ಭಾರತೀಯನಾಗಿ ಹಿಂದೆಂದೂ ಇಷ್ಟು ಹೆಮ್ಮೆ ಅನಿಸಿರಲಿಲ್ಲ, ಪ್ರಧಾನಿ ಮೋದಿ ಬಗ್ಗೆ ರವಿ ಶಾಸ್ತ್ರಿ ಭಾವನಾತ್ಮಕ ಪೋಸ್ಟ್

Published : Sep 13, 2026, 03:01 PM IST
ravi shastri on narendra modi

ಸಾರಾಂಶ

ಬ್ರಿಕ್ಸ್ ಶೃಂಗಸಭೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಮುಕ್ತಕಂಠದಿಂದ ಹೊಗಳಿದ್ದಾರೆ. ಜೊತೆಗೆ ವಿಶೇಷ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಶಾಸ್ತ್ರಿ ಏನು ಹೇಳಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ. ಬ್ರಿಕ್ಸ್‌ ಶೃಂಗಸಭೆ ವಿಚಾರದಲ್ಲಿ ಭಾರತದ ರಾಜತಾಂತ್ರಿಕತೆಯನ್ನು ಕೊಂಡಾಡಿರುವ ಶಾಸ್ತ್ರಿ, ಮೋದಿ, ಚೀನಾ ಅಧ್ಯಕ್ಷ ಜಿನ್‌ ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಟ್ಟಿಗೆ ಇರುವ ಫೋಟೋಗಳನ್ನ ಹಂಚಿಕೊಂಡು ಮೋದಿಯನ್ನ ಕೊಂಡಾಡಿದ್ದಾರೆ.

ಶಾಸ್ತ್ರಿ ಏನು ಹೇಳಿದರು?

ಒಬ್ಬ ಭಾರತೀಯನಾಗಿ ನನಗೆ ಹಿಂದೆಂದೂ ಇಷ್ಟು ಹೆಮ್ಮೆ ಎನಿಸಿರಲಿಲ್ಲ. ಭಾರತ ಮಾತೆಯ ಮಡಿಲಲ್ಲಿ ಅಧ್ಯಕ್ಷ ಪುಟಿನ್, ಅಧ್ಯಕ್ಷ ಕ್ಸಿ ಮತ್ತು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಒಟ್ಟಿಗೆ ಇದ್ದಾರೆ. ನಾನು ಹಿಂದೆಂದೂ ಕಾಣದಂಥ ರಾಜತಾಂತ್ರಿಕತೆ ಇದು. ನಿಮಗೆ ತಲೆಬಾಗಿ ನಮಸ್ಕರಿಸುವೆ ಮೋದಿ ಜೀ ಎಂದು ಟ್ವಿಟರ್‍‌ನಲ್ಲಿ ಬರೆದುಕೊಂಡಿದ್ದಾರೆ.

ಅಂದ್ಹಾಗೆ 18ಬೇ ಬ್ರಿಕ್ಸ್ ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯನ್ನ ವಹಿಸಿದ್ದಾರೆ. ಸೆಪ್ಟೆಂಬರ್ 12 ರಿಂದ ಆರಂಭವಾಗಿರುವ ಶೃಂಗಸಭೆಗೆ ಇಂದು ಕೊನೆಯ ದಿ. ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ನಿರ್ಮಾಣ ಎಂಬ ಆಶಯದೊಂದಿಗೆ ದೆಹಲಿಯ ಭಾರತ್ ಮಂಟಪದಲ್ಲಿ ಶೃಂಗಸಭೆ ನಡೆಯುತ್ತಿದೆ.

ಇನ್ನು ಅಂತಿಮ ದಿನವಾದ ಇಂದು ಬ್ರಿಕ್ಸ್ ಸದಸ್ಯರು ಮತ್ತು ಪಾಲುದಾರರು ಇವತ್ತಿನ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ಮೋದಿ ಅವರು ಏಳು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಪ್ರಮುಖವಾಗಿ ದಕ್ಷಿಣ ಆಫ್ರಿಕಾ, ಫಿಲಿಪೈನ್ಸ್‌, ಬುರುಂಡಿ, ಕಜಕಿಸ್ತಾನ್, ಉಗಾಂಡಾ ಮತ್ತು ನೈಜೀರಿಯಾ ನಾಯಕರನ್ನು ಮೋದಿ ಭೇಟಿ ಆಗಲಿದ್ದಾರೆ.

ಅಲ್ಲದೇ ಶೃಂಗಸಭೆಯನ್ನು ಹೊರತಪಡಿಸಿಯೂ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾರ ಜೊತೆ ಮೋದಿ ವಿಶೇಷ ಮಾತುಕತೆ ನಡೆಸಿದ್ದಾರೆ. ರಾಮಫೋಸಾ ಅವರು ನಿನ್ನೆ ನಡೆದ ವಿಶೇಷ ಅಧಿವೇಶನಗಳಲ್ಲಿ ಭಾಗಿಯಾಗಿದ್ದರು. ಜೊತೆಗೆ ಭಾರತ್ ಇನ್ನೋವೇಟ್ಸ್ ಪ್ರದರ್ಶನಕ್ಕೂ ಭೇಟಿ ನೀಡಿದ್ದರು.

ಇನ್ನು, ಬ್ರಿಕ್ಸ್ ನಾಯಕರು ನವದೆಹಲಿ ಘೋಷಣೆ 2026ಯನ್ನ ಸರ್ವಾನುಮತದಿಂದ ಅಂಗೀಕರಿಸಿದರು. ಈ ಗುಂಪಿನಲ್ಲಿ ಪ್ರಸ್ತುತ 11 ಸದಸ್ಯರು ಬ್ರೆಜಿಲ್, ಚೀನಾ, ಭಾರತ, ಇಂಡೋನೇಷ್ಯಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ - ಮತ್ತು 10 ಪಾಲುದಾರ ರಾಷ್ಟ್ರಗಳೂ ಸೇರಿವೆ. ನೈಜೀರಿಯಾ, ಬೆಲಾರಸ್, ಕಝಾಕಿಸ್ತಾನ್, ಮಲೇಷ್ಯಾ, ಥೈಲ್ಯಾಂಡ್, ಉಗಾಂಡಾ, ಬೊಲಿವಿಯಾ, ಕ್ಯೂಬಾ ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

“ಅದು ನನ್ನ ಜೀವನದ ಅತ್ಯಂತ ಕಠಿಣ ರಾತ್ರಿ...!” ಮಾತನಾಡುವಾಗಲೇ ಕಣ್ಣೀರಾದ ಸ್ಮೃತಿ ಮಂದಾನ!
ಇಂದಿನಿಂದ ಭಾರತ-ಆಫ್ಘಾನಿಸ್ತಾನ ಟಿ20 ಕದನ; ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ?