ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ

Published : Mar 03, 2026, 06:50 PM IST
Virat Kohi in London

ಸಾರಾಂಶ

ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ, ಕೊಹ್ಲಿ ಆಕಾಯ್‌ನನ್ನ ಶಾಲೆಗೆ ಕರೆದುಕೊಂಡು ಬರುತ್ತಿರುವ ದೃಶ್ಯವೊಂದು ಸದ್ದು ಮಾಡುತ್ತಿದೆ. ಫ್ಯಾಮಿಲಿಗೆ ಸಂಪೂರ್ಣ ಸಮಯ ನೀಡಿದ್ದಾರೆ. 

ಲಂಡನ್ (ಫೆ.03) ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ನೆಲೆಸಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಹಾಗೂ ಇಬ್ಬರು ಮಕ್ಕಳೊಂದಿಗೆ ಲಂಡನ್‌ನಲ್ಲಿ ಖಾಯಂ ಆಗಿರುವ ವಿರಾಟ್ ಕೊಹ್ಲಿ ಕ್ರಿಕೆಟ್ ವೇಳೆ ಭಾರತಕ್ಕೆ ಮರಳುತ್ತಾರೆ. ಸದ್ಯ ಲಂಡನ್‌ನಲ್ಲಿ ವಿರಾಟ್ ಕೊಹ್ಲಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಪ್ರತಿ ದಿನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಳಿಕ ಮರಳಿ ಕರೆತರುತ್ತಾರೆ. ಇಬ್ಬರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ಹೊತ್ತಿದ್ದಾರೆ. ಲಂಡನ್‌ನಲ್ಲಿನ ಶಾಲಾ ಮುಂದೆ ತಂದೆ ಮಗನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಅಕಾಯ್ ಕೈಹಿಡಿದು ಬಂದ ಕೊಹ್ಲಿ

ಅಕಾಯ್ ಕೈಹಿಡಿದು ವಿರಾಟ್ ಕೊಹ್ಲಿ ಮಗನನ್ನು ಶಾಲೆ ಬಳಿ ಕರೆತಂದಿದ್ದಾರೆ. ಕೊಹ್ಲಿ ಕಾಶ್ಯುಯೆಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಗನ ಜೊತೆ ಮಾತನಾಡುತ್ತಾ ಕೊಹ್ಲಿ ಆಗಮಿಸುತ್ತಿರುವ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭರ್ಜರಿ ಕಮೆಂಟ್ಸ್ ವ್ಯಕ್ತವಾಗಿದೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರು ಸೆಲೆಬ್ರೆಟಿಗಳು. ತಮ್ಮ ಮಕ್ಕಳಿಗೆ ಸಮಸ್ಯೆಯಾಗಬಾರದು, ಅವರ ಖಾಸಗೀತನಕ್ಕೆ ಧಕ್ಕೆಯಾಗಬಾರದು ಎಂದು ಈ ಜೋಡಿ ಭಾರಿ ಮುತುವರ್ಜಿ ವಹಿಸಿದ್ದಾರೆ. ಇಬ್ಬರು ಮಕ್ಕಳ ಮುಖಗಳನ್ನು ಸೋಶಿಯಲ್ ಮೀಡಿಯಾದಿಂದ, ಮಾಧ್ಯಮಗಳ ಮುಂದೆ ಕಾಣಿಸದಂತೆ ನೋಡಿಕೊಂಡಿದ್ದಾರೆ. ದೆಹಲಿ ಮೂಲದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮದುವೆಯಾದ ಬಳಿಕ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ್ದರು.

ಆದರೆ ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ಲಂಡನ್‌ಗೆ ಸ್ಥಳಾಂತರಗೊಂಡಿದ್ದಾರೆ. ಕೊಹ್ಲಿ ಲಂಡನ್‌ನಲ್ಲಿ ನೆಲೆಸುತ್ತಿದ್ದಾರೆ, ಭಾರತ ತೊರೆಯಲಿದ್ದಾರೆ ಅನ್ನೋ ಮಾತುಗಳು ಭಾರಿ ಚರ್ಚೆಯಾಗಿತ್ತು. ಸದ್ಯ ಕೊಹ್ಲಿ ಹಾಗೂ ಕುಟುಂಬ ಲಂಡನ್‌ನಲ್ಲಿ ನೆಲೆಸಿದೆ. 2017ರಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಮದುವೆ ನಡೆದಿತ್ತು. ಅದ್ಧೂರಿಯಾಗಿ ಇಟಲಿಯಲ್ಲಿ ಈ ಮದುವೆ ಸಮಾರಂಭ ನಡೆದಿತ್ತು. 2021ರಲ್ಲಿ ಮಗಳು ವಮಿಕಾ ಹಾಗೂ 2024ರಲ್ಲಿ ಮಗ್ ಅಕಾಯ್ ಜನಿಸಿದ್ದಾರೆ. ಲಂಡನ್‌ನ ನಾಟಿಂಗ್ ಹಿಲ್ ನೈಬರ್‌ಹುಡ್‌ನಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಮನೆ ಖರೀದಿಸಿದ್ದಾರೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೋಲ್ಡನ್‌ ಡಕ್‌ಗೆ ಔಟಾದ ವೈಭವ್‌ ಸೂರ್ಯವಂಶಿ: 'Oh f**k' ಎಂದು ಸಂಭ್ರಮಿಸಿದ ಕಾವ್ಯಾ ಮಾರನ್‌, ವಿಡಿಯೋ ವೈರಲ್‌!
ರಾಜಸ್ಥಾನ ರಾಯಲ್ಸ್‌ ಟೀಮ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ವೈಭವ್‌ ಸೂರ್ಯವಂಶಿ ಬೇಸರ