T20 World Cup: Aus vs Pak ಪಾಕ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಆಸೀಸ್‌..?

Kannadaprabha News   | Asianet News
Published : Nov 11, 2021, 06:58 AM IST
T20 World Cup: Aus vs Pak ಪಾಕ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಆಸೀಸ್‌..?

ಸಾರಾಂಶ

* ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕ್‌-ಆಸೀಸ್ ಕಾದಾಟ * ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ * ಸತತ ಗೆಲುವಿನಿಂದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಪಾಕಿಸ್ತಾನ

ದುಬೈ(ನ.11): 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಗೆಲ್ಲುವ ಫೇವರಿಟ್‌ ಎನಿಸಿಕೊಂಡಿರುವ ಮಾಜಿ ಚಾಂಪಿಯನ್‌ ಪಾಕಿಸ್ತಾನ (Pakistan Cricket Team) ಹಾಗೂ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಆಸ್ಪ್ರೇಲಿಯಾ (Australia Cricket Team) ಗುರುವಾರ 2ನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

2009ರ ಚಾಂಪಿಯನ್‌ ಪಾಕಿಸ್ತಾನ, ಸೂಪರ್‌-12 ಹಂತದಲ್ಲಿ ಸೋಲು ಕಾಣದ ಏಕೈಕ ತಂಡವಾಗಿದ್ದು, ಆಡಿರುವ ಐದೂ ಪಂದ್ಯಗಳಲ್ಲಿ ಜಯಿಸಿದೆ. ಪಾಕ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಆಸೀಸ್‌ ಕಾತರಿಸುತ್ತಿದೆ. ಆಸೀಸ್‌ ಪ್ರಧಾನ ಸುತ್ತಿನಲ್ಲಿ ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಸೋಲುಂಡರೂ ಉಳಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಸೆಮೀಸ್‌ಗೆ ಅರ್ಹತೆ ಪಡೆದಿದೆ. 2010ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವಿನ ಅತೀ ರೋಚಕ ಸೆಮಿಫೈನಲ್‌ ಕಾದಾಟದಲ್ಲಿ ಆಸ್ಪ್ರೇಲಿಯಾ ಗೆದ್ದು ಬೀಗಿತ್ತು. ಈ ಸೋಲಿಗೆ ಸೇಡು ತೀರಿಸಿಕೊಂಡು 3ನೇ ಬಾರಿಗೆ ಫೈನಲ್‌ ಪ್ರವೇಶಿಸುವ ಕಾತರದಲ್ಲಿ ಪಾಕ್‌ ಇದ್ದರೆ, ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸು ಹೊತ್ತಿರುವ ಆಸೀಸ್‌ 2ನೇ ಬಾರಿ ಫೈನಲ್‌ ಪ್ರವೇಶಿಸಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳಲು ಎದುರು ನೋಡುತ್ತಿದೆ.

T20 World Cup 2021: ಇಂಗ್ಲೆಂಡ್ ಮಣಿಸಿ ಚೊಚ್ಚಲ ಭಾರಿಗೆ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್!

ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಬಲಿಷ್ಠ ನ್ಯೂಜಿಲೆಂಡ್‌ಗೆ ಸೋಲುಣಿಸಿರುವ ಪಾಕ್‌ ಅದೇ ಉತ್ಸಾಹದಲ್ಲಿ ಸೆಮೀಸ್‌ ಕಾದಾಟಕ್ಕೆ ಸಿದ್ಧವಾಗಿದೆ. ಬಾಬರ್‌ ಆಜಂ ಪಡೆಗೆ ಯುಎಇ ಪಿಚ್‌ಗಳು ತವರಿನ ಅನುಭವ ನೀಡುತ್ತಿದ್ದು, ತಂಡ ಎಲ್ಲಾ ವಿಭಾಗಗಳಲ್ಲೂ ಉತ್ತಮ ಲಯ ಕಾಯ್ದುಕೊಂಡಿದೆ. 5 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಬಾರಿಸಿ ಉತ್ಕೃಷ್ಟ ಲಯದಲ್ಲಿರುವ ಆಜಂ (Babar Azam) ಜೊತೆ ಮೊಹಮದ್‌ ರಿಜ್ವಾನ್‌, ಅನುಭವಿಗಳಾದ ಶೋಯಿಬ್‌ ಮಲಿಕ್‌ (Shoaib Malik), ಮೊಹಮದ್‌ ಹಫೀಜ್‌, ಮ್ಯಾಚ್‌ ಫಿನಿಶರ್‌ ಆಸಿಫ್‌ ಅಲಿ ಆಸೀಸ್‌ಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಬೌಲಿಂಗ್‌ ವಿಭಾಗ ಕೂಡಾ ಅತ್ಯುತ್ತಮ ಲಯದಲ್ಲಿದ್ದು, ಶಾಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಹಸನ್‌ ಅಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ. ವಸೀಂ, ಶದಾಬ್‌ ಖಾನ್‌ರ ಸ್ಪಿನ್‌ ಬೌಲಿಂಗ್‌ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ.

