ಮುಂಬೈಗೆ ಟಾಂಟ್ ಕೊಡುತ್ತಲೇ ಅಯ್ಯರ್‍‌ಗೆ ಬಿಗ್ ಮೆಸೇಜ್ ರವಾನಿಸಿದ ಹಾರ್ದಿಕ್ ಪಾಂಡ್ಯ

Published : Nov 11, 2026, 11:22 PM IST
hardik pandya and shreyas iyer

ಸಾರಾಂಶ

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆದು ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್‌ಗೆ ವಿಶೇಷ ಸಂದೇಶ ಕಳುಹಿಸಿರುವ ಪಾಂಡ್ಯ, ತಂಡದ ಬೆಂಬಲದ ಭರವಸೆ ನೀಡಿದ್ದಾರೆ.

ಐಪಿಎಲ್‌ನಲ್ಲಿ ಆಟಗಾರರ ಅದಲು ಬದಲು ಪ್ರಕ್ರಿಯೆಗಳು ಜೋರಾಗಿವೆ. ಟ್ರೆಂಡಿಂಗ್ ವಿಷಯ ಏನೆಂದರೆ ಹಾರ್ದಿಕ್ ಪಾಂಡ್ಯ ಅವರು, ಪಂಜಾಬ್ ಕಿಂಗ್ಸ್‌ ಸೇರಿದ್ದಾರೆ. ಬೆನ್ನಲ್ಲೇ ಪಾಂಡ್ಯ, ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ.

ಏನಂದ್ರು ಪಾಂಡ್ಯ?

ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಜರ್ಸಿ ತೊಟ್ಟಿರುವ ಹಾರ್ದಿಕ್ ಪಾಂಡ್ಯ, ಕ್ಯಾಪ್ಟನ್ ಅಯ್ಯರ್‍‌ಗೆ ಸ್ಪೆಷಲ್ ಸಂದೇಶ ಕಳುಹಿಸಿದ್ದಾರೆ. ಸತ್ ಶ್ರೀ ಅಕಲ್, ನನ್ನ ನಾಯಕ ಶ್ರೇಯಸ್, ನನ್ನ ಕೋಚ್ ರಿಕಿ, ನನ್ನ ತಂಡ ಇಡೀ ಪಂಜಾಬ್. ನಾನು ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಬರೆದುಕೊಂಡಿದ್ದಾರೆ.

ಪಾಂಡ್ಯ ಅವರ ಈ ಪೋಸ್ಟ್ ಹಲವು ಪ್ರಶ್ನೆಗಳನ್ನ ಹುಟ್ಟಿಹಾಕಿದೆ. ಮುಂಬೈ ತಂಡದಲ್ಲಿದ್ದಾಗ ಪಾಂಡ್ಯ ನಾಯಕರಾಗಿದ್ದರು. ಆದರೆ ಗುಜರಾತ್ ಟೈಟನ್ಸ್‌ನಿಂದ ಬಂದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾ ಕೆಳಗೆ ಇಳಿಯಬೇಕಾಗಿಯಿತು. ಆಗ ಮುಂಬೈ ಇಂಡಿಯನ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಟೀಂ, ರೋಹಿತ್ ಶರ್ಮಾ ಟೀಂ ಎಂಬ ಎರಡು ಅಘೋಷಿತ ಬಣಗಳು ಸೃಷ್ಟಿಯಾಗಿದ್ದವು. ನಂತರ ಟಿ-20 ವಿಶ್ವಕಪ್ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಪಾಂಡ್ಯ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ಗೊಂದಲಗಳಿಂದ ಪಾಂಡ್ಯಗೆ ಮುಂಬೈ ಇಂಡಿಯನ್ಸ್‌ನಲ್ಲಿ ಬೆಂಬಲ ಸಿಗಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದೇ ಕಾರಣಕ್ಕೆ ಪಾಂಡ್ಯ ಅವರು, ನನ್ನ ತಂಡ ಇಡೀ ಪಂಜಾಬ್ ಎಂದು ಬರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

