ಮುಂಬೈ ಇಂಡಿಯನ್ಸ್ ತಂಡವನ್ನ ಉಳಿದ ತಂಡದ ನಾಯಕರು ನಂಬದ ಸ್ಥಿತಿಗೆ ಬಂದಿದ್ದಾರೆ. ಪ್ರತಿ ಪಂದ್ಯದಲ್ಲೂ ಏನಾದರೊಂದು ಮೋಸದಾಟವಾಡಿ ಪಂದ್ಯ ಗೆಲ್ಲುತ್ತೆ ಅನ್ನೋ ಕಾರಣಕ್ಕೆ. RCB-ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಟ್ಯಾಂಪರಿಂಗ್ ಆಗಿತ್ತು ಅನ್ನೋ ಸುದ್ದಿ ಇತ್ತು.
ಬೆಂಗಳೂರು: ಐಪಿಎಲ್‌ನಲ್ಲಿ ಅಂಪೈರ್ಸ್ ಮತ್ತು ಮ್ಯಾಚ್ ರೆಫ್ರಿಗಳು ಮುಂಬೈ ಇಂಡಿಯನ್ಸ್ ಪರ ಇರ್ತಾರೆ ಅನ್ನೋ ಆರೋಪವಿದೆ. ಅದಕ್ಕೆ ಅನೇಕ ಉದಾಹರಣೆಗಳು ಇವೆ. ಆದ್ರೀಗ ಮುಂಬೈ ಇಂಡಿಯನ್ಸ್ ಟಾಸ್ ಟ್ಯಾಂಪರಿಂಗ್ ಮಾಡಿದೆ ಅನ್ನೋ ಆರೋಪ ಕೇಳಿ ಬರ್ತಿದೆ. ಅದು ಆರ್ಸಿಬಿ ವಿರುದ್ಧ. ಈ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ ಫಾಫ್ ಡು ಪ್ಲೆಸಿಸ್.
ಆರ್‌ಸಿಬಿ ನಾಯಕನಿಗೆ ಮೋಸದಾಟ ಗೊತ್ತಾಗಿದ್ಯಾ..?
ಮುಂಬೈ ಇಂಡಿಯನ್ಸ್ ತಂಡವನ್ನ ಉಳಿದ ತಂಡದ ನಾಯಕರು ನಂಬದ ಸ್ಥಿತಿಗೆ ಬಂದಿದ್ದಾರೆ. ಪ್ರತಿ ಪಂದ್ಯದಲ್ಲೂ ಏನಾದರೊಂದು ಮೋಸದಾಟವಾಡಿ ಪಂದ್ಯ ಗೆಲ್ಲುತ್ತೆ ಅನ್ನೋ ಕಾರಣಕ್ಕೆ. RCB-ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಟ್ಯಾಂಪರಿಂಗ್ ಆಗಿತ್ತು ಅನ್ನೋ ಸುದ್ದಿ ಇತ್ತು. ಆ ವಿಡಿಯೋ ವೈರಲ್ ಸಹ ಆಗಿತ್ತು. ಈಗ ಮುಂಬೈ-ಬೆಂಗಳೂರು ಪಂದ್ಯದ ಟಾಸ್, ಟ್ಯಾಂಪರಿಂಗ್ ಆಗಿದೆ ಅನ್ನೋ ವಿಷ್ಯವಾಗಿ RCB ನಾಯಕ ಫಾಫ್ ಡುಪ್ಲೆಸಿಸ್ ಮಹತ್ವದ ಸುಳಿವು ನೀಡಿದ್ದಾರೆ.
47 ಕೋಟಿ ಪಡೆದ ನಾಲ್ವರು ಬೆಂಚ್ ಕಾದ್ರು..! RCB ಮ್ಯಾನೇಜ್‌ಮೆಂಟ್ ಪ್ಲಾನ್ ಅರ್ಥ ಆಯ್ತಾ?
ಬೆನ್ನ ಹಿಂದಕ್ಕೆ ಟಾಸ್ ಎಸೆದಿದ್ದ ಪಾಂಡ್ಯ
ಮುಂಬೈನಲ್ಲಿ ನಡೆದ ಈ ಸೀಸನ್ನ 25ನೇ ಪಂದ್ಯದಲ್ಲಿ RCB-ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಅನ್ನ ಮುಖದ ಮುಂದೆ ಬೀಳುವ ಬದಲು ಬೆನ್ನ ಹಿಂದೆ ಬೀಳುವಂತೆ ಎಸೆದರು. ಟಾಸ್ ಹಾರಿಸಿದ ಕಾಯಿನ್ನ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್, ಎತ್ತಿಕೊಳ್ಳುವಾಗ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರು. ಟಾಸ್ ವೇಳೆಯ ವಿಡಿಯೋ ನೋಡಿದ್ರೆ ಮೇಲ್ನೋಟಕ್ಕೆ ಇದು ಸತ್ಯ ಅನಿಸದೆ ಇರದು ಕೂಡ.
