Legends League Cricket: ಕ್ರಿಕೆಟ್ ಯಾರ ಆಸ್ತಿಯೂ ಅಲ್ಲವೆಂದ ಡೆಲ್ಲಿ ಹೈಕೋರ್ಟ್..!

Suvarna News   | Asianet News
Published : Jan 20, 2022, 05:34 PM IST
Legends League Cricket: ಕ್ರಿಕೆಟ್ ಯಾರ ಆಸ್ತಿಯೂ ಅಲ್ಲವೆಂದ ಡೆಲ್ಲಿ ಹೈಕೋರ್ಟ್..!

ಸಾರಾಂಶ

* ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಗೆ ಎದುರಾಗಿದ್ದ ಆತಂಕ ನಿವಾರಿಸಿದ ಡೆಲ್ಲಿ ಹೈಕೋರ್ಟ್ * ಕ್ರಿಕೆಟ್‌ ಐಡಿಯಾದ ಮೇಲೆ ಯಾರೊಬ್ಬರು ಕಾಫಿರೈಟ್ ಹಕ್ಕೊತ್ತಾಯ ಸಾಧಿಸುವಂತಿಲ್ಲ ಎಂದ ಕೋರ್ಟ್‌ * ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯು ಜನವರಿ 20ರಿಂದ ಆರಂಭ

ನವದೆಹಲಿ(ಜ.20): ಭಾರತದಲ್ಲಿ ಒಂದು ಧರ್ಮದಂತೆ ಆಚರಿಸಲ್ಪಡುವ ಕ್ರಿಕೆಟ್‌ ಕ್ರೀಡೆಯ ಕುರಿತಂತೆ ದೆಹಲಿ ಹೈಕೋರ್ಟ್‌ ಮಹತ್ತರವಾದ ತೀರ್ಪು ಪ್ರಕಟಿಸಿದ್ದು, ಯಾರೊಬ್ಬರು ಸಹ ಕ್ರಿಕೆಟ್ ಮೇಲೆ ಹಕ್ಕುಸ್ವಾಮ್ಯ ಸಾಧಿಸುವಂತಿಲ್ಲ, ಐದು ದಿನಗಳ ಟೆಸ್ಟ್ ಪಂದ್ಯದಿಂದ ಹಿಡಿದು ಇತ್ತೀಚೆಗೆ ಪ್ರಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್‌ (T20 Cricket) ಮೇಲೆ ಯಾರೊಬ್ಬರು ಕಾಫಿರೈಟ್‌(ಹಕ್ಕುಸ್ವಾಮ್ಯ) ಹೊಂದುವಂತಿಲ್ಲ ಎಂದು ತೀರ್ಪು ಪ್ರಕಟಿಸಿದೆ. ಇದೇ ವೇಳೆ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ () ಟೂರ್ನಮೆಂಟ್ ರದ್ದುಪಡಿಸಬೇಕೆನ್ನುವ ಮನವಿಯನ್ನು ದೆಹಲಿ ಹೈಕೋರ್ಟ್ (Delhi High Court) ಸಾರಸಗಟಾಗಿ ತಿರಸ್ಕರಿಸಿದೆ.

ಆದರೆ ಆಶಾ ಮೆನನ್ ನೇತೃತ್ವದ ಏಕಸದಸ್ಯ ಪೀಠವು, ಲೆಜೆಂಡ್ಸ್‌ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಮುಕ್ತಾಯವಾಗಿ ಒಂದು ತಿಂಗಳೊಳಗಾಗಿ ಟೂರ್ನಿಯ ಆಯೋಜಕರಿಗೆ ಖರ್ಚು-ವೆಚ್ಚ ಹಾಗೂ ಆದಾಯದ ಕುರಿತಂತೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಿದೆ. ಇದೇ ವೇಳೆ ಕೋರ್ಟ್ ಪ್ರತಿವಾದಿಗಳಿಗೆ ಸಮನ್ಸ್ ನೀಡಿದ್ದು, 30 ದಿನಗಳೊಳಗಾಗಿ ತಮ್ಮ ದೂರನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಿದೆ. ಇದಾದ ನಂತರ 30 ದಿನಗಳೊಳಗಾಗಿ ಸೂಕ್ತ ಪ್ರತಿಗಳನ್ನು ಕೋರ್ಟ್‌ಗೆ ಸಲ್ಲಿಸಲು ಫಿರ್ಯಾದಿಗೆ ತಿಳಿಸಲಾಗಿದೆ. ನಂತರ ಏಪ್ರಿಲ್ 26ರಂದು ಜಂಟಿ ರಿಜಿಸ್ಟ್ರಾರ್‌ ಮುಂದೆ ಈ ಪ್ರಕರಣದ ಹೆಚ್ಚಿನ ವಿಚಾರಣೆಗೆ ಕೈಗೆತ್ತಿಕೊಳ್ಳಲು ಕೋರ್ಟ್‌ ತಿಳಿಸಿದೆ.

ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯು ಗುರುವಾರ(ಜ.20)ದಿಂದ ಆರಂಭವಾಗಲಿದ್ದು, ಟೂರ್ನಿಯಲ್ಲಿ ಇಂಡಿಯನ್ ಮಹರಾಜಾಸ್, ಏಷ್ಯನ್ ಲಯನ್ಸ್‌ ಮತ್ತು ವರ್ಲ್ಡ್‌ ಜೈಂಟ್ಸ್‌ ಹೀಗೆ ಒಟ್ಟು ಮೂರು ತಂಡಗಳು ಪಾಲ್ಗೊಳ್ಳುತ್ತಿವೆ. ನಿವೃತ್ತ ಕ್ರಿಕೆಟಿಗರಾದ ಯುವರಾಜ್ ಸಿಂಗ್(Yuvraj Singh), ವಿರೇಂದ್ರ ಸೆಹ್ವಾಗ್(Virender Sehwag), ಶಾಹಿದ್ ಅಫ್ರಿದಿ, ಶೋಯೆಬ್ ಅಖ್ತರ್, ಕೆವಿನ್ ಪೀಟರ್‌ಸನ್, ಜಾಕ್ ಕಾಲೀಸ್, ಸೇರಿದಂತೆ ಹಲವು ಕ್ರಿಕೆಟಿಗರು ಲೆಜೆಂಡ್ಸ್‌ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಟೂರ್ನಿಯು ಒಮಾನ್‌ನ ಅಲ್ ಎಮಿರಾಯ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಈ ಟೂರ್ನಿಯ ಕುರಿತಂತೆ ಸಮೀರ್ ಕಾಶಲ್ ಎನ್ನುವವರು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಈ ರೀತಿಯ ಟೂರ್ನಿ ಆಯೋಜನೆಯ ಕಲ್ಪನೆಯನ್ನು ತಾವು ಮಾಡಿದ್ದು, ಇದನ್ನು ಪ್ರಶಾಂತ್ ಮೆಹ್ತಾ ಅವರ ಜತೆ ಚರ್ಚೆ ನಡೆಸಿದ್ದೆ. ಆದರೆ ಪ್ರಶಾಂತ್ ಮೆಹ್ತಾ ಇತರರ ಜತೆಗೂಡಿ ಟೂರ್ನಿಯನ್ನು ಆಯೋಜಿಸಿದ್ದಾರೆ ಎಂದು ದೂರಿದ್ದಾರೆ.

ನಿವೃತ್ತ ಆಟಗಾರರನ್ನೊಳಗೊಂಡ ಟೂರ್ನಿಯನ್ನು ಆಯೋಜಿಸುವುದು. 10 ಓವರ್‌ಗಳ ಎರಡು ಇನಿಂಗ್ಸ್ ಆಡಿಸುವ ಯೋಚನೆ ನನ್ನದು. ವಿದೇಶದಲ್ಲಿ ಹೆಚ್ಚು ಭಾರತೀಯರು ಇರುವ ಕಡೆ ಟೂರ್ನಿಯನ್ನು ಆಯೋಜಿಸಬೇಕು ಎನ್ನುವ ಐಡಿಯಾ ಕೂಡಾ ನನ್ನದೇ ಎಂದು ಕೋರ್ಟ್‌ನಲ್ಲಿ ಸಮೀರ್ ಕಾಶಲ್ ವಾದಿಸಿದ್ದರು. ಈ ಕಾರಣಕ್ಕಾಗಿಯೇ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯನ್ನು ಆಯೋಜಕರು ಒಮಾನ್‌ನಲ್ಲಿ ಆಯೋಜಿಸಿದ್ದಾರೆ. ನನ್ನ ಐಡಿಯಾವನ್ನು ಆಯೋಜಕರು ಕದ್ದಿದ್ದಾರೆ ಎಂದು ಕೋರ್ಟ್‌ನಲ್ಲಿ ದೂರಿದ್ದರು.

Legends League Cricket ಬಿಗ್ ಬಿ ಅಮಿತಾಭ್ ಬಚ್ಚನ್ ರಾಯಭಾರಿ!

ಈ ಕುರಿತಂತೆ ಅಭಿಪ್ರಾಯ ಪ್ರಕಟಿಸಿದ ಮೆನನ್‌, ಟೂರ್ನಿಯ ಆಯೋಜನೆಗೊಂಡ ರೀತಿಗೂ ಹಾಗೂ ದೂರುದಾರರ ಯೋಚನೆ ಒಂದೇ ರೀತಿಯಿದೆ. ಆದರೆ ಇವೆರಡು ಕ್ರಿಕೆಟ್‌ನ ಭಾಗವೇ ಆಗಿದ್ದು, ಯಾರೊಬ್ಬರು ಕ್ರಿಕೆಟ್‌ ಮೇಲೆ ಹಕ್ಕುಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ನೂರಾರು ವರ್ಷಗಳಿಂದ ಕ್ರಿಕೆಟ್‌ ಬೆಳವಣಿಗೆಯಾಗುತ್ತಾ ಬಂದಿದೆ. 10 ಓವರ್‌ಗಳ ಪಂದ್ಯ ಹೊಸತೇನಲ್ಲ. 1997ರಲ್ಲಿಯೇ 10 ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯನ್ನು ಪರಿಚಯಿಸಲಾಗಿದೆ. 1997ರಲ್ಲಿ ನ್ಯೂಜಿಲೆಂಡ್‌ನ ನಿವೃತ್ತ ಕ್ರಿಕೆಟಿಗರು ಮೊದಲ ಬಾರಿಗೆ 10 ಓವರ್‌ಗಳ ಪಂದ್ಯವನ್ನಾಡಿದರು. ಇದಾದ ಬಳಿಕ ಜಗತ್ತಿನಾದ್ಯಂತ 10 ಓವರ್‌ಗಳ ಕ್ರಿಕೆಟ್ ಆಡಲಾಗುತ್ತಿದೆ ಎಂದು ಏಕಪೀಠ ನ್ಯಾಯಾಧೀಶರು ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!