18 ಕೋಟಿಗೆ ಪಂಜಾಬ್ ಸೇರಿದ ಪಾಂಡ್ಯ

ಐಪಿಎಲ್‌ನ ಅತಿದೊಡ್ಡ ವಹಿವಾಟು ಎಂದು ಪರಿಗಣಿಸಲಾಗಿದೆ. ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ಸೇರಿದ್ದಾರೆ. ಪಂಜಾಬ್ ಭಾರತದ ಪ್ರಮುಖ ಟಿ20 ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ವಿನಿಮಯ ಮಾಡಿಕೊಂಡಿದೆ. ಹಾರ್ದಿಕ್ ಪಂಜಾಬ್‌ನಲ್ಲಿ ₹18 ಕೋಟಿ ರೂಪಾಯಿಗೆ ಹೋದರೆ, ಅರ್ಷದೀಪ್ ಸಿಂಗ್ ಕೂಡ 18 ಕೋಟಿಗೆ ಮುಂಬೈ ಸೇರಿದ್ದಾರೆ. ಮುಂಬೈ ಇಂಡಿಯನ್ಸ್‌ನಲ್ಲಿ ಪಾಂಡ್ಯ 16.35 ಕೋಟಿ ರೂಪಾಯಿ ಪಡೆಯುತ್ತಿದ್ದರು.

ಪಂಜಾಬ್ ಕಿಂಗ್ಸ್‌ ಪಾಂಡ್ಯ ಆಗಮನ ಆನೆ ಬಲ ಬಂದಂತಾಗಿದೆ. ಯಾಕೆಂದರೆ ಪಾಂಡ್ಯ ಅವರಿಗೆ ನಾಯಕನಾಗಿ ಅನುಭವ ಇದೆ. ತಂಡವನ್ನು ಮುನ್ನಡೆಸುವ ತಾಕತ್ತಿದೆ. ಒತ್ತಡದ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸುವ ತಾಕತ್ತಿದೆ. ಜೊತೆಗೆ ಬೌಲಿಂಗ್ ಮತ್ತು ಬ್ಯಾಟಿಂಗ್‌ ವಿಭಾಗದಲ್ಲೂ ಕೊಡುಗೆ ನೀಡಬಲ್ಲರು. ಇನ್ನು ಪಾಂಡ್ಯ ಅವರು ಮುಂಬೈ ತಂಡದ ಜೊತೆ ನಾಲ್ಕು ಟ್ರೋಫಿಯನ್ನ ಗೆದ್ದ ಅನುಭವ ಪಾಂಡ್ಯಗೆ ಇದೆ. ಜೊತೆಗೆ ಗುಜರಾತ್ ಟೈಟನ್ಸ್‌ನಲ್ಲಿದ್ದಾಗ ತಾವೇ ತಂಡವನ್ನು ಚಾಂಪಿಯನ್ ಮಾಡಿದ್ದರು.

ಪಾಂಡ್ಯ ಅವರು ಐಪಿಎಲ್‌ನಲ್ಲಿ 162 ಪಂದ್ಯಗಳನ್ನ ಆಡಿರುವ ಅನುಭವ ಹೊಂದಿದ್ದಾರೆ. 2955 ರನ್‌ಗಳಿಸಿರುವ ಪಾಂಡ್ಯ, 10 ಬಾರಿ ಅರ್ಧಶತಕ ಬಾರಿಸಿದ್ದಾರೆ. ಅತ್ಯಧಿಕ ರನ್ 91 ಆಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಪಾಂಡ್ಯ ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಾರೆ. ಇನ್ನು ಬೌಲಿಂಗ್‌ನಲ್ಲಿ 82 ವಿಕೆಟ್ ಪಡೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರ್ಷದೀಪ್ ಸಿಂಗ್ ಜೊತೆ ನಟಿ ಸಮ್ರೀನ್ ಕೌರ್ ಎಂಗೇಜ್‌ಮೆಂಟ್; ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?
ಕಾವ್ಯ ಮಾರನ್‌ಗೆ ಅನಿರುದ್ಧ ಪ್ರಪೋಸ್ ಮಾಡಿದ ವಿಡಿಯೋ ವೈರಲ್, ಒಂದು ಟ್ವಿಸ್ಟ್ ಇದೆ!