ಎಚ್ಚರಿಕೆಯಿಂದ ಟಾಸ್ ನೋಡಿದ ಋತುರಾಜ್
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದಂತೆ ಇತರೆ ತಂಡಗಳು ಎಚ್ಚೆತ್ತುಕೊಂಡ್ವು. ಮುಂಬೈ ವಿರುದ್ಧ ಮುಂಬೈನಲ್ಲಿ ಪಂದ್ಯವಾಡಿದ ಸಿಎಸ್ಕೆ, ಟಾಸ್ ಹಾಕಿದ ಸಮಯದಲ್ಲಿ ಮುಂಜ್ರಾಗತೆ ವಹಿಸ್ತು. ಸಿಎಸ್ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್, ಟಾಸ್ ಟೈಮ್ನಲ್ಲಿ ಟಾಸ್ ಮೇಲೆಯೇ ಹೆಚ್ಚು ಗಮನ ಹರಿಸಿದ್ದರು.
ಪ್ಯಾಟ್ ಕಮಿನ್ಸ್ ಬಳಿ ಡು ಪ್ಲೆಸಿಸ್ ಹೇಳಿದ್ದೇನು..?
ಮೊನ್ನೆ ಬೆಂಗಳೂರಿನಲ್ಲಿ ಆರ್ಸಿಬಿ-ಸನ್‌ರೈಸರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್‌ಗೆ ಬಂದ ರೈಸರ್ಸ್ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್‌ಗೆ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್, ಮುಂಬೈ ಪಂದ್ಯದ ಟಾಸ್ ಟ್ಯಾಂಪರಿಂಗ್ ಬಗ್ಗೆ ವಿವರಿಸಿದ್ದಾರೆ. ಈಗ ಈ ವಿಡಿಯೋನೇ ವೈರಲ್ ಆಗಿದ್ದು, ಮುಂಬೈ ಟಾಸ್ನಲ್ಲಿ ಮೋಸ ಮಾಡಿದೆ ಅನ್ನೋದು ಜಗಜ್ಜಾಹೀರವಾಗಿದೆ. ಮುಂಬೈ ಟಾಸ್ ವೇಳೆ ಏನಾಯಿತು ಎಂಬುದನ್ನು ಫಾಫ್ ವಿವರಿಸಿದ್ದಾರೆ. ಇದನ್ನು ಕೇಳಿ ಕಮಿನ್ಸ್ ಶಾಕ್ ಆಗಿದ್ದಾರೆ. ಡು ಪ್ಲೆಸಿಸ್ ಆಕ್ಷನ್ ನೋಡುತ್ತಿದ್ದರೆ, ಅವರು ಆರ್ಸಿಬಿ-ಮುಂಬೈ ಪಂದ್ಯದ ಟಾಸ್ ವಿಷಯವನ್ನೇ ಕಮ್ಮಿನ್ಸ್ಗೆ ಹೇಳಿದ್ದಾರೆ ಅನ್ನೋದು ಎಲ್ಲರಿಗೂ ಅರ್ಥವಾಗಿ ಬಿಡುತ್ತೆ. ನೀವು ಒಮ್ಮೆ ಆ ವಿಡಿಯೋ ನೋಡಿ.
Decode what Faf is trying to explain ? pic.twitter.com/RLDIKHYepk
— Out Of Context Cricket (@GemsOfCricket)Faf About Toss. pic.twitter.com/vQWG5s7j9f
— A. (@kin_g28)ಮುಂಬೈನಲ್ಲಿ ಟಾಸ್ ಗೆದ್ದವನೇ ಬಾಸ್. ಇಲ್ಲಿ ಟಾಸ್ ಗೆದ್ರೆ ಅರ್ಧ ಪಂದ್ಯ ಗೆದ್ದಂತೆ. ಹಾಗಾಗಿ ಟಾಸ್ ಮಹತ್ವದ ಪಾತ್ರ ವಹಿಸುತ್ತೆ. ಮುಂಬೈ ಇಂಡಿಯನ್ಸ್ ಟಾಸ್ ಗೆಲುವಿಗಾಗಿ ಮ್ಯಾಚ್ ರೆಫ್ರಿ ಶ್ರೀನಾಥ್ ಮೋಸದಾಟ ಆಡಿದ್ರಾ ಅನ್ನೋ ಅನುಮಾನ ಬಂದಿದೆ. ಒಟ್ನಲ್ಲಿ ಡು ಪ್ಲೆಸಿಸ್-ಕಮಿನ್ಸ್ ಮಾತುಕತೆಯ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್