ಶುಬಮನ್ ಜೊತೆ ಆಡಿ ಗೆಲುವಿನ ರೂವಾರಿಯಾಗಿದ್ದ ಮಾಜಿ ಟೀಂಮೇಟ್ ಅರೆಸ್ಟ್, ಭುಗಿಲೆದ್ದ ಮ್ಯಾಚ್ ಫಿಕ್ಸಿಂಗ್

Published : Jul 17, 2026, 05:58 PM IST
Cricker Manjot Kalra

ಸಾರಾಂಶ

ಶುಬಮನ್ ಗಿಲ್ ಜೊತೆ ಟೂರ್ನಿಗಳನ್ನಾಡಿದ ಮಾಜಿ ಟೀಂಮೇಟ್ ಅರೆಸ್ಟ್ ಆಗಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಕ್ರಿಕೆಟಿಗನ ಅರೆಸ್ಟ್ ಮಾಡಿದ್ದಾರೆ. ಶ್ರೀಲಂಕಾ ಹೊಟೆಲ್‌ನಲ್ಲಿ ತಂಗಿದ್ದ ಕ್ರಿಕೆಟಿಗ ಇದೀಗ ಬಂಧನಕ್ಕೊಳಗಾಗಿದ್ದಾರೆ.

ನವದೆಹಲಿ (ಜು.17) ಕ್ರಿಕೆಟ್ ಜಗತ್ತನ್ನೇ ಮತ್ತೆ ತಲ್ಲಣಿಸುವಂತ ಘಟನೆ ನಡೆದಿದೆ. ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಜೊತೆ ಹಲವು ಪಂದ್ಯಗಳನ್ನಾಡಿದ್ದ ಮಾಜಿ ಟೀಂಮೇಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಗಿಲ್ ಜೊತೆ ಅಂಡರ್ 19 ತಂಡದಲ್ಲಿ ಆಡಿದ್ದ ಮಾಜಿ ಟೀಂಮೇಟ್ ಮನ್ಜೋತ್ ಕಾಲ್ರಾರನ್ನು ಶ್ರೀಲಂಕಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀಲಂಕಾ ಪ್ರೀಮಿಯರ್ ಲೀಗ್ 2026 ಉದ್ಘಾಟನಾ ಪಂದ್ಯಕ್ಕೂ ಮೊದಲೇ ಮನೋಜ್ ಕಾಲ್ರಾ ಅರೆಸ್ಟ್ ಆಗಿದ್ದಾರೆ.

ಅಂಡರ್ 19 ವಿಶ್ವಕಪ್ ಫೈನಲ್ ಹೀರೋ

ಮನೋಜ್ ಕಾಲ್ರಾ ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಾಫ್ನಾ ಕಿಂಗ್ಸ್ ಫ್ರಾಂಚೈಸಿ ಸಹ ಮಾಲೀಕರಾಗಿದ್ದಾರೆ. ಶ್ರೀಲಂಕನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಹಾಗೂ ಭ್ರಷ್ಟಾಚಾರ ನಡೆಸಿದ ಗಂಭೀರ ಆರೋಪ ಹಾಗೂ ಕೆಲ ಸಾಕ್ಷ್ಯಗಳ ಆಧಾರದಲ್ಲಿ ಮನ್ಜೋತ್ ಕಾಲ್ರ ಅರೆಸ್ಟ್ ಮಾಡಲಾಗಿದೆ. ಮನೋಜ್ ಕಾಲ್ರಾ 2018ರ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಭಾರತ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂದ್ಯಗಳ ಫಲಿತಾಂಶ, ಅಕ್ರಮವಾಗಿ ಆಟಗಾರರ ಸೆಳೆಯಲು, ತಮಗೆ ಬೇಕಾದ ರೀತಿ ಪಂದ್ಯ, ಓವರ್ ಫಿಕ್ಸ್ ಮಾಡಲು ಲಂಚದ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಶ್ರೀಲಂಕಾ ಪೊಲೀಸರು 2019ರ ಕ್ರೀಡಾ ಕಾಯ್ದೆ ಅಡಿ ಬಂಧಿಸಲಾಗಿದೆ. ಕಳೆದ ಹಲವು ದಿನಗಳಿಂದ ತನಿಖೆ ನಡೆಸುತ್ತಿದ್ದ ಶ್ರೀಲಂಕಾ ಪೊಲೀಸರು ಸತತವಾಗಿ ಮ್ಯಾಚ್ ಫಿಕ್ಸಿಂಗ್ ಪ್ರಕರಣವನ್ನು ಹಿಂಬಾಲಿಸಿದ್ದರು. ಸಾಕ್ಷ್ಯಾ ಆಧಾರಗಳನ್ನು ಸಂಗ್ರಹಿಸಿ ಮನ್ಜೋತ್ ಕಾಲ್ರಾ ಅವರನ್ನು ಬಂಧಿಸಲಾಗಿದೆ.

ಮನೋಜ್ ಕಾಲ್ರಾ ಟೀಂ ಇಂಡಿಯಾ ಅಂಡರ್ 19 ತಂಡದ ಮೂಲಕ ಭಾರಿ ಗಮನಸೆಳೆದಿದ್ದರು. ಶುಬಮನ್ ಗಿಲ್, ಪೃಥ್ವಿ ಶಾ ಅವರೊಂದಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಂಡರ್ 19 ಫೈನಲ್ ಪಂದ್ಯದಲ್ಲಿ ಮನೋಜ್ ಕಾಲ್ರಾ 101 ರನ್ ಸಿಡಿಸಿದ್ದರು. ಮನ್ಜೋತ್ ಅಬ್ಬರದಿಂದ ಭಾರತ ಅಂಡರ್ 19 ತಂಡ ಟ್ರೋಫಿ ಗೆದ್ದುಕೊಂಡಿತ್ತು. ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಸ್ಥಾನ ಪಡೆದಿದ್ದರು. ಆದರೆ ವಯಸ್ಸಿನ ನಕಲಿ ದಾಖಲೆ ತೋರಿಸಿದ್ದಾರೆ ಅನ್ನೋ ಕಾರಣಕ್ಕೆ ಬಿಸಿಸಿಐನಿಂದ ಎರಡು ವರ್ಷ ಬ್ಯಾನ್ ಆಗಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತೆಂಡೂಲ್ಕರ್ 100 ಶತಕದ ಸೀಕ್ರೆಟ್, ಪಂದ್ಯಕ್ಕೂ ಮುನ್ನ ತಪ್ಪದೇ ಮಾಡ್ತಿದ್ದ ಒಂದು ಕೆಲಸ ಬಿಚ್ಚಿಟ್ಟ ಸಚಿನ್
ಇಂಗ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ; ಸ್ಟಾರ್ ಆಲ್ರೌಂಡರ್ 3ನೇ ಏಕದಿನ ಪಂದ್ಯದಿಂದ ಔಟ್?