ICC Women's World Cup: ಬಲಿಷ್ಠ ಆಸೀಸ್‌ಗೆ ಹ್ಯಾಟ್ರಿಕ್‌ ಜಯ

By Suvarna NewsFirst Published Mar 14, 2022, 9:51 AM IST
Highlights

* ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾಗೆ ಹ್ಯಾಟ್ರಿಕ್ ಗೆಲುವು

* ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ

* ಆತಿಥೇಯ ನ್ಯೂಜಿಲೆಂಡ್ ಎದುರು ಆಸ್ಟ್ರೇಲಿಯಾಗೆ ಭರ್ಜರಿ ಜಯ

ವೆಲ್ಲಿಂಗ್ಟನ್(ಮಾ.14)‌: ಎಲ್ಲೀಸ್‌ ಪೆರ್ರಿ, ತಾಹಿಲ ಮೆಗ್ರಾಥ್‌ ಹಾಗೂ ಆ್ಯಶ್ಲೇ ಗಾರ್ಡ್‌ನ​ರ್ಸ್‌ ಆಲ್ರೌಂಡ್‌ ಪ್ರದರ್ಶನದ ನೆರವಿನಿಂದ ಆಸ್ಪ್ರೇಲಿಯಾ ತಂಡ, ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ 141 ರನ್‌ ಭರ್ಜರಿ ಗೆಲುವು ಸಾಧಿಸಿತು. ಹ್ಯಾಟ್ರಿಕ್‌ ಗೆಲುವು ಕಂಡ ಆಸೀಸ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅಡಿದ 4 ಪಂದ್ಯಗಳ ಪೈಕಿ 3 ಗೆಲುವು ಹಾಗೂ ಒಂದು ಸೋಲಿನೊಂದಿಗೆ ಒಟ್ಟು 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಭಾರತ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ

ಆಸೀಸ್‌ ಮೊದಲು ಬ್ಯಾಟ್‌ ಮಾಡಿ 8 ವಿಕೆಟ್‌ಗೆ 269 ರನ್‌ ಕಲೆ ಹಾಕಿತು. ಪೆರ್ರಿ(68), ಮೆಗ್ರಾಥ್‌(57) ಅರ್ಧಶತಕ ಬಾರಿಸಿದರೆ, ಆ್ಯಶ್ಲೇ ಕೇವಲ 18 ಎಸೆತಗಳಲ್ಲಿ 48 ರನ್‌ ಸಿಡಿಸಿ ತಂಡ ಬೃಹತ್‌ ಮೊತ್ತ ಕಲೆ ಹಾಕಲು ನೆರವಾದರು. ಗುರಿ ಬೆನ್ನತ್ತಿದ ಕಿವೀಸ್‌ 30.2 ಓವರ್‌ಗಳಲ್ಲಿ 128 ರನ್‌ಗೆ ಆಲೌಟಾಯಿತು. ಆ್ಯಮಿ ಸ್ಯಾಟ್ಟರ್‌ವೈಟ್‌ 44 ರನ್‌ ಗಳಿಸಿದರು. 4 ಪಂದ್ಯಗಳಲ್ಲಿ 2ನೇ ಸೋಲುಂಡ ನ್ಯೂಜಿಲೆಂಡ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನು ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Latest Videos

ಇಂಗ್ಲೆಂಡ್‌-ವೆಸ್ಟ್‌ಇಂಡೀಸ್‌ ಮೊದಲ ಟೆಸ್ಟ್‌ ಪಂದ್ಯ ಡ್ರಾ

ಸೇಂಟ್‌ ಜಾನ್ಸ್‌: ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ (England vs West Indies) ನಡುವಿನ ಮೊದಲ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 4ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 217 ರನ್‌ ಗಳಿಸಿದ್ದ ಇಂಗ್ಲೆಂಡ್‌, ಭಾನುವಾರ 6 ವಿಕೆಟ್‌ಗೆ 369 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಗೆಲುವಿಗೆ 286 ರನ್‌ ಗುರಿ ಪಡೆದ ವಿಂಡೀಸ್‌ 4 ವಿಕೆಟ್‌ಗೆ 147 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು. 