ಮತ್ತೊಂದೆಡೆ ಇಂಗ್ಲೆಂಡ್‌ ವಿರುದ್ಧದ ಸೋಲನ್ನು ಹೊರತುಪಡಿಸಿ ಆಸ್ಪ್ರೇಲಿಯಾ ಉಳಿದ ಪಂದ್ಯಗಳಲ್ಲಿ ಪ್ರಾಬಲ್ಯ ಮೆರೆದಿತ್ತು. ಬ್ಯಾಟಿಂಗ್‌ ಆಧಾರಸ್ತಂಭ ಡೇವಿಡ್‌ ವಾರ್ನರ್‌ ಲಯಕ್ಕೆ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ನಾಯಕ ಆ್ಯರೋನ್‌ ಫಿಂಚ್‌ (Aaron Finch) ಕೂಡಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಲ್ರೌಂಡರ್‌ಗಳಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಮಿಚೆಲ್‌ ಮಾರ್ಶ್ ಪಾಕ್‌ಗೆ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ಆಘಾತ ನೀಡುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್‌ ಸ್ಮಿತ್‌ (Steve Smith), ಮಾರ್ಕಸ್‌ ಸ್ಟೋಯ್ನಿಸ್‌ ತಂಡಕ್ಕೆ ನೆರವಾಗಬೇಕಿದೆ. ವಿಶ್ವದರ್ಜೆಯ ಬೌಲರ್‌ಗಳಾದ ಜೋಶ್‌ ಹೇಜಲ್‌ವುಡ್‌, ಮಿಚೆಲ್‌ ಸ್ಟಾರ್ಕ್ ಹಾಗೂ ಪ್ಯಾಟ್‌ ಕಮಿನ್ಸ್‌ ತಮ್ಮ ವೇಗದ ಬೌಲಿಂಗ್‌ ಮೂಲಕವೇ ಮತ್ತೊಮ್ಮೆ ಎದುರಾಳಿ ತಂಡಕ್ಕೆ ಕಂಟಕವಾಗಲು ಕಾಯುತ್ತಿದ್ದಾರೆ. ಟೂರ್ನಿಯಲ್ಲಿ 2ನೇ ಗರಿಷ್ಠ ವಿಕೆಟ್‌ ಪಡೆದಿರುವ ಆ್ಯಡಂ ಜಂಪಾ ತಮ್ಮ ಸ್ಪಿನ್‌ ಅಸ್ತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಲು ಕಾತರಿಸುತ್ತಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಪಾಕಿಸ್ತಾನ: ಬಾಬರ್‌ ಆಜಂ(ನಾಯಕ) ರಿಜ್ವಾನ್‌, ಫಖರ್‌ ಜಮಾನ್‌, ಹಫೀಜ್‌, ಮಲಿಕ್‌, ಆಸಿಫ್‌ ಅಲಿ, ಶದಾಬ್‌, ಇಮಾದ್‌, ಹಸನ್‌, ಹಾರಿಸ್‌ ರೌಫ್‌, ಶಾಹೀನ್‌ ಅಫ್ರಿದಿ

ಆಸ್ಪ್ರೇಲಿಯಾ: ಫಿಂಚ್‌(ನಾಯಕ), ವಾರ್ನರ್‌, ಮಿಚೆಲ್‌ ಮಾಷ್‌ರ್‍, ಮ್ಯಾಕ್ಸ್‌ವೆಲ್‌, ಸ್ಮಿತ್‌, ಸ್ಟೋಯ್ನಿಸ್‌, ಮ್ಯಾಥ್ಯೂ ವೇಡ್‌, ಕಮಿನ್ಸ್‌, ಸ್ಟಾರ್ಕ್, ಜಂಪಾ, ಹೇಜಲ್‌ವುಡ್‌

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?