ಮುಂಬೈ ಎದುರು ಶತಕ ಸಿಡಿಸಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಸರಿಗಟ್ಟಿದ ಕ್ವಿಂಟನ್ ಡಿ ಕಾಕ್!

Kannadaprabha News   | Kannada Prabha
Published : Apr 17, 2026, 09:12 AM IST
Quinton de Kock

ಸಾರಾಂಶ

ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಕ್ವಿಂಟನ್‌ ಡಿ ಕಾಕ್‌ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ಮೂಲಕ ಅವರು ಐಪಿಎಲ್‌ನಲ್ಲಿ 3 ತಂಡಗಳ ಪರ ಶತಕ ಬಾರಿಸಿದ 3ನೇ ಆಟಗಾರ ಎನಿಸಿಕೊಂಡಿದ್ದು, ಟಿ20 ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮುಂಬೈ: ಪಂಜಾಬ್‌ ಕಿಂಗ್ಸ್‌ ಪಂದ್ಯದಲ್ಲಿ ಗುರುವಾರ ಮುಂಬೈ ಇಂಡಿಯನ್ಸ್‌ನ ಆರಂಭಿಕ ಆಟಗಾರ ಕ್ವಿಂಟನ್‌ ಡಿ ಕಾಕ್‌ ಭರ್ಜರಿ ಶತಕ ಬಾರಿಸಿದ್ದು, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದು ಡಿ ಕಾಕ್‌ ಈ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯವಾಗಿದ್ದು, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

12 ರನ್‌ಗೆ 2 ವಿಕೆಟ್‌ ಕಳೆದುಕೊಂಡ ಮುಂಬೈಗೆ ನೆರವಾಗಿದ್ದು ಡಿ ಕಾಕ್‌. ಅವರು 17ನೇ ಓವರ್‌ನಲ್ಲಿ ಬಾರ್ಟ್‌ಲೆಟ್‌ ಎಸೆತದಲ್ಲಿ ಬೌಂಡರಿ ಬಾರಿಸಿ, 53 ಎಸೆತಗಳಲ್ಲಿ ಶತಕ ಪೂರೈಸಿದರು. ಪಂದ್ಯದಲ್ಲಿ ಅವರು 60 ಎಸೆತಗಳನ್ನು ಎದುರಿಸಿ 8 ಬೌಂಡರಿ, 7 ಸಿಕ್ಸರ್‌ನೊಂದಿಗೆ ಔಟಾಗದೆ 112 ರನ್‌ ಗಳಿಸಿದರು.

ಈ ಮೂಲಕ ಐಪಿಎಲ್‌ನಲ್ಲಿ 3 ತಂಡಗಳ ಪರ ಶತಕ ಸಿಡಿಸಿದ 3ನೇ ಆಟಗಾರ ಎನಿಸಿಕೊಂಡರು. ಡಿ ಕಾಕ್‌ ಈ ಮೊದಲು ಡೆಲ್ಲಿ, ಲಖನೌ ಪರವೂ ಶತಕ ಸಿಡಿಸಿದ್ದಾರೆ. ಉಳಿದಂತೆ ಕೆ.ಎಲ್‌.ರಾಹುಲ್‌ ಪಂಜಾಬ್‌, ಲಖನೌ, ಡೆಲ್ಲಿ, ಸಂಜು ಸ್ಯಾಮ್ಸನ್‌ ಡೆಲ್ಲಿ, ರಾಜಸ್ಥಾನ, ಚೆನ್ನೈ ತಂಡಗಳ ಪರ ಸೆಂಚುರಿ ಬಾರಿಸಿದ್ದಾರೆ. ಇನ್ನು, ಐಪಿಎಲ್‌ನಲ್ಲಿ 3 ಸೆಂಚುರಿ ಸಿಡಿಸಿದ ಮೊದಲ ವಿಕೆಟ್‌ ಕೀಪರ್‌ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಡಿ ಕಾಕ್‌ ಪಾತ್ರರಾಗಿದ್ದಾರೆ.

02ನೇ ಗರಿಷ್ಠ

ಡಿ ಕಾಕ್‌ರ 112 ರನ್‌ ಐಪಿಎಲ್‌ನಲ್ಲಿ ಮುಂಬೈ ಪರ 2ನೇ ಗರಿಷ್ಠ. 2008ರಲ್ಲಿ ಸಿಎಸ್‌ಕೆ ವಿರುದ್ಧ ಜಯಸೂರ್ಯ ಔಟಾಗದೆ 114 ರನ್‌ ಗಳಿಸಿದ್ದು ಈಗಲೂ ದಾಖಲೆ.

ಕೊಹ್ಲಿಯ ದಾಖಲೆ  ಸರಿಗಟ್ಟಿದ ಡಿಕಾಕ್

ಡಿ ಕಾಕ್‌ ಟಿ20 ಕ್ರಿಕೆಟ್‌ನಲ್ಲಿ 9 ಶತಕ ಬಾರಿಸಿದ್ದು, ವಿರಾಟ್‌ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ಕೂಡಾ 9 ಶತಕ ಬಾರಿಸಿದ್ದಾರೆ. ಗರಿಷ್ಠ ಟಿ20 ಶತಕದ ಪಟ್ಟಿಯಲ್ಲಿ ಇವರಿಬ್ಬರು ಜಂಟಿ 4ನೇ ಸ್ಥಾನದಲ್ಲಿದ್ದಾರೆ. ಕ್ರಿಸ್‌ ಗೇಲ್‌ 22 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಬಾಬರ್‌ ಆಜಂ 11, ಡೇವಿಡ್‌ ವಾರ್ನರ್ 10 ಶತಕ ಸಿಡಿಸಿದ್ದಾರೆ.

ಅರ್ಶ್‌ಗೆ 100 ವಿಕೆಟ್‌

ಎಡಗೈ ವೇಗದ ಬೌಲರ್ ಅರ್ಶ್‌ದೀಪ್‌ ಸಿಂಗ್ ಐಪಿಎಲ್‌ನಲ್ಲಿ 100 ವಿಕೆಟ್‌ ಪೂರೈಸಿದ್ದಾರೆ. ಮುಂಬೈನ ರಿಕೆಲ್ಟನ್‌ ವಿಕೆಟ್ ಪಡೆಯುವ ಮೂಲಕ ಅರ್ಶ್‌ದೀಪ್‌ ಈ ಮೈಲುಗಲ್ಲು ಸಾಧಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 5ನೇ ಎಡಗೈ ವೇಗಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ನಿನ್ನೆ ನಡೆದ ಮುಂಬೈ ಇಂಡಿಯನ್ಸ್-ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಕೊಹ್ಲಿ ಪಾಲಾದ ಆರೆಂಜ್ ಕ್ಯಾಪ್, ಆದ್ರೆ ಆರ್‌ಸಿಬಿ ನಾಯಕನಿಂದಲೇ ಪೈಪೋಟಿ! ಟಾಪ್-5 ಪಟ್ಟಿಯಿಂದ ಸಂಜು ಸ್ಯಾಮ್ಸನ್ ಔಟ್