Faf du Plessis: ನನ್ನ, ಧೋನಿ ನಾಯಕತ್ವದಲ್ಲಿ ಹೆಚ್ಚು ಸಾಮತ್ಯಯಿದೆ..!

ಎರಡನೇ ಇನಿಂಗ್ಸ್‌ನಲ್ಲಿ ಕೇವಲ 67ಕ್ಕೆ 4 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖಮಾಡಿದ್ದರೂ ಬೊನ್ನೆರ್‌(ಔಟಾಗದೆ 38), ಜೇಸನ್‌ ಹೋಲ್ಡರ್‌(ಔಟಾಗದೆ 37) ಇಂಗ್ಲೆಂಡ್‌ಗೆ ಗೆಲುವು ನಿರಾಕರಿಸಿದರು. ಮೊದಲ ಇನ್ನಿಂಗ್ಸಲ್ಲಿ ಇಂಗ್ಲೆಂಡನ್ನು 311ಕ್ಕೆ ನಿಯಂತ್ರಿಸಿದ್ದ ವಿಂಡೀಸ್‌, ಬಳಿಕ 375 ರನ್‌ ಕಲೆ ಹಾಕಿತ್ತು. ಮೊದಲ ಇನಿಂಗ್ಸ್‌ನಲ್ಲಿ ಉಪಯುಕ್ತ 64 ರನ್‌ಗಳ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಬಲಿಷ್ಠ ಇಂಗ್ಲೆಂಡ್ ತಂಡದ ಮೇಲೆ ಬಿಗಿಹಿಡಿತ ಸಾಧಿಸಲು ವಿಂಡೀಸ್ ಯತ್ನಿಸಿತಾದರೂ, ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ ಕಮ್‌ಬ್ಯಾಕ್‌ ಮಾಡುವ ಮೂಲಕ ಪಂದ್ಯ ಕೈಜಾರದಂತೆ ನೋಡಿಕೊಂಡಿತು.

ರಣಜಿ ಪ್ರಿ ಕ್ವಾರ್ಟರ್‌: ಜಾರ್ಖಂಡ್‌ 769/9

ಕೋಲ್ಕತಾ: ಕುಮಾರ್‌ ಕುಶಾಗ್ರಾ ಚೊಚ್ಚಲ ದ್ವಿಶತಕ ಹಾಗೂ ಶಹಬಾಜ್‌ ನದೀಂ ಆಕರ್ಷಕ ಶತಕದ ನೆರವಿನಿಂದ ನಾಗಾಲ್ಯಾಂಡ್‌ ವಿರುದ್ಧದ ರಣಜಿ ಟ್ರೋಫಿ (Ranji Trophy) ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಾರ್ಖಂಡ್‌ ಬೃಹತ್‌ ಮೊತ್ತ ಕಲೆ ಹಾಕಿದೆ. ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 402 ರನ್‌ ಗಳಿಸಿದ್ದ ಜಾರ್ಖಂಡ್‌ 2ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ ಬರೋಬ್ಬರಿ 769 ರನ್‌ ಕಲೆ ಹಾಕಿದೆ. 

ಮೊದಲ ದಿನ ಶತಕ ಬಾರಿ ಅಜೇಯವಾಗಿ ಉಳಿದಿದ್ದ 17 ವರ್ಷದ ಕುಶಾಗ್ರಾ ಕೇವಲ 269 ಎಸೆತಗಳಲ್ಲಿ 266 ರನ್‌ ಸಿಡಿಸಿದರು. 7ನೇ ವಿಕೆಟ್‌ಗೆ ಕುಶಾಗ್ರಾ-ನದೀಂ ಜೋಡಿ 166 ರನ್‌ ಜೊತೆಯಾಟವಾಡಿತು. 123 ರನ್‌ ಬಾರಿಸಿರುವ ನದೀಂ ಹಾಗೂ ರಾಹುಲ್‌ ಶುಕ್ಲಾ(29) 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

click me!