ಎದುರಾಳಿಗಳಿಗೆ ಸ್ಪಿನ್ ಮೋಡಿ ಮಾಡುವ ಯುಜವೇಂದ್ರ ಚಹಾಲ್ ಅಷ್ಟೇ ಫನ್ನಿ ಕೂಡ. ಮೈದಾನದಲ್ಲೇ ಹಲವರ ಕಾಲೆಳೆಯುತ್ತಾರೆ. ಇದೀಗ ಯುಜವೇಂದ್ರ ಚಹಾಲ್ ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸಿ ಸಂಭ್ರಮ ಆಚರಿಸಿದ್ದಾರೆ. ಆದರೆ ಈ ಸಂಭ್ರಮದ ವೇಳೆ ಚಹಾಲ್ ಪ್ಯಾಂಟ್ ಜಾರಿಹೋಗಿದೆ.. ಇತ್ತ 1 ರನ್‌ನಿಂದ ಅರ್ಧಶತಕವೂ ಮಿಸ್ ಆಗಿದೆ.
ಜೈಪುರ(ಏ.21) ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಇದ್ದರೆ ಕ್ರೀಡಾಂಗಣದಲ್ಲಿ ಕೆಲ ಫನ್ನಿ ಘಟನೆಗಳು ಇದ್ದೇ ಇರುತ್ತೆ. ಇನ್ನು ಸಾಮಾಜಿಕ ಮಾಧ್ಯಮದ ಮೂಲಕವೂ ಚಹಾಲ್ ಆಪ್ತರ ಕಾಲೆಳೆಯುತ್ತಾರೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಮೋಡಿ ಮಾಡುತ್ತಿರುವ ಯಜುವೇಂದ್ರ ಚಹಾಲ್ ಅಭಿಮಾನಿಗಳಿಗೆ ತಮ್ಮ ಬ್ಯಾಟಿಂಗ್ ಝಲಕ್ ತೋರಿಸಿದ್ದಾರೆ. ಸಿಕ್ಸರ್, ಬೌಂಡರಿ ಮೂಲಕ ಅಬ್ಬರಿಸಿದ್ದಾರೆ. ಆದರೆ ಸಿಕ್ಸರ್ ಸಿಡಿಸಿ ಸಂಭ್ರಮಿಸುತ್ತಿದ್ದ ಚಹಾಲ್ ಪ್ಯಾಂಟ್ ಜಾರಿ ಹೋಗಿದೆ. ಮೇಲಕ್ಕೆಳೆದು ಮತ್ರೆ ಸೆಲೆಬ್ರೆಷನ್ ಮುಂದುವರಿಸಿದ ಚಹಾಲ್ ವಿಡಿಯೋ ವೈರಲ್ ಆಗಿದೆ.
ಜೈಪುರದಲ್ಲಿ ಯಜುವೇಂದ್ರ ಚಹಾಲ್ ರಾಜಸ್ಥಾನ ರಾಯಲ್ಸ್ ಸಿಬ್ಬಂದಿಗಳು ಹಾಗೂ ಇತರ ಸ್ಥಳೀಯರ ಜೊತೆ ಟರ್ಫ್ ಕ್ರಿಕೆಟ್ ಆಡಿದ್ದಾರೆ. ಬ್ಯಾಟಿಂಗ್ ಇಳಿದ ಚಹಾಲ್ ನಾನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. ಆದರೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ ಎಂದು ಕ್ರೀಸ್‌ಗೆ ಆಗಮಿಸಿದ ಚಹಾಲ್ ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದ್ದಾರೆ.
ಹೊಸ ಅವತಾರದಲ್ಲಿ ಚಹಾಲ್ ಪತ್ನಿ , ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದಲ್ಲಿ ಧನಶ್ರಿ ಮೋಡಿ!
