ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ ವಯಸ್ಸು 15 ಅನ್ನೋ ಡೌಟ್ ಇದೆಯಾ? ಈ ವಿಡಿಯೋ ನೋಡಿ

Published : Apr 12, 2026, 12:25 PM IST
Vaibhav Sooryavanshi

ಸಾರಾಂಶ

ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ ವಯಸ್ಸು 15 ಅನ್ನೋ ಡೌಟ್ ಇದೆಯಾ? ಈ ವಿಡಿಯೋ ನೋಡಿ, ಜಸ್‌‌ಪ್ರೀತ್ ಬುಮ್ರಾ ಸೇರಿದಂತೆ ವಿಶ್ವದರ್ಜೆ ಬೌಲರ್‌ಗೆ ಸಿಕ್ಸರ್ ಸಿಡಿಸುವ ಸೂರ್ಯವಂಶಿ ವಯಸ್ಸಿನ ಕುರಿತ ಗೊಂದಲಕ್ಕೆ ಇಲ್ಲಿದೆ ಉತ್ತರ. 

ಹೈದರಾಬಾದ್ (ಏ.12) ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಪ್ಲೇಯರ್ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ರಂಜಿಸುತ್ತಿದ್ದಾರೆ. ಆರ್‌ಸಿಬಿ ವಿರುದ್ದ ಕೇವಲ 26 ಎಸೆತದಲ್ಲಿ 78 ರನ್ ಸಿಡಿಸಿ ಮಿಂಚಿದ್ದು ಮಾತ್ರವಲ್ಲ, ಆರ್‌ಸಿಬಿಗೆ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಸೋಲಿನ ಶಾಕ್ ನೀಡಿದ್ದರು. ಕಿರಿಯರ ಟಿ20 ವಿಶ್ವಕಪ್ ಟೂರ್ನಿ ಸೇರಿದಂತೆ ಸಿಕ್ಕ ಅವಕಾಶದಲ್ಲಿ ದಿಗ್ಗರನ್ನು ಮೀರುವ ಬ್ಯಾಟಿಂಗ್ ಪ್ರದರ್ಶನ ನೀಡುವ ವೈಭವ್ ಸೂರ್ಯವಂಶಿ ಇತ್ತೀಚೆಗೆಷ್ಟೇ 15ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹಲವರು ವೈಭವ್ ಸೂರ್ಯವಂಶಿ ವಯಸ್ಸಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ದಾಖಲೆಗಳು ಉತ್ತರ ನೀಡಿದೆ. ಇದೀಗ ವೈಭವ್ ಸೂರ್ಯವಂಶಿ ವಿಡಿಯೋ ಒಂದು ಈತನ ವಯಸ್ಸು 15 ಅನ್ನೋದು ಖಚಿತಪಡಿಸಿದೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಬಸ್‌ನಲ್ಲಿ ಕುಳಿತ ವೈಭವ್ ಸೂರ್ಯವಂಶಿ ವಿಡಿಯೋದಲ್ಲಿ ಏನಿದೆ?

ವೈಭವ್ ಸೂರ್ಯವಂಶಿ ಗುವ್ಹಾಟಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯ ಮುಗಿಸಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯಕ್ಕೆ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಹೈದರಾಬಾದ್ ವಿರುದ್ದದ ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ಅಭ್ಯಾಸ ನಡೆಸುತ್ತಿದೆ. ಅಭ್ಯಾಸಕ್ಕಾಗಿ ಹೊಟೆಲ್‌ನಿಂದ ಕ್ರೀಡಾಂಗಣಕ್ಕೆ ತೆರಳಲು ಬಸ್ ಏರಿ ಕುಳಿತ ವೈಭವ್ ಸೂರ್ಯವಂಶಿ 15ರ ಬಾಲಕರು ಆಡುವಂತೆ ಆಡಿದ್ದಾರೆ.

