
ಹರಾರೆ(ಏ.30): ಪಾಕಿಸ್ತಾನ ವಿರುದ್ಧ ಗುರುವಾರ(ಏ.29)ದಿಂದ ಆರಂಭಗೊಂಡ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 176 ರನ್‌ಗಳಿಗೆ ಆಲೌಟ್ ಆಗಿದೆ.
ಪಾಕಿಸ್ತಾನದ ಮಾರಕ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ಹಸನ್ ಅಲಿ ತಲಾ 4 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 103 ರನ್ ಗಳಿಸಿದ್ದು, ಇನ್ನು ಕೇವಲ 73 ರನ್‌ಗಳಿಂದ ಹಿಂದಿದೆ. ಪಾಕಿಸ್ತಾನ ಪರ ಆರಂಭಿಕರಾದ ಇಮ್ರಾನ್ ಬಟ್(43) ಹಾಗೂ ಆಬಿದ್ ಅಲಿ(56) ಮುರಿಯದ ಶತಕದ ಜತೆಯಾಟವಾಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ
ಸ್ಕೋರ್:
ಜಿಂಬಾಬ್ವೆ 176/10
ಪಾಕಿಸ್ತಾನ 103/0
ದಿಮುತ್, ಲಹಿರು ಶತಕ: ಶ್ರೀಲಂಕಾ ಮೇಲುಗೈ
ಕ್ಯಾಂಡಿ: ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಉತ್ತಮ ಆರಂಭ ಪಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ತಂಡ, ನಾಯಕ ದಿಮುತ್ ಕರುಣರತ್ನೆ(118) ಹಾಗೂ ಲಹಿರು ತಿರಿಮನ್ನೆ(131*) ಬಾರಿಸಿದ ಶತಕಗಳ ನೆರವಿನಿಂದ ಮೊದಲ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸಲ್ಲಿ 1 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿದೆ.
ಸ್ಕೋರ್:
ಲಂಕಾ (ಮೊದಲ ದಿನದಂತ್ಯಕ್ಕೆ) 291/1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.