ಕರ್ನಾಟಕದ ದಾವಣಗೆರೆ ನಗರದ ವಿಶ್ವಕರ್ಮ ಸಮುದಾಯದ ಕುಟುಂಬದಿಂದ ಕ್ರಿಕೆಟ್ ಜಗತ್ತಿಗೆ ಬ್ಯಾಟ್ ತಯಾರಿಸಿ ಕೊಡಲಾಗುತ್ತಿದೆ.
ವರದಿ: ವರದರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಮೇ 25): ಕ್ರಿಕೆಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಅದರಲ್ಲೂ ರಜೆ ಬಂತು ಅಂದ್ರೆ ಸಾಕು ಖಾಲಿ ಫೀಲ್ಡ್‌ಗಳಲ್ಲಿ, ಹೊಲಗಳಲ್ಲಿ, ಸ್ಟೇಡಿಯಂನಲ್ಲಿ ಎಲ್ಲೆಲ್ಲು ಕ್ರಿಕೆಟ್ ಆಟಗಾರರು ಕಾಣುತ್ತಾರೆ.. ಐಪಿಎಲ್ ಮತ್ತಿನಲ್ಲಿ ಸರ್ವಸ್ವವು ಕ್ರಿಕೆಟ್ ಮಯ. ಬ್ಯಾಟ್ಸ್‌ಮನ್ ಹೊಡೆಯುವ ಸಿಕ್ಸರ್, ಪೋರ್ಸ್ ಗಳ ಎಲ್ಲರ ಮಾತು. ಆದ್ರೆ ಆ ಬ್ಯಾಟ್ ಗಳು ಹೇಗೆ ತಯಾರಾಗುತ್ತವೆ. ಹಳ್ಳಿಗಳಿಂದ ಕ್ರಿಕೆಟ್ ಜಗತ್ತಿಗೆ ಆ ಬ್ಯಾಟ್ ತಯಾರಕರ ಕೊಡುಗೆ ಏನಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ದಾವಣಗೆರೆ ಪಿಬಿ ರೋಡ್‌ನಲ್ಲಿ ಗುಜರಾತಿ ಕುಟುಂಬವೊಂದು, ಬ್ಯಾಟ್‌ಗಳ ತಯಾರಿಕೆಯಲ್ಲಿ ತೊಡಗಿದ್ದು, ಮಹಿಳೆಯರೇ ಈ ಕಾಯಕದಲ್ಲಿ ಇರೋದು ವಿಶೇಷ. ಒಂದು ಪುಟ್ಟ ಗೂಡಿನಲ್ಲಿ ಕಳೆದ 30 ವರ್ಷದಿಂದ ವಾಸ ಮಾಡುತ್ತಿರುವ ಕುಟುಂಬ ಮಳೆಗಾಲದಲ್ಲಿ ಮಾತ್ರ ಬೇರೆ ಕಡೆ ಹೋಗುತ್ತದೆ. ಇನ್ನುಳಿದ ದಿನವೆಲ್ಲ ಬ್ಯಾಟ್ ತಯಾರಿಕೆಯಲ್ಲಿ ತೊಡಗಿರುತ್ತದೆ. ರಮೇಶ್ ಎಂಬುವರು ಮನೆ ಯಜಮಾನನಾದರೆ, ಇವರಿಗೆ ಕಾಜಲ್ ಮತ್ತು ಷಜಾನ್ ಎಂಬ ಮಹಿಳೆಯರು ಕೆಲಸಕ್ಕೆ ಸಾಥ್ ನೀಡುತ್ತಾರೆ.
Udupi- ಅನ್ನ ಬ್ರಹ್ಮ ಶ್ರೀಕೃಷ್ಣನಿಗೆ ಅಕ್ಕಿ ಮುಹೂರ್ತ ನೆರವೇರಿಸಿದ ಪುತ್ತಿಗೆ ಶ್ರೀಗಳು
ವಿಶ್ವಕರ್ಮ ಜನಾಂಗದಿಂದ ಬ್ಯಾಟ್ ತಯಾರಿಕೆ: ದಾವಣಗೆರೆ ನಗರ ಅಲ್ಲದೆ ಸುತ್ತಮುತ್ತಲ ಗ್ರಾಮದವರು ಬೀಸುತ್ತಿರುವ ಬ್ಯಾಟ್‌ಗಳು ಈ ಕಾರ್ಮಿಕರ ಕೈ ಕುಸುರಿಲ್ಲಿಯೇ ರೆಡಿಯಾಗಿದೆ. ಸಂಸಾರವೆಂಬ ಬಂಡಿ ನೂಕಲು ಸರಕಾರಿ ಕೆಲಸ, ಸ್ವಂತ ಊರು, ಮನೆಯೇ ಇರಬೇಕಾಗಿಲ್ಲ. ಚಿಕ್ಕದೊಂದು ಗುಡಿಸಲು, ಕೈ ಕಸುಬಿದ್ದರೇ ಸಾಕು ಪ್ರಪಂಚವನ್ನೇ ಮನೆಯನ್ನಾಗಿ ಮಾಡಿ ಕೊಂಡು ಎಲ್ಲಿ ಬೇಕಾದರೂ ದುಡಿಯಬಹುದು, ಬದುಕಬಹುದು ಎಂಬುದಕ್ಕೆ ಇವರು ತಾಜಾ ಉದಾಹರಣೆಯಾಗಿದ್ದಾರೆ. ಅದಕ್ಕಾಗಿ ಸುಮಾರು 1300 ಕಿ.ಮೀ ದೂರದಿಂದ ಬಂದು ಇಲ್ಲಿಯೇ ಜೀವನ ಮಾಡುತ್ತಿದ್ದಾರೆ. ಮೂಲತಃ ವಿಶ್ವಕರ್ಮ ಜನಾಂಗಕ್ಕೆ ಸೇರಿದ ಇವರು ಬ್ಯಾಟ್‌ಗಳನ್ನು ತಯಾರಿಸಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹೊಸದುರ್ಗ, ಶಿವಮೊಗ್ಗ ಸೇರಿದಂತೆ ಇತರೆ ಊರುಗಳಿಗೆ ಹೋಲ್‌ಸೇಲ್ ದರದಲ್ಲಿ ಕಳಿಸುತ್ತಾರೆ.
