
ದುಬೈ(ಸೆ.08): ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲ ದಿನ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜನೆಯಾಗುತ್ತಿದೆ. ಕೊರೋನಾ ವೈರಸ್ ಕಾರಣ ದುಬೈಗೆ ಟೂರ್ನಿ ಸ್ಥಳಾಂತರ ಮಾಡಲಾಗಿದೆ. ಭಾರತದಲ್ಲಿ ಬಹುತೇಕ ಬ್ಯಾಟಿಂಗ್ ಟ್ರ್ಯಾಕ್‌ಗಳೇ ಇವೆ. ಆದರೆ ದುಬೈ, ಅಭುದಾಬಿಯಲ್ಲಿ ಗೆಲುವಿನ ಮೊತ್ತ ಎಷ್ಟು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತರ ಕಂಡುಕೊಂಡಿದೆ.
ದುಬೈ ಹಾಗೂ ಅಭುದಾಬಿ ಪಿಚ್‌ಗಳಲ್ಲಿ 150 ರಿಂದ 160 ರನ್ ಗೆಲುವಿನ ಮೊತ್ತವಾಗಿದೆ ಎಂದು RCB ತಂಡದ ನಿರ್ದೇಶಕ ಮೈಕ್ ಹಸನ್ ಹೇಳಿದ್ದಾರೆ. ಸರಾಸರಿ ಮೊತ್ತ ದಾಟಿದರೆ ಗೆಲುವು ಸುಲಭವಾಗಲಿದೆ ಎಂದು ಮೈಕ್ ಹೈಸನ್ ಹೇಳಿದ್ದಾರೆ. ಇದೀಗ ಇತರ ತಂಡಗಳು RCB ಹೇಳಿದ ಸರಾಸರಿ ಮೊತ್ತದ ಲೆಕ್ಕಾಚಾರ ಹಾಕುತ್ತಿದೆ.
ಕೊಹ್ಲಿ To ಪಂತ್: 10 ಲಕ್ಷದಿಂದ ಆರಂಭಿಸಿ 17 ಕೋಟಿಗೂ ಅಧಿಕ ಸ್ಯಾಲರಿ ಪಡೆಯುತ್ತಿರುವ ಕ್ರಿಕೆಟರ್ಸ್!
ಬೆಂಗಳೂರು ಬ್ಯಾಟಿಂಗ್ ಸಹಕಾರಿ ಪಿಚ್ ಆಗಿದೆ. ಚಿಕ್ಕ ಬೌಂಡರಿ ಇರುವುದರಿಂದ ಪ್ರತಿ ಬಾರಿ ಹೈಸ್ಕೋರ್ ಹಾಗೂ ದಾಖಲೆ ನಿರ್ಮಾಣವಾಗಿದೆ. ಆದರೆ ದುಬೈ ಹಾಗೂ ಅಭುದಾಬಿ ಕ್ರೀಡಾಂಗಣ ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಅಲ್ಲ. ಹೀಗಾಗಿ ಈ ಸರಾಸರಿ ಮೊತ್ತದತ್ತ ತಂಡ ಗಮನ ಹರಿಸಿದರೆ ಉತ್ತಮ ಎಂದು ಮೈಕ್ ಹಸನ್ ಹೇಳಿದ್ದಾರೆ.
ಅಭುದಾಬಿಯಲ್ಲಿ ವೇಗಿಗಳು ಹೆಚ್ಚಿನ ಯಶಸ್ಸು ಪಡೆಯಲಿದ್ದಾರೆ. ಇಲ್ಲಿ ಸ್ಪಿನ್ನರ್‌ಗಳು ವಿಕೆಟ್‌ಗಾಗಿ ಹರಸಾಹಸ ಪಡಬೇಕು. ಇನ್ನು ದುಬೈ ಹಾಗೂ ಶಾರ್ಜಾ ಪಿಚ್‌ಗಳಲ್ಲಿ ಸ್ಪಿನ್ನರ್ಸ್ ಪ್ರಾಬಲ್ಯ ಸಾಧಿಸಲು ಸಾಧ್ಯವಿದೆ ಎಂದು ಮೈಕ್ ಹೇಳಿದ್ದಾರೆ. ಪಿಚ್‌ಗೆ ಅನುಗುಣವಾಗಿ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಲಾಗುವುದು ಎಂದು ಮೈಕ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.