Ind vs Aus: ಟೀಂ ಇಂಡಿಯಾಗಿಂದು ಸತತ 8ನೇ ಏಕದಿನ ಸರಣಿ ಗೆಲ್ಲುವ ಗುರಿ

Published : Mar 19, 2023, 09:58 AM IST
Ind vs Aus: ಟೀಂ ಇಂಡಿಯಾಗಿಂದು ಸತತ 8ನೇ ಏಕದಿನ ಸರಣಿ ಗೆಲ್ಲುವ ಗುರಿ

ಸಾರಾಂಶ

ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಸತತ ಎಂಟನೇ ಏಕದಿನ ಸರಣಿ ಗೆಲ್ಲುವ ವಿಶ್ವಾಸದಲ್ಲಿ ಭಾರತ ಕ್ರಿಕೆಟ್ ತಂಡ ವೈಜಾಗ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಕ್ರಿಕೆಟ್ ಪಂದ್ಯ

ವಿಶಾಖಪಟ್ಟಣಂ(ಮಾ.19): ವಾಂಖೇಡೆ ಕ್ರೀಡಾಂಗಣದ ಪಿಚ್‌ ವರ್ತಿಸಿದ ರೀತಿ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳನ್ನು ಅಚ್ಚರಿಗೊಳಿಸಿದರೂ, ಆ ಪಂದ್ಯದಲ್ಲಿ ತನ್ನ ಬ್ಯಾಟರ್‌ಗಳ ಪ್ರದರ್ಶನದ ಬಗ್ಗೆ ಎರಡೂ ತಂಡಗಳು ಹೆಚ್ಚಾಗಿ ತಲೆಕಡಿಸಿಕೊಂಡಂತಿಲ್ಲ. ಎರಡೂ ತಂಡಗಳು ಈಗಾಗಲೇ ಈ ವರ್ಷದ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು, ಈ ಸರಣಿಯು ಐಸಿಸಿ ವಿಶ್ವಕಪ್‌ ಸೂಪರ್‌ ಲೀಗ್‌ನ ವ್ಯಾಪ್ತಿಗೂ ಸೇರಿಲ್ಲ. ಆದರೂ ಭಾರತ ಭಾನುವಾರ ಇಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಆಸ್ಪ್ರೇಲಿಯಾವನ್ನು ಸೋಲಿಸಿ ತವರಿನಲ್ಲಿ ಸತತ 8ನೇ ಏಕದಿನ ಸರಣಿಯನ್ನು ಗೆಲ್ಲುವ ತವಕದಲ್ಲಿದೆ.

ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯಕ್ಕೆ ಗೈರಾಗಿದ್ದ ರೋಹಿತ್‌ ಶರ್ಮಾ ತಂಡಕ್ಕೆ ವಾಪಸಾಗಿದ್ದು, ಇಶಾನ್‌ ಕಿಶನ್‌ ಬದಲು ಕಣಕ್ಕಿಳಿಯುವ ನಿರೀಕ್ಷೆ ಇದೆ. ಒಂದು ವೇಳೆ ಭಾರತ ಎಡಗೈ ಬ್ಯಾಟರ್‌ನನ್ನು ತನ್ನ ಬ್ಯಾಟಿಂಗ್‌ ಪಡೆಯನ್ನು ಉಳಿಸಿಕೊಳ್ಳಲು ಇಚ್ಛಿಸಿದರೆ ಆಗ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ತಮ್ಮ ಸ್ಥಾನವನ್ನು ಇಶಾನ್‌ಗೆ ಬಿಟ್ಟುಕೊಡಬೇಕಾಗುತ್ತದೆ.

ಟೆಸ್ಟ್‌ ತಂಡದಿಂದ ಹೊರಬಿದ್ದಿದ್ದ ಕೆ.ಎಲ್‌.ರಾಹುಲ್‌, ಏಕದಿನ ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಬ್ಯಾಟಿಂಗ್‌ ಜೊತೆ ಅವರ ವಿಕೆಟ್‌ ಕೀಪಿಂಗ್‌ ಪ್ರದರ್ಶನವೂ ತಂಡದ ಆಡಳಿತಕ್ಕೆ ಸಮಾಧಾನ ತರಿಸಿದೆ. ವಿಶ್ವಕಪ್‌ ವೇಳೆಗೆ ರಿಷಭ್‌ ಪಂತ್‌ ತಂಡಕ್ಕೆ ವಾಪಸಾಗುವ ಸಾಧ್ಯತೆ ಕಡಿಮೆ. ಹೀಗಾಗಿ ರಾಹುಲ್‌ರ ಕೀಪಿಂಗ್‌ ತಂಡಕ್ಕೆ ಪ್ಲಸ್‌ ಪಾಯಿಂಟ್‌ ಎನಿಸಿದೆ.

ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡರೂ ವಿಶಾಖಪಟ್ಟಣಂನಲ್ಲಿ ವಿರಾಟ್‌ ಕೊಹ್ಲಿ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಆಡಿರುವ 6 ಪಂದ್ಯಗಳಲ್ಲಿ ವಿರಾಟ್‌ ಕ್ರಮವಾಗಿ 118, 117, 99, 65, ಔಟಾಗದೆ 157, 0 ರನ್‌ ಗಳಿಸಿದ್ದಾರೆ. ಇನ್ನು ಶ್ರೇಯಸ್‌ ಅಯ್ಯರ್‌ ಅನುಪಸ್ಥಿತಿಯಲ್ಲಿ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ಸೂರ್ಯಕುಮಾರ್‌ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ತಮ್ಮ ಟಿ20 ಯಶಸ್ಸನ್ನು ಏಕದಿನದಲ್ಲೂ ಮುಂದುವರಿಸಲು ಸೂರ್ಯಗೆ ಸಾಧ್ಯವಾಗುತ್ತಿಲ್ಲ. ಕಳೆದ 10 ಏಕದಿನ ಪಂದ್ಯಗಳಲ್ಲಿ ಅವರು ಕೇವಲ 110 ರನ್‌ ಕಲೆಹಾಕಿದ್ದಾರೆ. ವಿಶ್ವಕಪ್‌ಗೆ ಕೇವಲ 6 ತಿಂಗಳು ಬಾಕಿ ಇದ್ದು, ಸೂರ್ಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಲಯ ಕಂಡುಕೊಳ್ಳಬೇಕಿದೆ.

Ind vs Aus: ವೈಜಾಗ್‌ನಲ್ಲಿ ಕೊಹ್ಲಿಯೇ ಕಿಂಗ್‌..! ವಿರಾಟ್ ಸೆಂಚುರಿ ಭೀತಿಯಲ್ಲಿ ಆಸೀಸ್‌

ಇನ್ನು ಭಾರತ ಈ ಪಂದ್ಯದಲ್ಲಿ ಒಬ್ಬ ಹೆಚ್ಚುವರಿ ಸ್ಪಿನ್ನರ್‌ ಕಣಕ್ಕಿಳಿಸಬಹುದು. ವಿಶಾಖಪಟ್ಟಣಂನಲ್ಲಿ ಸ್ಪಿನ್ನರ್‌ಗಳು(5.64) ವೇಗಿದ ಬೌಲರ್‌(6.15)ಗಳಿಗಿಂತ ಉತ್ತಮ ಎಕಾನಮಿ ರೇಟ್‌ ಹೊಂದಿದ್ದಾರೆ. ವಾಷಿಂಗ್ಟನ್‌ ಸುಂದರ್‌ ಅಥವಾ ಅಕ್ಷರ್‌ ಪಟೇಲ್‌ಗೆ ಸ್ಥಾನ ಸಿಗಬಹುದು.

ಮತ್ತೊಂದೆಡೆ ಆಸ್ಪ್ರೇಲಿಯಾ ಮೊದಲ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಹಾಗೂ ಅಲೆಕ್ಸ್‌ ಕೇರ್ರಿ ಸೇವೆಯಿಂದ ವಂಚಿತವಾಗಿತ್ತು. ಈ ಪಂದ್ಯದಲ್ಲಿ ಇಬ್ಬರೂ ಆಡಬಹುದು. ವಾರ್ನರ್‌ ವಾಪಸಾದರೆ ತಂಡದ ಬ್ಯಾಟಿಂಗ್‌ ಕ್ರಮಾಂಕವೂ ಬದಲಾಗಲಿದೆ. ಮೊದಲ ಪಂದ್ಯದಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದ ಆಸೀಸ್‌ ಪುಟಿದೇಳಲು ಕಾಯುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್ ಕೊಹ್ಲಿ, ಇಶಾನ್ ಕಿಶನ್‌, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌.

ಆಸ್ಪ್ರೇಲಿಯಾ: ಮಿಚೆಲ್ ಮಾರ್ಶ್‌, ಡೇವಿಡ್ ವಾರ್ನರ್‌, ಸ್ಟೀವ್ ಸ್ಮಿತ್‌ (ನಾಯಕ), ಮಾರ್ನಸ್ ಲಬುಶೇನ್‌, ಅಲೆಕ್ಸ್‌ ಕೇರಿ, ಕ್ಯಾಮರೋನ್ ಗ್ರೀನ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋಯ್ನಿಸ್‌, ಶಾನ್‌ ಅಬ್ಬಾಟ್‌, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಚ್‌

ವಿಶಾಖಪಟ್ಟಣಂ ಸಾಮಾನ್ಯವಾಗಿ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗುವ ತಾಣವಾಗಿದ್ದು, ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 295 ರನ್‌. ಕಳೆದ ಬಾರಿ(2019ರಲ್ಲಿ) ಭಾರತ ಇಲ್ಲಿ ಏಕದಿನ ಪಂದ್ಯವಾಡಿದಾಗ ವಿಂಡೀಸ್‌ ವಿರುದ್ಧ 387 ರನ್‌ ಕಲೆಹಾಕಿತ್ತು. ಭಾನುವಾರದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಓವರ್‌ಗಳು ಕಡಿತಗೊಳ್ಳಬಹುದು. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