ಬಸ್‌ ಸೀಟಿನ ಮೇಲಿರುವ ಲೈಟ್ ಸ್ವಿಚ್ ಆನ್ ಆಫ್ ಮಾಡುತ್ತಾ ಕುಳಿತಿದ್ದಾರೆ. ಇದರ ಜೊತೆಗೆ ಎಸಿ ಫ್ಯಾನ್, ಡೈರೆಕ್ಷನ್ ತಿರುಗಿಸುತ್ತಾ ಕಾಲ ಕಳೆದಿದ್ದಾರೆ. ಸಾಮಾನ್ಯವಾಗಿ ಮಕ್ಕಳು ಲೈಟ್ ಸ್ವಿಚ್ ಆನ್ ಆಫ್ ಮಾಡುತ್ತಾ ಆಟವಾಡುತ್ತಾರೆ. ಇದೀಗ ವೈಭವ್ ಸೂರ್ಯವಂಶಿ ಕೂಡ ಬಸ್‌ನ ಸೀಟಿನ ಮೇಲ್ಬಾಗದಲ್ಲಿರುವ ಲೈಟ್ ಆನ್ ಹಾಗೂ ಆಫ್ ಮಾಡುತ್ತಾ ತಮಗೆ ಅರಿವಿಲ್ಲದಂತೆ ಕೆಲ ಹೊತ್ತು ಕಳೆದಿದ್ದಾರೆ. ಈ ವಿಡಿಯೋ ಸೆರೆಯಾಗಿದೆ.

 

 

ಅಭಿಮಾನಿಗಳು ಹೇಳುವುದೇನು?

ವೈಭವ್ ಸೂರ್ಯವಂಶಿ ವಯಸ್ಸು ಹೈದಿನೈದಾ ಎಂದು ಕೇಳುವವರು ಈ ವಿಡಿಯೋ ನೋಡಿ ಎಂದಿದ್ದಾರೆ. ಸೂರ್ಯವಂಶಿಗೆ ವಯಸ್ಸು 15 ಮಾತ್ರ. ಆತ ಆಡುತ್ತಿರುವ ಸ್ವಿಚ್ ಆನ್ ಆಫ್ ಆಟ ನೋಡಿದರೆ ನಿಮಗೆ ಅರ್ಥವಾಗುತ್ತೆ ಎಂದಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಆರೇಂಜ್ ಕ್ಯಾಪ್ ಸಾಧನೆ

ಸದ್ಯ ಐಪಿಎಲ್ ಟೂರ್ನಿ 2026ರ ಆರೇಂಜ್ ಕ್ಯಾಪ್ ವೈಭವ್ ಸೂರ್ಯವಂಶಿಯಲ್ಲಿದೆ. ಕೇವಲ ನಾಲ್ಕು ಪಂದ್ಯಗಳಿಂದ ವೈಭವ್ ಸೂರ್ಯವಂಶಿ 200 ರನ್ ಸಿಡಿಸಿದ್ದಾರೆ. 18 ಬೌಂಡರಿ ಹಾಗೂ 18 ಸಿಕ್ಸರ್ ಸಿಡಿಸಿದ್ಾರೆ. ಬರೋಬ್ಬರಿ 266.67ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

15ರ ಹುಡುಗನಿಗೆ ಈ ರೇಂಜ್‌ಗೆ ಸಂಬಳಾನ? ವೈಭವ್ ಸೂರ್ಯವಂಶಿ ಕಳೆದ 4 ಮ್ಯಾಚ್‌ಗಳಿಂದ ಗಳಿಸಿದ ದುಡ್ಡು ಎಷ್ಟು?
ವೈಭವ್ ಸೂರ್ಯವಂಶಿ ಶಾಕಿಂದ ಹೊರಬರುವ ತವಕದಲ್ಲಿ ಆರ್‌ಸಿಬಿ, ಮುಂಬೈ! ವಾಂಖೆಡೆಯಲ್ಲಿಂದು ಹೈವೋಲ್ಟೇಜ್ ಮ್ಯಾಚ್