
ನಾಟಿಂಗ್‌ಹ್ಯಾಮ್(ಆ.04): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಆರಂಭವೇ ರೋಚಕವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿದೆ. ಜಸ್ಪ್ರೀತ್ ಬುಮ್ರಾ ದಾಳಿಗೆ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿದೆ.
INDvsENG ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಟೀಂ ಇಂಡಿಯಾದಲ್ಲಿ ನಾಲ್ವರು ವೇಗಿಗಳಿಗೆ ಸ್ಥಾನ!
ಇಂಗ್ಲೆಂಡ್ ಆರಂಭಿಕ ರೋರಿ ಬರ್ನ್ಸ್ ಖಾತೆ ತೆರೆಯುವ ಮೊದಲೇ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಮೊದಲ ಓವರ್‌ನ 5ನೇ ಎಸೆತದಲ್ಲಿ ರೋರಿ ವಿಕೆಟ್ ಕೈಚೆಲ್ಲಿದರು. ಎಲ್‌ಬಿ ಬಲೆಗೆ ಬಿದ್ದ ಬರ್ನ್ಸ್ ಪೆವಿಲಿಯನ್ ಸೇರಿಕೊಂಡಿದ್ದಾರೆ. ರನ್ ಖಾತೆ ತೆರೆಯುವ ಮೊದಲೇ ಇಂಗ್ಲೆಂಡ್ ಆರಂಭಿಕನ ಕಳೆದುಕೊಂಡು ಆಘಾತ ಅನುಭವಿಸಿದೆ.
ಇಂಗ್ಲೆಂಡ್ ತಂಂಡಕ್ಕೆ ಇದೀಗ ಜ್ಯಾಕ್ ಕ್ರಾವ್ಲೆ ಹಾಗೂ ಡೋಮಿನಿಕ್ ಸಿಬ್ಲಿ ಆಸರೆಯಾಗಿದ್ದಾರೆ. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾಗಿರುವ ಈ ಜೋಡಿಗೆ ಟೀಂ ಇಂಡಿಯಾ ಮತ್ತಷ್ಟು ಒತ್ತಡ ಹೇರುತ್ತಿದೆ.
ಇಂಗ್ಲೆಂಡ್ ತಂಡದಲ್ಲಿ ಅನುಭವಿ ಮಧ್ಯಮ ಕ್ರಮಾಂಕವಿದೆ. ನಾಯಕ ಜೋ ರೂಟ್, ಜಾನಿ ಬೈರ್‌ಸ್ಟೋ ಹಾಗೂ ಡೇನಿಯಲ್ ಲಾರೆನ್ಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನು ಜೋಸ್ ಬಟ್ಲರ್, ಸ್ಯಾಮ್ ಕುರನ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಬಲ್ಲರು. ಸದ್ಯ ಟೀಂ ಇಂಡಿಯಾ ಮಾರಕ ದಾಳಿಗೆ ಇಂಗ್ಲೆಂಡ್ ವಿಕೆಟ್ ಉಳಿಸುಕೊಳ್ಳುವತ್ತ ಹೆಚ್ಚು ಗಮನಹರಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.