IPL 2027 ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಗುಟ್ಟು ಬಿಚ್ಚಿಟ್ಟ ದಾದಾ: ಈ ಇಬ್ಬರೇ ನಮ್ಮ ಟಾರ್ಗೆಟ್ ಎಂದ ಗಂಗೂಲಿ

Published : Nov 06, 2026, 04:37 PM IST
Sourav ganguly

ಸಾರಾಂಶ

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಸೌರವ್ ಗಂಗೂಲಿ ಇಬ್ಬರು ವಿದೇಶಿ ಆಟಗಾರರ ಖರೀದಿಯ ಗುಟ್ಟು ಬಿಚ್ಚಿಟ್ಟಿದ್ದಾರೆ. ಫ್ರೇಸರ್ ಮೆಕ್‌ಗುರ್ಕ್ ಹಾಗೂ ಶಾಯ್ ಹೋಪ್ ಅವರನ್ನು ತಂಡಕ್ಕೆ ತರಲು ಡೆಲ್ಲಿ ಒಲವು ತೋರಿದೆ. ಜೊತೆಗೆ ಕೋಚಿಂಗ್ ವಿಭಾಗದಲ್ಲೂ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ನವದೆಹಲಿ(ನ.06): ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಿದ್ಧತೆ ಜೋರಾಗಿದೆ. ತಂಡದ ನೂತನ ಮುಖ್ಯ ಕೋಚ್ ಸೌರವ್ ಗಂಗೂಲಿ, ಮುಂಬರುವ ಹರಾಜಿನಲ್ಲಿ ಖರೀದಿಸಲು ಉದ್ದೇಶಿಸಿರುವ ಇಬ್ಬರು ವಿದೇಶಿ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಫ್ರೇಸರ್ ಮೆಕ್‌ಗುರ್ಕ್ ಹಾಗೂ ವೆಸ್ಟ್ ಇಂಡೀಸ್‌ನ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಶಾಯ್ ಹೋಪ್ ಡೆಲ್ಲಿ ತಂಡದ ಪ್ರಮುಖ ಟಾರ್ಗೆಟ್ ಎನ್ನುವ ಗುಟ್ಟು ಬಿಚ್ಚಿಟ್ಟಿದ್ದಾರೆ.

ಆನಂದಬಜಾರ್ ಪತ್ರಿಕಾ ವರದಿ ಪ್ರಕಾರ, “ನಮ್ಮ ಗಮನದಲ್ಲಿ ಇಬ್ಬರು ವಿದೇಶಿ ಆಟಗಾರರಿದ್ದಾರೆ. ಆಸ್ಟ್ರೇಲಿಯಾದ ಫ್ರೇಸರ್ ಮೆಕ್‌ಗುರ್ಕ್ ಮತ್ತು ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ ಅವರನ್ನು ತಂಡಕ್ಕೆ ಕರೆತರಲು ಬಯಸಿದ್ದೇವೆ” ಎಂದು ಗಂಗೂಲಿ ಹೇಳಿದ್ದಾರೆ.

ಮೆಕ್‌ಗುರ್ಕ್ ಮೇಲೆ ಡೆಲ್ಲಿ ಕಣ್ಣು!

ಫ್ರೇಸರ್ ಮೆಕ್‌ಗುರ್ಕ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಯಾಗಿದ್ದ ಅವರು, ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದರು. ನಂತರದ ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ಆರ್‌ಟಿಎಂ (Right to Match) ಕಾರ್ಡ್ ಬಳಸಿ ಅವರನ್ನು 9 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಮೆಕ್‌ಗುರ್ಕ್ ಈವರೆಗೆ 15 ಐಪಿಎಲ್ ಪಂದ್ಯಗಳಲ್ಲಿ 385 ರನ್ ಗಳಿಸಿದ್ದಾರೆ. 25.67ರ ಸರಾಸರಿ ಹಾಗೂ 199.49ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ಶಾಯ್ ಹೋಪ್ ಮೇಲೂ ಆಸಕ್ತಿ

ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2024ರ ಐಪಿಎಲ್‌ನಲ್ಲಿ 75 ಲಕ್ಷ ರೂಪಾಯಿಗೆ ಖರೀದಿಸಿತ್ತು. ಆದರೆ, ಒಂದು ಆವೃತ್ತಿಯ ಬಳಿಕ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಮ್ಮೆ ಅವರನ್ನು ಖರೀದಿಸಲು ಗಂಗೂಲಿ ಆಸಕ್ತಿ ತೋರಿದ್ದಾರೆ. ಇತ್ತೀಚೆಗಷ್ಟೇ ಭಾರತದದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಶಾಯ್ ಹೋಪ್ ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದರು. ಸದ್ಯ ಶಾಯ್ ಹೋಪ್ ಭರ್ಜರಿ ಫಾರ್ಮ್‌ನಲ್ಲಿದ್ದು, ಡೆಲ್ಲಿ ಈ ಆಟಗಾರನ ಮೇಲೆ ಕಣ್ಣಿಟ್ಟಿದೆ ಎಂದು ದಾದಾ ಹೇಳಿದ್ದಾರೆ.

ಡೆಲ್ಲಿ ತಂಡದಲ್ಲಿ ಮಹತ್ವದ ಬದಲಾವಣೆ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚಿಂಗ್ ವಿಭಾಗದಲ್ಲೂ ಹಲವು ಬದಲಾವಣೆಗಳಾಗಿವೆ. ಭಾರತದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಯುವರಾಜ್ ಸಿಂಗ್ ಅವರಿಗೆ ಸಹಾಯಕ ಕೋಚ್ ಹಾಗೂ ಬ್ಯಾಟಿಂಗ್ ಕೋಚ್ ಜವಾಬ್ದಾರಿ ನೀಡಲಾಗಿದೆ. ಇದಕ್ಕೂ ಮೊದಲು ಸೌರವ್ ಗಂಗೂಲಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.

ಟ್ರೇಡ್ ವಿಂಡೋದಲ್ಲೂ ಡೆಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಂಡಿದೆ. ಎಡಗೈ ವೇಗಿ ಟಿ. ನಟರಾಜನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್‌ಗೆ ಕಳುಹಿಸಿ, ಲೆಗ್ ಸ್ಪಿನ್ನರ್ ಝೀಶಾನ್ ಅನ್ಸಾರಿಯನ್ನು ತಂಡಕ್ಕೆ ಕರೆತಂದಿದೆ. ಇದಕ್ಕೂ ಮೊದಲು ಕುಲದೀಪ್ ಯಾದವ್ ಅವರನ್ನು ಲಖನೌ ಸೂಪರ್ ಜೈಂಟ್ಸ್‌ಗೆ ನೀಡಿ, ರಿಷಭ್ ಪಂತ್ ಅವರನ್ನು ಮರಳಿ ತಂಡಕ್ಕೆ ಕರೆತಂದಿದೆ.

2025 ಮತ್ತು 2026ರ ಐಪಿಎಲ್ ಆವೃತ್ತಿಗಳಲ್ಲಿ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್, ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ. 2020ರಲ್ಲಿ ಮಾತ್ರ ತಂಡ ಐಪಿಎಲ್ ಫೈನಲ್ ತಲುಪಿತ್ತು. ಇದೀಗ ಗಂಗೂಲಿ ನೇತೃತ್ವದಲ್ಲಿ ತಂಡವನ್ನು ಬಲಪಡಿಸುವ ಪ್ರಯತ್ನ ನಡೆಯುತ್ತಿದೆ.

IPL 2027 ಮಿನಿ ಹರಾಜು ಯಾವಾಗ?

ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯುವ ಸಾಧ್ಯತೆಯಿದೆ. ಆಟಗಾರರ ರಿಟೆನ್ಷನ್ ಅಂತಿಮ ದಿನಾಂಕವನ್ನು ನವೆಂಬರ್ 17ಕ್ಕೆ ಮುಂದೂಡಲಾಗಿದೆ. ಹರಾಜು ದಿನವೇ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಧಾನಿ ಮೋದಿ ಭೇಟಿಯಾದ ಸೂರ್ಯಕುಮಾರ್ ಯಾದವ್ ಕುಟುಂಬ, ಕನ್ನಡ ಭಜನೆ ಹಾಡಿ ಮನಗೆದ್ದ ಪುಟಾಣಿ
Syed Mushtaq Ali Trophy ಟೂರ್ನಿಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ; 2 ವರ್ಷಗಳ ಬಳಿಕ ತಂಡ ಕೂಡಿಕೊಂಡ ಮನೀಶ್ ಪಾಂಡೆ