ಅಹಮದಾಬಾದ್ ಟೆಸ್ಟ್; ಮತ್ತೆ ಮಿಂಚಿದ ಅಕ್ಷರ್ ಪಟೇಲ್‌

By Suvarna NewsFirst Published Mar 4, 2021, 11:47 AM IST
Highlights

ಇಂಗ್ಲೆಂಡ್‌ ವಿರುದ್ದದ 4ನೇ ಟೆಸ್ಟ್ ಪಂದ್ಯದಲ್ಲೂ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್‌ ಮೋಡಿ ಮಾಡಿದ್ದಾರೆ. ಮೊದಲ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ಇಂಗ್ಲೆಂಡ್‌ 3 ವಿಕೆಟ್ ಕಳೆದುಕೊಂಡು 74 ರನ್‌ ಬಾರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಅಹಮದಾಬಾದ್‌(ಮಾ.04): ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ್ದ ಅಕ್ಷರ್ ಪಟೇಲ್‌, 4ನೇ ಟೆಸ್ಟ್ ಪಂದ್ಯದಲ್ಲೂ ತಮ್ಮ ಕಮಾಲ್‌ ಮುಂದುವರೆಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 74 ರನ್‌ ಬಾರಿಸಿದೆ.

ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್‌ ಮತ್ತೊಮ್ಮೆ ಶಾಕ್‌ ನೀಡಿದ್ದಾರೆ. ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೋಮಿನಿಕ್‌ ಸಿಬ್ಲಿ(2) ಹಾಗೂ ಜಾಕ್‌ ಕ್ರಾಲಿ(9) ಬಲಿ ಪಡೆಯುವಲ್ಲಿ ಅಕ್ಷರ್ ಪಟೇಲ್‌ ಯಶಸ್ವಿಯಾಗಿದ್ದಾರೆ. ಇನ್ನು ಇಂಗ್ಲೆಂಡ್‌ ನಾಯಕ ಜೋ ರೂಟ್‌ರನ್ನು ಬುಮ್ರಾ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಮೊಹಮ್ಮದ್‌ ಸಿರಾಜ್‌ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Lunch in Ahmedabad 🍲

India made a quick start, reducing England to 30/3, but Bairstow and Stokes have taken them to the break at 74/3.

Who did that session belong to? 🤔 ➡️ https://t.co/6OuUwURcgX pic.twitter.com/Rl1km6NrQ3

— ICC (@ICC)

ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್ ಆಯ್ಕೆ; ಭಾರತ 1, ಇಂಗ್ಲೆಂಡ್‌ 2 ಬದಲಾವಣೆ

ಸ್ಟೋಕ್ಸ್-ಬೇರ್‌ಸ್ಟೋವ್ ಆಸರೆ: ಒಂದು ಹಂತದಲ್ಲಿ 30 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಈಡಾಗಿದ್ದು ಇಂಗ್ಲೆಂಡ್‌ ತಂಡಕ್ಕೆ ಜಾನಿ ಬೇರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್‌ ಅಸರೆಯಾಗಿದ್ದಾರೆ. 4ನೇ ವಿಕೆಟ್‌ಗೆ ಈ ಜೋಡಿ ಮುರಿಯದ 34 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್‌ನಲ್ಲೂ ಶೂನ್ಯ ಸುತ್ತಿದ್ದ ಜಾನಿ ಬೇರ್‌ಸ್ಟೋವ್‌ ಸದ್ಯ 64 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ ಅಜೇಯ 28 ರನ್‌ ಬಾರಿಸಿದ್ದರೆ, ಬೆನ್ ಸ್ಟೋಕ್ಸ್ 24 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್‌: 74/3
ಜಾನಿ ಬೇರ್‌ಸ್ಟೋವ್‌: 28
ಅಕ್ಷರ್ ಪಟೇಲ್: 21/2
(* ಮೊದಲ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ)
 

click me!