ಬೇಸಿಗೆಯಲ್ಲಿ ಹೆಚ್ಚು ಕೆಲಸ: ಬೇಸಿಗೆಯಲ್ಲಿ ಇವರ ಕಾಯಕಕ್ಕೆ ಹೆಚ್ಚು ಕೆಲಸವಿರುತ್ತದೆ. ಆದ್ದರಿಂದ ಹೆಚ್ಚು ಬೇಡಿಕೆ ಇರುವ ಕ್ರಿಕೆಟ್ ಬ್ಯಾಟ್, ಸಾಮಗ್ರಿ ಗಳನ್ನು ತಯಾರಿಸುತ್ತಿದ್ದಾರೆ. ಗುಜರಾತ್‌ನಿಂದ ಜಾಲರ್ ಎಂಬ ಮರದಿಂದ ಮಾಡಿದ ಬ್ಯಾಟ್‌ಗಳನ್ನು ಇವರು ತರಿಸಿಕೊಳ್ಳುತ್ತಾರೆ. ನಂತರ ಅವುಗಳಿಗೆ ನಾನಾ ಆಕಾರವನ್ನು ಇವರು ಕೊಡುತ್ತಾರೆ. ಪ್ರತಿದಿನ ಬೆಳಗ್ಗೆ 6 ರಿಂದ ಆರಂಭವಾಗುವ ಇವರ ಕೆಲಸ ತಡರಾತ್ರಿವರೆಗೆ ನಡೆಯುತ್ತದೆ. ದಿನಕ್ಕೆ 50 ಬ್ಯಾಟ್ಗಳನ್ನು ಮಾಡುತ್ತೇವೆ. ಆದರೆ, ಮಾಡಿದ್ದೆಲ್ಲವೂ ಮಾರಾಟವಾ ಗುವು ದಿಲ್ಲ. ಒಂದು ಬ್ಯಾಟ್ ಮಾಡಲು ಮರದ ವೆಚ್ಚ, ಕೂಲಿ ಸೇರಿ 150ರೂ. ತಗಲುತ್ತದೆ. ಅವು ಗಳನ್ನು 200ರಿಂದ 500 ರೂ.ಗಳಿಗೆ ಮಾರಾಟ ಮಾಡುತ್ತೇವೆ. ಒಂದು ದಿನಕ್ಕೆ ಏನೆಲ್ಲಾ ಅಂದ್ರೂ ಸಾವಿರ ರೂ. ಸಿಗುತ್ತದೆ ಎನ್ನುತ್ತಾರೆ ರಮೇಶ್.
Bengaluru- ಜೀರೋ ರೌಡಿಸಂ, ಡ್ರಗ್ಸ್ ಮುಕ್ತ ಬೆಂಗಳೂರು ನಮ್ಮ ಗುರಿ: ಡಿಜಿ-ಐಜಿಪಿ ಅಲೋಕ್
ಕರ್ನಾಟಕಕ್ಕೆ ಬಂದು ಬ್ಯಾಟ್ ತಯಾರಿಕೆ: ಗುಜರಾತಲ್ಲಿ ಈ ಜನಾಂಗ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಪ್ರತಿ ಕುಟುಂಬ ತಮ್ಮ ಮೂಲ ಕಸುಬು ಬ್ಯಾಟ್ ತಯಾರಿಕೆಯಲ್ಲಿ ತೊಡಗಿದೆ. ಹೀಗಾಗಿ ಅಲ್ಲಿ ವ್ಯಾಪಾರ ಕಡಿಮೆ. ಈ ಉದ್ದೇಶದಿಂದ ಅಲ್ಲಿಂದ ಅನೇಕ ಕುಟುಂಬಗಳು ರಾಜ್ಯಾದ ನಾನಾ ಮೂಲೆಗಳಿಗೆ ಬಂದಿದೆ.