INDvSL: ಟೀಂ ಇಂಡಿಯಾ ದಾಳಿಗೆ ನಲುಗಿದ ಶ್ರೀಲಂಕಾ; ಭಾರತಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್!

By Suvarna NewsFirst Published Jul 18, 2021, 6:52 PM IST
Highlights
  • ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ
  • ಸ್ಪಿನ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಬ್ಯಾಟ್ಸ್‌ಮನ್
  • ಟೀಂ ಇಂಡಿಯಾಗೆ 263 ರನ್ ಟಾರ್ಗೆಟ್

ಕೊಲೊಂಬೊ(ಜು.18): ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಕರಾರುವಕ್ ದಾಳಿ ಸಂಘಟಿಸಿದ ಟೀಂ ಇಂಡಿಯಾ ಲಂಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ ಹಾಗೂ ವೇಗದ ದಾಳಿಯಿಂದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿತು.

ಹುಟ್ಟು ಹಬ್ಬ ದಿನವೇ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಭಾರತದ 2ನೇ ಕ್ರಿಕೆಟಿಗ ಇಶಾನ್ ಕಿಶಾನ್!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಶ್ರೀಲಂಕಾ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರ ಹಾಕಿಕೊಂಡಿತ್ತು. ಇದರಂತೆ ಆರಂಭಿಕರು ಉತ್ತಮ ಜೊತೆಯಾಟ ನೀಡಿದರು. ಆದರೆ ಈ ಜೋಡಿಯನ್ನು ಯಜುವೇಂದ್ರ ಚಹಾಲ್ ಬೇರ್ಪಡಿಸಿದರು. ಅವಿಷ್ಕಾ ಫರ್ನಾಂಡೋ 32 ರನ್ ಸಿಡಿಸಿ ಔಟಾದರು.

ಚಹಾಲ್ ಬೆನ್ನಲ್ಲೇ ಕುಲ್ದೀಪ್ ಯಾದವ್ ಮ್ಯಾಜಿಕ್ ಲಂಕಾಗೆ ತಲೆನೋವಾಗಿ ಪರಿಣಮಿಸಿತು. ಭಾನುಕಾ ರಾಜಪಕ್ಸ24 ರನ್ ಸಿಡಿಸಿ ಔಟಾದರು . ಇನ್ನು 27 ರನ್ ಸಿಡಿಸಿದ ಮಿನೋದ್ ಬಾನುಕಾ ಕೂಡ ಕುಲ್ದೀಪ್‌ಗೆ ವಿಕೆಟ್ ಒಪ್ಪಿಸಿದರು. ಧನಂಜಯ್ ಡಿಸಿಲ್ವ ಕೇವಲ 14 ರನ್ ಸಿಡಿಸಿ ಔಟಾದರು.

ಚಾರಿತ್ ಆಸಲಂಕಾ ಹಾಗೂ ನಾಯಕ ದಸೂನ್ ಶನಕಾ ಜೊತೆಯಾಟ ಲಂಕಾ ತಂಡಕ್ಕೆ ನೆರವಾಯಿತು. ಚರಿತ್ 38 ರನ್ ಸಿಡಿಸಿ ಔಟಾದರೆ, ಶನಕ 39 ರನ್ ಕಾಣಿಕೆ ನೀಡಿದರು. ವಾನಿಂಡು ಹಸರಂಗ ಹಾಗೂ ಇಸ್ರು ಉದನಾ ರನ್ ಸಿಡಿಸಲಿಲ್ಲ. ಆದರೆ ಚಾಮಿಕಾ ಕರುಣಾರತ್ನೆ ಹೋರಾಟ ಮುಂದುವರಿಸಿದರು.

ಚಾಮಿಕ ಕರುಣಾರತ್ನೆ ಅಜೇಯ 43 ರನ್ ಹಾಗೂ ದುಶ್ಮಂತ ಚಮೀರಾ 13 ರನ್ ಸಿಡಿಸಿದರು. ಇದರೊಂದಿಗೆ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿತು. ಭಾರತದ ಪರ ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ದೀಪಕ್ ಚಹಾರ್ ತಲಾ 2 ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು 

click me!