ಇದೇ ವೇಳೆ ನೋ ಬಾಲ್‌ಗೆ ಫ್ರೀ ಹಿಟ್ ಕೇಳಿದ ಚಹಾಲ್‌ಗೆ ಅಂಪೈರ್ ಕೂಡ ಅಸ್ತು ಎಂದಿದ್ದಾರೆ. ಫ್ರಿ ಹಿಟ್ ಎಸೆತವನ್ನು ಸಿಕ್ಸರ್ ಸಿಡಿಸಿದ ಚಹಾಲ್ ಸಂಭ್ರಮ ಆಚರಿಸಿದ್ದಾರೆ. ಕ್ರೀಸ್‌ನಲ್ಲಿದ್ದ ಚಹಾಲ್ ಟರ್ಫ್ ಸುತ್ತ ಓಡಿದ್ದಾರೆ. ಈ ವೇಳೆ ಚಹಾಲ್ ಪ್ಯಾಂಟ್ ಜಾರಿದೆ. ಮೇಲಕ್ಕೆತ್ತಿ ಸರಿ ಮಾಡಿಕೊಂಡ ಚಹಾಲ್ ಮತ್ತೆ ಸಂಭ್ರಮಾಚರಣೆ ಮುಂದುವರಿಸಿದೆ. ಇಷ್ಟಕ್ಕೆ ಚಹಾಲ್ ಫನ್ ಮುಗಿದಿಲ್ಲ. ಮತ್ತೆ ಬ್ಯಾಟಿಂಗ್ ಮುಂದುವರಿಸಿದ ಚಹಾಲ್ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ್ದಾರೆ.
ಇದೇ ವೇಳೆ ಚಹಾಲ್ ಸ್ಕೋರ್ 69 ಆಗಿದ್ದರೆ, ತಂಡದ ಮೊತ್ತ 66ಕ್ಕೆ ತಲುಪಿತ್ತು. ಈ ವೇಳೆ ಸಿಂಗಲ್ಸ್ ಮೂಲಕ ಹಾಫ್ ಸೆಂಚುರಿ ಸಿಡಿಸಲು ಮುಂದಾದ ಚಹಾಲ್ ರನ್ನೌಟ್‌ಗೆ ಬಲಿಯಾಗಿದ್ದಾರೆ. ಆದರೆ ಬ್ಯಾಟ್ ಬಿಟ್ಟುಕೊಡದ ಚಹಾಲ್ ಹಾಫ್ ಸೆಂಚುರಿ ಸಿಡಿಸಿಯೇ ತೀರುತ್ತೇನೆ ಎಂದು ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ. ಒಂದು ರನ್ ಸಿಡಿಸಿದ ಚಹಾಲ್ ಹಾಫ್ ಸೆಂಚುರಿ ಪೂರೈಸಿದ್ದಾರೆ. ಹಾಫ್ ಸೆಂಚುರಿ ಸಿಡಿಸಿದ ಬಳಿಕ ಮತ್ತೆ ಸಂಭ್ರಮ ಆಚರಿಸಿದ ಚಹಾಲ್ ಸಹ ಆಟಗಾರರ ಜೊತೆ ಎಂಜಾಯ್ ಮಾಡಿದ್ದರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
'ನಾನು ನಿಮ್ಮ ಅತಿದೊಡ್ಡ ಚಿಯರ್ ಲೀಡರ್..': ಆಗಾಗ ಸುದ್ದಿಯಲ್ಲಿರುವ ಚಹಲ್ ಪತ್ನಿ ಹೀಗೆ ಹೇಳಿದ್ದು ಯಾರಿಗೆ?
ತಮ್ಮ ಬ್ಯಾಟಿಂಗ್ ವಿಡಿಯೋ ಪೋಸ್ಟ್ ಮಾಡಿದ ಚಹಾಲ್, ನಾಯಕ ಸಂಜು ಸ್ಯಾಮ್ಸನ್ ಬಳಿ ಬ್ಯಾಟಿಂಗ್ ಪ್ರಮೋಶನ್‌ಗೆ ಅರ್ಜಿ ಹಾಕಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಹಾಫ್ ಸೆಂಚುರಿ ಸಿಡಿಸಿದ್ದೇನೆ, ಇದು ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಲು ಸರಿಯಾದ ಸಮಯ ಎಂದು ನೆನೆಪಿಸಿದ್ದಾರೆ.