ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಕನ್ನಡತಿ..! ಜಿಂಬಾಬ್ವೆ ಎದುರು ಇತಿಹಾಸ ಬರೆದ ನಿಕಿ ಪ್ರಸಾದ್

Published : Oct 20, 2026, 01:56 PM IST
Niki Prasad

ಸಾರಾಂಶ

ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕನ್ನಡತಿ ನಿಕಿ ಪ್ರಸಾದ್ ಅಪರೂಪದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಾವೆಸೆದ ಮೊದಲೆರಡು ಚೆಂಡುಗಳಲ್ಲೇ ವಿಕೆಟ್ ಕಬಳಿಸಿದ ಭಾರತದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಮಹಿಳಾ ಕ್ರಿಕೆಟರ್, ಕನ್ನಡತಿ ನಿಕಿ ಪ್ರಸಾದ್, ಜಿಂಬಾಬ್ವೆ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಅಪರೂಪದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ತಾವು ಎಸೆದ ಮೊದಲೆರಡು ಚೆಂಡುಗಳಲ್ಲೂ ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟರ್ ಎನ್ನುವ ವರ್ಲ್ಡ್‌ ರೆಕಾರ್ಡ್ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಪರೂಪದ ಮೈಲಿಗಲ್ಲು ನೆಟ್ಟ ನಿಕಿ

ಇದುವರೆಗೂ ಭಾರತದ ಯಾವುದೇ ಪುರುಷ ಅಥವಾ ಮಹಿಳಾ ಕ್ರಿಕೆಟರ್ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾವೆಸೆದ ಚೊಚ್ಚಲ ಎರಡು ಚೆಂಡುಗಳಲ್ಲಿ ಎರಡು ವಿಕೆಟ್ ಕಬಳಿಸಿರಲಿಲ್ಲ. ಆದರೆ ಇದೀಗ ಕರ್ನಾಟಕ ಮೂಲದ 20 ವರ್ಷದ ಮಹಿಳಾ ಆಲ್ರೌಂಡರ್ ನಿಕಿ ಪ್ರಸಾದ್, ಅಂತಹದ್ದೊಂದು ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ನಿಕಿ ಪ್ರಸಾದ್ ಅವರಿಗಿಂತ ಮೊದಲು ಕೇವಲ ಇಬ್ಬರು ಕ್ರಿಕೆಟರ್ಸ್ ಮಾತ್ರ ತಾವೆಸೆದ ಚೊಚ್ಚಲ ಎರಡು ಚೆಂಡುಗಳಲ್ಲಿ 2 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಜಿಂಬಾಬ್ವೆ ಎದುರಿನ ರಾಯ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನಿಕಿ ಪ್ರಸಾದ್ ಈ ಐತಿಹಾಸಿಕ ಮೈಲಿಗಲ್ಲು ನೆಟ್ಟಿದ್ದಾರೆ.

ಇನ್ನು ನಿಕಿ ಪ್ರಸಾದ್‌ಗೂ ಮೊದಲು ಆಸ್ಟ್ರೇಲಿಯಾದ ಮೈಕೆಲ್ ಕ್ಯಾಸ್ಪ್ರೋವಿಜ್‌ 2005ರಲ್ಲಿ ನಡೆದ ಟಿ20 ಪಂದ್ಯದಲ್ಲಿ ತಾವೆಸೆದ ಚೊಚ್ಚಲ ಎರಡು ಚೆಂಡುಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌ನ ಸ್ಟಿಫನ್ ಫ್ಲೆಮಿಂಗ್ ಹಾಗೂ ಮ್ಯಾಥ್ಯೂ ಸಿಂಕ್ಲೆರ್ ಅವರನ್ನು ಬಲಿ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇನ್ನು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಯುಎಸ್‌ಎ ತಂಡದ ಅಕ್ಷತಾ ರಾವ್ 2019ರಲ್ಲಿ ಬಾಂಗ್ಲಾದೇಶ ಎದುರು ಆಯೇಷಾ ರೆಹಮಾನ್ ಹಾಗೂ ಸಂಜಿದಾ ಇಸ್ಲಾಂ ಅವರ ವಿಕೆಟ್ ಕಬಳಿಸಿದ್ದರು. ಇದೀಗ ಈ ಎಲೈಟ್ ಲಿಸ್ಟ್‌ಗೆ ಕನ್ನಡತಿ ನಿಕಿ ಪ್ರಸಾದ್ ಸೇರ್ಪಡೆಯಾಗಿದ್ದಾರೆ.

ಭಾರತದ ಮೊದಲ ಸಾಧಕಿ ನಿಕಿ ಪ್ರಸಾದ್:

ನಿಕಿ ಪ್ರಸಾದ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಭಾರತದ ನಾಲ್ಕನೇ ಬೌಲರ್ ಎನ್ನುವ ದಾಖಲೆಗೆ ಪಾತ್ರರಾಗಿದ್ದರು. ನಿಕಿ ಪ್ರಸಾದ್‌ಗೂ ಮೊದಲು ಅಜಿತ್ ಅಗರ್ಕರ್, ಪ್ರಗ್ಯಾನ್ ಓಜಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಆದರೆ ಎರಡನೇ ಎಸೆತದಲ್ಲಿ ವಿಕೆಟ್‌ ಕಬಳಿಸಲು ಈ ಮೂವರಿಗೂ ಸಾಧ್ಯವಾಗಿರಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ಬಳಿಕ ಈ ಸ್ಟಾರ್ ಆಟಗಾರನನ್ನು ಪದೇ ಪದೇ ಕಡೆಗಣಿಸಲಾಗ್ತಿದೆ: ಆಯ್ಕೆ ಸಮಿತಿ ವಿರುದ್ಧ ಆಕಾಶ್ ಚೋಪ್ರಾ ಗರಂ
Sehwag: ಮೈದಾನದಲ್ಲಷ್ಟೇ ಅಲ್ಲ, ಲೈಫ್‌ನಲ್ಲೂ ಅಪ್ಪನೇ ಹೀರೋ! ಸೆಹ್ವಾಗ್ ಜನ್ಮದಿನಕ್ಕೆ ಮಗನ ಭಾವುಕ ಸಂದೇಶ!