‌ ಆಗಿರುತ್ತದೆ. ಪಂದ್ಯದ ನಂತರ ಆಟಗಾರರು ಕೊಂಚ ನಿರಾಳವಾದಾಗ ಮಾತುಕತೆ ಶುರುವಾಯಿತು.

ಪಾಕಿಸ್ತಾನಿ ಕ್ರಿಕೆಟಿಗರಲ್ಲಿ ಹೆಚ್ಚು ಅಭಿಮಾನವಿರುವ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕ್ರಿಕೆಟಿಗ ಎಂದರೆ ಮಹೇಂದ್ರ ಸಿಂಗ್ ಧೋನಿ(Mahindra Singh Dhoni). ಹೀಗಿರುವಾಗ ಬಾಬರ್ ಅಜಮ್ ಅಥವಾ ಶೋಯೆಬ್ ಮಲಿಕ್, ಇಮಾದ್ ವಾಸಿಮ್ ಹಾಗೂ ಶಹನವಾಜ್ ಧಾನಿ ಇರಲಿ ಎಲ್ಲರೂ ಧೋನಿಯೊಂದಿಗೆ ಮಾತನಾಡಲು ಉತ್ಸುಕರಾಗಿದ್ದರು. ಇದನ್ನು ಕಂಡ ಮಹಿ ಕೂಡಾ ಯಾರಿಗೂ ನಿರಾಸೆ ಮಾಡಲಿಲ್ಲ.

 
 
 
 
 
 
 
 
 
 
 
 
 
 
 

A post shared by ICC (@icc)

ಧೋನಿಯ ಬಹುದೊಡ್ಡ ಅಭಿಮಾನಿ ಶಹನವಾಜ್

ಇನ್ನು ಭಾನುವಾರ ರಾತ್ರಿ, ಶಹನವಾಜ್ ಧಾನಿಯ(Shahnawaz Dahani) ಮುಖದಲ್ಲಿದ್ದ ಸಂತೋಷ ಎಲ್ಲರಿಗೂ ಎದ್ದು ಕಾಣುತ್ತಿತ್ತು. ಒಂದೆಡೆ ಅವರ ತಂಡ ವಿಶ್ವಕಪ್‌ನಲ್ಲಿ ಭಾರತವನ್ನು ಮೊದಲ ಬಾರಿ ಸೋಲಿಸಿದ್ದರೆ, ಅತ್ತ ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತ್ತು. ಧೋನಿ ತನ್ನ ಪಾಕಿಸ್ತಾನಿ ಅಭಿಮಾನಿಯನ್ನು ನಿರಾಸೆಗೊಳಿಸಲಿಲ್ಲ. ಇಬ್ಬರೂ ಕೆಲ ಸಮಯ ಸಂಭಾಷಣೆ ನಡೆಸಿದ್ದಾರೆ. ಬಳಿಕ ಒಟ್ಟಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಅಭ್ಯಾಸದ ಸಮಯದಲ್ಲಿ ಕೂಡ ಶಹನವಾಜ್, ಧೋನಿಯ ಗಮನವನ್ನು ಸೆಳೆಯುತ್ತಿದ್ದರು.

ಬಾಬರ್ ಮರೆಯಲ್ಲ ಧೋನಿ ಭೇಟಿ

ಬಾಬರ್ ಅಜಮ್ ಈಗಿನ ಅಗ್ರ ಮೂರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂಬುವುದರಲ್ಲಿ ಅನುಮಾನವಿಲ್ಲ. ಅವರ ನಾಯಕತ್ವದಲ್ಲಿ ಪಾಕ್‌ ತಂಡ ವಿಶ್ವಕಪ್‌ನಲ್ಲಿ ಮೊದಲ ಬಾರಿ ಭಾರತವನ್ನು ಸೋಲಿಸಿದೆ. 1992ರ ವಿಶ್ವಕಪ್ ಗೆದ್ದ ಇಮ್ರಾನ್ ಖಾನ್ (ಈಗ ಪಾಕಿಸ್ತಾನದ ಪ್ರಧಾನಿ) ತಂಡವೂ ಮಾಡಲಾಗದ ಸಾಧನೆಯನ್ನು ಅಜಮ್ ನಾಯಕತ್ವದಲ್ಲಿ ನಡೆದಿದೆ. ಭಾರತವನ್ನು ಸೋಲಿಸಿದ ನಂತರ ಬಾಬರ್, ಧೋನಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಬಹುಶಃ ಅವರಲ್ಲಿ ಆಟವನ್ನು ಹೇಗೆ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರೆಂಬುವುದು ಆಗಿರಬಹುದು. ಆದರೆ ನಿಜಕ್ಕೂ ಇಬ್ಬರ ನಡುವೆ ನಡೆದ ಮಾತುಕತೆ ಏನು ಎಂಬುವುದು ಧೋನಿ, ಬಾಬರ್ ಮತ್ತು ಮಲಿಕ್ ಅವರಿಗೆ ಮಾತ್ರ ತಿಳಿದಿದೆ. ಆದರೆ ಧೋನಿ ಏನು ಹೇಳಿದ್ದರೂ ಅದನ್ನು ಪಾಕಿಸ್ತಾನಿ ಕ್ರಿಕೆಟಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂಬುದು ಖಚಿತ.

Pakistan team players having a chat with MS Dhoni after the match ❤️ | | pic.twitter.com/rlR2NCUYo9

— DHONI Trends™ 🏆 (@TrendsDhoni)

ವಿದ್ಯಾರ್ಥಿಗಳಂತೆ ಕೈಕಟ್ಟಿ ನಿಂತಿದ್ದ ಪಾಕ್ ಆಟಗಾರರು

ಧೋನಿಯನ್ನು ಭಾರತ ತಂಡದ ಮಾರ್ಗದರ್ಶಕರಾಗಿ ಯುಎಇಗೆ ಕಳುಹಿಸಲಾಗಿದೆ. ಆದರೆ, ಪಂದ್ಯದ ನಂತರ ಅವರು ಪಾಕಿಸ್ತಾನಿ ಆಟಗಾರರಿಗೆ ಸಲಹೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಓರ್ ಹಿರಿಯರಂತೆ, ಧೋನಿ ಬಹಳ ಎಚ್ಚರದಿಂದಿದ್ದರು. ಆದರೆ ಪಾಕಿಸ್ತಾನದ ಕ್ರಿಕೆಟಿಗರಾದ ಬಾಬರ್, ಮಲಿಕ್, ವಾಸಿಮ್ ಅನನುಭವಿಗಳಂತೆ ತಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರ ಮಾತುಗಳನ್ನು ಕೇಳುತ್ತಿದ್ದರು.

click me!