ಡಿಸೆಂಬರ್ 06ರಂದು ಭಾರತ ‘ಎ’ ಹಾಗೂ ಆಸೀಸ್‌ ‘ಎ’ ಅಭ್ಯಾಸ ಪಂದ್ಯ

By Suvarna NewsFirst Published Dec 5, 2020, 1:03 PM IST
Highlights

ಟಿ20 ಸರಣಿ ಮುಕ್ತಾಯದ ಬಳಿಕ ಟೀಂ ಇಂಡಿಯಾ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಆಡಲಿದ್ದು, ಇದಕ್ಕೂ ಮುನ್ನ ಭಾರತ 'ಎ' ಹಾಗೂ ಆಸ್ಟ್ರೇಲಿಯಾ 'ಎ' ತಂಡಗಳು ಅಭ್ಯಾಸ  ಪಂದ್ಯ ಆಡಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಸಿಡ್ನಿ(ಡಿ.05): ಟಿ20 ಸರಣಿಯ ಜೊತೆ ಜೊತೆಗೆ ಟೆಸ್ಟ್‌ ಸರಣಿಗೂ ಸಿದ್ಧತೆ ನಡೆಸುತ್ತಿರುವ ಭಾರತ ತಂಡ, ಭಾನುವಾರದಿಂದ 3 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. 

ಟಿ20 ಸರಣಿಯಲ್ಲಿ ಆಡದ ಆಟಗಾರರು ಭಾರತ ‘ಎ’ ತಂಡದಲ್ಲಿ ಆಸ್ಪ್ರೇಲಿಯಾ ‘ಎ’ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಟೆಸ್ಟ್‌ ತಜ್ಞರಾದ ಅಜಿಂಕ್ಯ ರಹಾನೆ, ಪೃಥ್ವಿ ಶಾ, ಚೇತೇಶ್ವರ್‌ ಪೂಜಾರ, ಶುಭ್‌ಮನ್‌ ಗಿಲ್‌, ಆರ್‌.ಅಶ್ವಿನ್‌, ರಿಷಭ್‌ ಪಂತ್‌, ಹನುಮ ವಿಹಾರಿ, ಮೊಹಮದ್‌ ಸಿರಾಜ್‌ ಅಭ್ಯಾಸ ಪಂದ್ಯದಲ್ಲಿ ಆಡಲಿದ್ದಾರೆ. 

ಮಯಾಂಕ್‌ ಅಗರ್‌ವಾಲ್‌, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌ ಸಹ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಆಸ್ಪ್ರೇಲಿಯಾ ಟೆಸ್ಟ್‌ ತಂಡದ ನಾಯಕ ಟಿಮ್‌ ಪೈನ್‌, ಆರಂಭಿಕ ಜೋ ಬರ್ನ್ಸ್‌‍, ವಿಲ್‌ ಪುಕೊವ್ಸಿಕ್, ಮೋಸೆನ್‌ ಹೆನ್ರಿಕ್ಸ್‌, ಮಾರ್ಕಸ್‌ ಹ್ಯಾರಿಸ್‌, ಜೇಮ್ಸ್‌ ಪ್ಯಾಟಿಸನ್‌ ‘ಎ’ ತಂಡದಲ್ಲಿ ಆಡಲಿರುವ ಪ್ರಮುಖ ಆಟಗಾರರೆನಿಸಿದ್ದಾರೆ.

ಜಡ್ಡು ಬದಲಿಗೆ ಚಹಲ್ ಬೌಲಿಂಗ್ ಮಾಡಿದ್ದೇಕೆ..? ಐಸಿಸಿ ಕನ್ಕಶನ್ ನಿಯಮವೇನು ಹೇಳುತ್ತೆ..?

ಭಾರತ ‘ಎ’ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿ ಡಿಸೆಂಬರ್ 17ರಿಂದ ಆರಂಭವಾಗಲಿದೆ. ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯವು ಅರ್ಹನಿಶಿ(ಹಗಲು-ರಾತ್ರಿ) ಟೆಸ್ಟ್ ಪಂದ್ಯವಾಗಿದ್ದು, ಭಾರತ ವಿದೇಶಿ ನೆಲದಲ್ಲಿ ಆಡುತ್ತಿರುವ ಮೊದಲ ಹಾಗೂ ಒಟ್ಟಾರೆ ಎರಡನೇ ಡೇ ಅಂಡರ್ ನೈಟ್‌ ಟೆಸ್ಟ್ ಪಂದ್ಯ ಇದಾಗಲಿದೆ.
 

click me!