
ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್, ಕರ್ನಾಟಕದ ಮಾಜಿ ಪ್ಲೇಯರ್ ಕೆ.ಎಸ್.ಭರತ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ಪುನರ್ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಟೀಂ ಇಂಡಿಯಾ ಪರ ಅಲ್ಲ. ಯುಎಇ ಕ್ರಿಕೆಟ್ ತಂಡದ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗಿದ್ದಾರೆ.
cooling-off period ಮುಗಿದ ಬೆನ್ನಲ್ಲೇ ಯುಎಇ ರಾಷ್ಟ್ರೀಯ ತಂಡದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. 2023 ಮತ್ತು 2024 ರ ನಡುವೆ ಏಳು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ನಿವೃತ್ತಿ ಬಳಿಕ ಭರತ್ ವಿಶ್ವದ ಯಾವುದೇ ಮೂಲೆಯಲ್ಲೂ ಟಿ-20 ಲೀಗ್‌ಗಳು ನಡೆದರೂ ಅವರು ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.
ಭರತ್ ಅಬುಧಾಬಿ ಟಿ10ಯಲ್ಲಿ ಎಮಿರೇಟ್ಸ್ ಈಗಲ್ಸ್ ಪರ ಆಟವಾಡುತ್ತಿದ್ದಾರೆ. ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ನಿಮ್ಮ ದೇಶದ ಪರ ಟೆಸ್ಟ್ ಕ್ರಿಕೆಟ್ ಆಡುವುದು ಒಂದು ಅತ್ಯುನ್ನತ ಅನುಭವ. ಅದನ್ನು ಮೀರಿಸುವಂಥದ್ದು ಯಾವುದೂ ಇಲ್ಲ. ಆದರೆ ಒಬ್ಬ ಆಟಗಾರನಾಗಿ ನೀವು ಮಾಡಬೇಕೆಂದಿರುವುದು ಆಟವನ್ನು ಆಡುವುದು ಮಾತ್ರ. ನಾನು ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ಎಲ್ಲೋ ನನ್ನಲ್ಲಿ ಇನ್ನೂ ಆ ಅಂತರರಾಷ್ಟ್ರೀಯ ದಿನಗಳಿವೆ ಎಂದು ನನಗೆ ಅನಿಸಿತು. ಅದಕ್ಕಾಗಿಯೇ ನಾನು ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ಯೋಜನೆ. ನಾನಿನ್ನೂ ಕೂಲಿಂಗ್-ಆಫ್ ಅವಧಿ ಪೂರ್ಣಗೊಳಿಸಬೇಕಾಗಿದೆ. ಫೆಬ್ರವರಿಯಲ್ಲಿ, ಅದು ಪೂರ್ಣಗೊಳ್ಳುತ್ತದೆ. ಬಹುಶಃ ಅದರ ನಂತರ ನಾನು ನಿಮಗೆ ಹೆಚ್ಚಿನದನ್ನು ಹೇಳಲು ಸಾಧ್ಯವಾಗುತ್ತದೆ. ಇದೇ ವೇಳೆ ದುಬೈನಲ್ಲಿರುವ ಕ್ರಿಕೆಟ್ ವ್ಯವಸ್ಥೆಗಳನ್ನ ಕೊಂಡಾಡಿ.. ಯುಎಇ ಕ್ರಿಕೆಟ್ ನನ್ನನ್ನು ಸ್ವಾಗತಿಸಲು ಮತ್ತು ಅವರ ಸೌಲಭ್ಯಗಳನ್ನು ಬಳಸಲು ನನಗೆ ಅವಕಾಶ ನೀಡಿದೆ. ನೀವು ಆಡುವ ಆಟಗಾರರ ಗುಣಮಟ್ಟವು ದೇಶೀಯ ರಚನೆಗೆ ಉತ್ತಮವಾಗಿದೆ. ಯುಎಇ ನೀವು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಫ್ಘಾನಿಸ್ತಾನ, ಶ್ರೀಲಂಕಾದ ಎಲ್ಲಾ ರೀತಿಯ ಕ್ರಿಕೆಟಿಗರನ್ನು ಪಡೆಯುವ ಸ್ಥಳವಾಗಿದೆ ಎಂದರು.
ಇಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಬಹುಶಃ ನಾನು ಟೆನ್ನಿಸ್ ಚೆಂಡಿನಲ್ಲಿ ಆಡುತ್ತಿದ್ದ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಬೇಕಾಗಬಹುದು. ನಾವು ಯೋಚಿಸುವಷ್ಟರಲ್ಲೇ ಕೇವಲ ಎರಡು ಎಸೆತಗಳಲ್ಲಿ ಪಂದ್ಯದ ಚಿತ್ರಣ ಕ್ಷಣಾರ್ಧದಲ್ಲಿ ಬದಲಾಗಿಬಿಡುತ್ತದೆ. ಇಲ್ಲವೇ ಎರಡು ಡಾಟ್ ಬಾಲ್‌ಗಳು ಬಿದ್ದರೆ ಆಟ ಮತ್ತೆ ನಮ್ಮ ಹಿಡಿತಕ್ಕೆ ಬರುತ್ತದೆ. ಇದು ಅಷ್ಟು ಸುಲಭದ ಮಾದರಿಯಲ್ಲ, ಆದರೂ ನಾನು ಇದನ್ನು ಆನಂದಿಸುತ್ತಿದ್ದೇನೆ ಎಂದು ಅವರು ಹೇಳಿದರು. ರಿಚರ್ಡ್ ಗ್ಲೀಸನ್ ನೇತೃತ್ವದ ಅರೇಬಿಯನ್ ಏಸಸ್ ವಿರುದ್ಧ ಎಮಿರೇಟ್ಸ್ ಈಗಲ್ಸ್ ತಂಡವು 10 ವಿಕೆಟ್‌ಗಳಿಂದ ಸೋಲನುಭವಿಸಿದ್ದರಿಂದ ಭರತ್ ಅವರಿಗೆ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ. ಅವರು ಇದನ್ನು ಒಂದು ಕಲಿಕೆಯ ಅನುಭವವಾಗಿ ಪರಿಗಣಿಸಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.