ಐಪಿಎಲ್ 2021: ಜಯದ ಕನವರಿಕೆಯಲ್ಲಿ ಕೆಕೆಆರ್-ರಾಯಲ್ಸ್‌

Kannadaprabha News   | Asianet News
Published : Apr 24, 2021, 11:44 AM IST
ಐಪಿಎಲ್ 2021: ಜಯದ ಕನವರಿಕೆಯಲ್ಲಿ ಕೆಕೆಆರ್-ರಾಯಲ್ಸ್‌

ಸಾರಾಂಶ

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್‌ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ತಂಡಗಳು ಮುಂಬೈನ ವಾಂಖೇಡೆ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಏ.24): ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪವಾಡ ಸೃಷ್ಟಿಸುವ ಹೋರಾಟದಲ್ಲಿ ಕೆಲವೇ ಹೆಜ್ಜೆಗಳಿಂದ ಹಿಂದೆ ಬಿದ್ದಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌, ಹ್ಯಾಟ್ರಿಕ್‌ ಸೋಲು ಕಂಡಿದ್ದರೂ ಉತ್ಸಾಹ ಬಿಡದೆ ಶನಿವಾರ ಇಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಆರ್‌ಸಿಬಿಯ ಹೊಡೆತಕ್ಕೆ ಕುಗ್ಗಿರುವ ರಾಯಲ್ಸ್‌ಗೂ ಈ ಪಂದ್ಯ ಅತಿಮುಖ್ಯ ಎನಿಸಿದ್ದು, ತನ್ನ ಲೆಕ್ಕಾಚಾರಗಳನ್ನು ಪಕ್ಕಾ ಮಾಡಿಕೊಳ್ಳಲು ಕಾತರಿಸುತ್ತಿದೆ.

ಕೆಕೆಆರ್‌ ಹಾಗೂ ರಾಜಸ್ಥಾನ ಎರಡೂ ತಂಡಗಳು ಕಾಗದ ಮೇಲೆ ಬಹಳ ಬಲಿಷ್ಠವಾಗಿ ಕಂಡರೂ, ಮೈದಾನದಲ್ಲಿ ಸಾಂಘಿಕ ಪ್ರದರ್ಶನ ಕಂಡುಬರುತ್ತಿಲ್ಲ. ಅಲ್ಲಲ್ಲಿ ಒಂದೆರೆಡು ವೈಯಕ್ತಿಕ ಪ್ರದರ್ಶನಗಳನ್ನು ಹೊರತುಪಡಿಸಿದರೆ, ಒಂದು ತಂಡವಾಗಿ ಆಡಿ ಗೆಲ್ಲಲು ಸಾಧ್ಯವಾಗಿಲ್ಲ. ಟೂರ್ನಿಯ ಆರಂಭಿಕ ದಿನಗಳಾಗಿರುವ ಕಾರಣ ತಪ್ಪುಗಳನ್ನು ಮಾಡಲು ಅವಕಾಶವಿದೆ. ಆದರೆ ಟೂರ್ನಿ ಸಾಗುತ್ತಾ ಹೋದಂತೆ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳಿಗೆ ಪೈಪೋಟಿ ಹೆಚ್ಚಾಗಲಿದ್ದು, ಗೆಲ್ಲುವುದರ ಜೊತೆಗೆ ನೆಟ್‌ ರನ್‌ರೇಟ್‌ ಕಾಯ್ದುಕೊಳ್ಳುವುದು ಬಹಳ ಮುಖ್ಯವೆನಿಸಲಿದೆ. ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಾದರೆ, ಎರಡೂ ತಂಡಗಳು ಸ್ಥಿರ ಪ್ರದರ್ಶನ ತೋರುತ್ತಾ, ಗೆಲ್ಲಲು ಶುರು ಮಾಡಬೇಕು.

ಮುಂಬೈ ಮಣಿಸಿ ಭರ್ಜರಿ ಕಮ್‍ಬ್ಯಾಕ್ ಮಾಡಿದ ಪಂಜಾಬ್ ಕಿಂಗ್ಸ್!

ನಾಯಕರಿಗೆ ಸವಾಲು: ಎರಡೂ ತಂಡಗಳ ನಾಯಕರ ಮೇಲೆ ಭಾರೀ ಒತ್ತಡವಿದೆ. ಸಂಜು ಸ್ಯಾಮ್ಸನ್‌ ಮೊದಲ ಬಾರಿಗೆ ನಾಯಕರಾಗಿರುವ ಕಾರಣ, ಇನ್ನೊಂದಿಷ್ಟು ಅವಕಾಶಗಳು ಸಿಗಬಹುದು. ಆದರೆ ಮೊರ್ಗನ್‌, ವಿಶ್ವಕಪ್‌ ವಿಜೇತ ನಾಯಕ. ಇಂಗ್ಲೆಂಡ್‌ ತಂಡವನ್ನು ಹಲವು ವರ್ಷಗಳಿಂದ ಮುನ್ನಡೆಸುತ್ತಿರುವ ಅನುಭವವಿದೆ. ಕೆಕೆಆರ್‌ ಮತ್ತಷ್ಟು ವೈಫಲ್ಯ ಕಂಡರೆ, ಮೊರ್ಗನ್‌ ನಾಯಕತ್ವ ಕಳೆದುಕೊಳ್ಳಬಹುದು.

ಕೈಕೊಡುತ್ತಿರುವ ತಾರೆಯರು!: ಎರಡೂ ತಂಡಕ್ಕೆ ತಾರಾ ಆಟಗಾರರು ಕೈಕೊಡುತ್ತಿದ್ದಾರೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಎರಡೂ ತಂಡಗಳ ನಾಯಕರು ಕಳಪೆ ಫಾರ್ಮ್‌ನಲ್ಲಿದ್ದಾರೆ. ಇದು ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತಿದೆ. ಆಡುವ ಹನ್ನೊಂದರ ಆಯ್ಕೆಯಲ್ಲೂ ಗೊಂದಲ ಬಗೆಹರಿದಂತೆ ಕಾಣುತ್ತಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ನಿತೀಶ್‌ ರಾಣಾ, ಶುಭ್‌ಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ಇಯಾನ್‌ ಮೊರ್ಗನ್‌(ನಾಯಕ), ದಿನೇಶ್‌ ಕಾರ್ತಿಕ್‌, ಆ್ಯಂಡ್ರೆ ರಸೆಲ್‌, ಪ್ಯಾಟ್‌ ಕಮಿನ್ಸ್‌, ಕಮ್ಲೇಶ್‌ ನಾಗರಕೋಟಿ, ಸುನಿಲ್‌ ನರೈನ್‌, ವರುಣ್‌ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ.

ರಾಜಸ್ಥಾನ: ಯಶಸ್ವಿ/ಮನನ್‌, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌, ಡೇವಿಡ್‌ ಮಿಲ್ಲರ್‌, ಶಿವಂ ದುಬೆ, ರಿಯಾನ್‌ ಪರಾಗ್‌, ರಾಹುಲ್‌ ತೆವಾಟಿಯಾ, ಕ್ರಿಸ್‌ ಮೋರಿಸ್‌, ಶ್ರೇಯಸ್‌/ಉನಾದ್ಕತ್‌, ಮುಸ್ತಾಫಿಜುರ್‌ ರಹಮಾನ್‌, ಚೇತನ್‌ ಸಕಾರಿಯಾ.

ಸ್ಥಳ: ಮುಂಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