IPL retention:ಕೆಎಲ್ ರಾಹುಲ್‌ಗೆ 20 ಕೋಟಿ, ರಶೀದ್‌ಗೆ 16 ಕೋಟಿ ರೂ ಆಫರ್, 1 ವರ್ಷ ನಿಷೇಧ ಭೀತಿಯಲ್ಲಿ ಪ್ಲೇಯರ್ಸ್!

By Suvarna NewsFirst Published Nov 30, 2021, 6:40 PM IST
Highlights
  • ಐಪಿಎಲ್ ಆಟಗಾರರ ಉಳಿಸಿಕೊಳ್ಳಲು ಫ್ರಾಂಚೈಸಿಗಳ ಹರಸಾಹಸ
  • ನಿಯಮ ಉಲ್ಲಂಘನೆ ಆರೋಪದಡಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ವಿರುದ್ಧ ದೂರು
  • ಆರೋಪ ಸಾಬೀತಾದರೆ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್

ಮುಂಬೈ(ನ.30): ಐಪಿಎಲ್ 2022ರ(IPL 2022) ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇಂದು(ನ.30) ತಂಡದಲ್ಲಿ ಉಳಿಯುವ ಆಟಗಾರರ ಪಟ್ಟಿಯನ್ನು 8 ಫ್ರಾಂಚೈಸಿಗಳು ಪ್ರಕಟಿಸಬೇಕು. ಇದರ ನಡುವೆ ಕೆಎಲ್ ರಾಹುಲ್(KL Rahul) ಹಾಗೂ ರಶೀದ್ ಖಾನ್(Rashid Khan) ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐಗೆ(BCCI) ಫ್ರಾಂಚೈಸಿಗಳು ದೂರು ನೀಡಿದೆ. ಈ ದೂರಿನ ತನಿಖೆಗೆ ಬಿಸಿಸಿಐಗೆ ಮುಂದಾಗಿದೆ. ಆರೋಪ ಸಾಬೀತಾದಲ್ಲಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್(Ban) ಆಗಲಿದ್ದಾರೆ.

ಐಪಿಎಲ್ 2022ರಲ್ಲಿ 10 ತಂಡಗಳು ಹೋರಾಟ ನಡಸಲಿದೆ. ಹೀಗಾಗಿ ಇದೇ ತಿಂಗಳಲ್ಲಿ ಮೆಗಾ ಐಪಿಎಲ್ ಹರಾಜು(IPL Auction) ನಡೆಯಲಿದೆ. ಇದಕ್ಕೂ ಮುನ್ನ 8 ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನುಉಳಿಸಿಕೊಳ್ಳಲು(retention)  ಅವಕಾಶ ನೀಡಲಾಗಿದೆ. ಇನ್ನುಳಿದ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಆದರೆ ಕೆಎಲ್ ರಾಹುಲ್ ಹಾಗೂ ರಶೀದ್ ಕಾನ್ ಖರೀದಿಸಲು ಲಖ್ನೌ ಫ್ರಾಂಚಿಸಿ( Lucknow franchise) ಇಬ್ಬರು ಆಟಗಾರರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಾಲಿ ಫ್ರಾಂಚೈಸಿ ತೆೊರೆಯಲು ರಾಹುಲ್ ಹಾಗೂ ರಶೀದ್ ಖಾನ್ ತೆರೆ ಮರೆ ಕರಸತ್ತು ನಡೆಸಿದ್ದಾರೆ ಎಂದು ಪಂಜಾಬ್ ಕಿಂಗ್ಸ್(Punjab Kings) ಹಾಗೂ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಎರಡು ಫ್ರಾಂಚೈಸಿಗಳಿಂದ ಅಧಿಕೃತ ದೂರು ಬಂದಿಲ್ಲ. ಆದರೆ ಮಾತಿನ ಮೂಲಕ ಎರಡೂ ಫ್ರಾಂಚೈಸಿಗಳು ದೂರು ನೀಡಿದೆ. ಆದರೆ ಲಕ್ನೌ ತಂಡ, ತಮ್ಮ ಆಟಗಾರರನ್ನು ಸೆಳೆಯಲು ಆಮಿಷ ಒಡ್ಡುತ್ತಿರುವುದು ಗಮನಕ್ಕೆ ಬಂದಿದೆ. ಇಬ್ಬರು ಆಟಗಾರರು ಇದೀಗ ಹಾಲಿ ತಂಡ ತೊರೆಯಲು ಕಾರಣಗಳನ್ನು ಹೇಳುತ್ತಿದ್ದಾರೆ. ಇದು ಐಪಿಎಲ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ಎರಡು ಫ್ರಾಂಚೈಸಿಗಳು ಬಿಸಿಸಿಐಗ ಗಮನಕ್ಕೆ ತಂದಿದೆ. ಈ ರೀತಿ ವಿಚಾರಗಳನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಲಿದೆ. ನಿಯಮಕ್ಕೆ ವಿರುದ್ಧವಾಗಿ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಸ್ಪರ್ಧಾತ್ಮಕ ಹಾಗೂ ಕ್ರೀಡಾ ಸ್ಪೂರ್ತಿ ಅವಶ್ಯಕತೆ ಇದೆ. ಹೀಗಾಗಿ ಬಿಸಿಸಿಐ ಈ ಕುರಿತು ಗಮನಹರಿಸಲಿದೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಮೂಲಗಳ ಪ್ರಕಾರ RPSG ಮಾಲೀಕತ್ವದ ಲಖ್ನೌ ಫ್ರಾಂಚೈಸಿ ಕೆಎಲ್ ರಾಹುಲ್‌ಗೆ ಬರೋಬ್ಬರಿ 20 ಕೋಟಿ ರೂಪಾಯಿ ಆಫರ್ ನೀಡಲಾಗಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 16 ಕೋಟಿ ರೂಪಾಯಿ ಆಫರ್ ನೀಡಲಾಗಿದೆ. ಹೀಗಾಗಿ ಇಬ್ಬರು ಆಟಗಾರರು ತಂಡ ತೊರೆಯಲು ಮುಂದಾಗಿದ್ದಾರೆ. ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ರಿಟೈನ್ ಮಾಡಿಕೊಳ್ಳಲು ಪಂಜಾಬ್ ಹಾಗೂ ಹೈದರಾಬಾದ್ ಫ್ರಾಂಚೈಸಿ ಮುಂದಾಗಿದೆ. ಆದರೆ ಸದ್ಯ ರಾಹುಲ್‌ಗೆ 11 ಕೋಟಿ ರೂಪಾಯಿ ಸಂಭಾವನೆ ಇದ್ದರೆ, ರಶೀದ್ ಖಾನ್‌ 9 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. 

ಒಂದು ತಂಡದ ಒಪ್ಪಂದದಲ್ಲಿರುವ ಆಟಗಾರರು ಏಕಕಾಲಕ್ಕೆ ಮತ್ತೊಂದು ತಂಡದ ಜೊತೆ ಒಪ್ಪಂದ ಮಾಡಿಕೊಳ್ಳುವಂತಿಲ್ಲ. ಇದಕ್ಕೆ ಪ್ರಯತ್ನಿಸುವಂತಿಲ್ಲ. ಇದು ಲೀಗ್ ನಿಯಮಕ್ಕೆ ವಿರುದ್ಧವಾಗಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್ ಒಪ್ಪಂದದಲ್ಲಿದ್ದ ರವೀಂದ್ರ ಜಡೇಜಾ, ಮತ್ತೊಂದು ಫ್ರಾಂಚೈಸಿ ಜೊತೆ ಒಪ್ಪಂದಕ್ಕೆ ಮುಂದಾಗಿದ್ದರು. ಈ ಕುರಿತು ರಾಜಸ್ಥಾನ ರಾಯಲ್ಸ್ ದೂರು ನೀಡಿತ್ತು. ಪರಿಣಾಮ ರವೀಂದ್ರ ಜಡೇಜಾ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗಿದ್ದರು.

ಲೀಗ್ ಟೂರ್ನಿಗಳ ನಿಯಮದಲ್ಲಿ ಇದು ನಿಯಮಕ್ಕೆ ವಿರುದ್ಧ ಚಟುವಟಿಕೆಯಾಗಿದೆ. ಫುಟ್ಬಾಲ್ ಲೀಗ್ ಟೂರ್ನಿಗಳಲ್ಲೂ ಇದೇ ನಿಯಮ ಚಾಲ್ತಿಯಲ್ಲಿದೆ. ಇದು ಕ್ರಿಕೆಟ್‌ಗೆ ಅನ್ವಯವಾಗುತ್ತದೆ. 

click me!