IPL Auction 2022 : 15 ವರ್ಷದ ಬಳಿಕವೂ ಐಪಿಎಲ್ ಹರಾಜಿನಲ್ಲಿದ್ದಾರೆ ಈ ಪ್ಲೇಯರ್ಸ್!

By Suvarna NewsFirst Published Dec 12, 2021, 6:21 PM IST
Highlights

2008ರಲ್ಲಿ ಐಪಿಎಲ್ ಹರಾಜಿನ ಪ್ರಮುಖ ಪ್ಲೇಯರ್ ಗಳು
2022ರ ಐಪಿಎಲ್ ಹರಾಜಿನಲ್ಲೂ ಇವರೇ ಹೈಲೈಟ್
ರೈನಾ, ಗೇಲ್ ಅವರ ಅನುಭವಕ್ಕೆ ಮಣೆ ಹಾಕ್ತಾರಾ ಫ್ರಾಂಚೈಸಿಗಳು

ಬೆಂಗಳೂರು (ಡಿ. 12): ಐಪಿಎಲ್ ಗೆ ಹೊಸ ಎರಡು ತಂಡಗಳ ಸೇರ್ಪಡೆಯಿಂದಾಗಿ ಮುಂದಿನ ವರ್ಷದ ಐಪಿಎಲ್ ಈಗಾಗಲೇ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಬಿಸಿಸಿಐ ಬೊಕ್ಕಸಕ್ಕೆ ಹಣ ತಂದು ಸುರಿಯುವುದು ಮಾತ್ರವಲ್ಲದೆ, ಯುವ ಹಾಗೂ ಪ್ರತಿಭಾವಂತ ಪ್ಲೇಯರ್ ಗಳಿಗೆ ಚಿಮ್ಮುಹಲಗೆ ಎನಿಸಿಕೊಂಡಿದೆ. ಯುವ ಪ್ಲೇಯರ್ ಗಳು ಅಂತಾರಾಷ್ಟ್ರೀಯ ಅನುಭವಿ ಪ್ಲೇಯರ್ ಗಳಿಗೆ ಎದುರೇಟು ನೀಡಿದ ಸಾಕಷ್ಟು ಪ್ರಸಂಗಗಳು ಐಪಿಎಲ್ ನಲ್ಲಿದೆ. 2022ರ ಐಪಿಎಲ್ ಮೆಗಾ ಆಕ್ಷನ್ ದಿನಗಳು ಹತ್ತಿರುವಾಗುತ್ತಿವೆ. ಈಗಾಗಲೇ ಲೀಗ್ ನಲ್ಲಿದ್ದ ಎಂಟು ಫ್ರಾಂಚೈಸಿಗಳು ತಮ್ಮ ಪ್ರಮುಖ ಪ್ಲೇಯರ್ ಗಳನ್ನು ರಿಟೇನ್ ಮಾಡಿದ್ದು, ಉಳಿದವರನ್ನು ಹರಾಜಿಗೆ ಬಿಟ್ಟುಕೊಟ್ಟಿವೆ. 2008ರ ಐಪಿಎಲ್ ಹರಾಜಿನ ವೇಳೆಯಲ್ಲೂ ಲಿಸ್ಟ್ ನಲ್ಲಿದ್ದ ಕೆಲ ಆಟಗಾರರು 2022ರ ಐಪಿಎಲ್ ನ ಹರಾಜಿನ ಲಿಸ್ಟ್ ನಲ್ಲೂ ಇದ್ದಾರೆ. ಆ ಕೆಲವು ಪ್ಲೇಯರ್ ಗಳ ಲಿಸ್ಟ್ ಇಲ್ಲಿದೆ.

ಸುರೇಶ್ ರೈನಾ : ಮಿ.ಐಪಿಎಲ್ ಎನ್ನುವ ಹೆಸರಿನಿಂದ ಪ್ರಖ್ಯಾತಿಯಾಗಿರುವ ಸುರೇಶ್ ರೈನಾರನ್ನು (Suresh Raina) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಈ ಬಾರಿ ಹರಾಜಿಗೆ ಬಿಟ್ಟುಕೊಟ್ಟಿದೆ. 2008ರಿಂದಲೂ ಸಿಎಸ್ ಕೆ ಭಾಗವಾಗಿದ್ದ ಸುರೇಶ್ ರೈನಾ, 2021ರಲ್ಲಿ ನಿರಾಶಾದಾಯಕ ನಿರ್ವಹಣೆ ತೋರಿದ್ದರು. ಮೊದಲ ಹಾಫ್ ನಲ್ಲಿ ಕಳಪೆ ಆಟವಾಡಿದ್ದರೆ, ಸೆಕೆಂಡ್ ಹಾಫ್ ನಲ್ಲಿ ಗಾಯಗೊಂಡಿದ್ದರು. ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್ ಮನ್ ಅನ್ನು 2008ರ ಹರಾಜಿನಲ್ಲಿ ಚೆನ್ನೈ ಖರೀದಿ ಮಾಡಿತ್ತು. 2022ರ ಹರಾಜಿನಲ್ಲೂ ಚೆನ್ನೈ ತಂಡವೇ ಅವರ ಮೇಲೆ ಹೆಚ್ಚಿನ ಆಸಕ್ತಿ ತೋರುವ ಸಾಧ್ಯತೆ ಇದೆ.

ಕ್ರಿಸ್ ಗೇಲ್ : ಟಿ20 ಮಾದರಿಯ ದಿಗ್ಗಜ ತಾರೆ ಕ್ರಿಸ್ ಗೇಲ್ (Chris Gayle), 2008 ರಿಂದಲೂ ಐಪಿಎಲ್ ನ ಭಾಗವಾಗಿದ್ದವರು. 2008ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡಕ್ಕೆ ಸೇರಿದ್ದ ಗೇಲ್, ಆ ಬಳಿಕ ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪರವಾಗಿ ಆಡಿದ್ದರು. 2011ರಲ್ಲಿ ಆರ್ ಸಿಬಿ (RCB) ತಂಡಕ್‌ಕೆ ಬದಲಿ ಆಟಗಾರನಾಗಿ ಸೇರ್ಪಡೆಯಾದ ಬಳಿಕ ಗೇಲ್ ಅವರ ಟಿ20 ಕ್ರಿಕೆಟ್ ಜೀವನ ದೊಡ್ಡ ಮಟ್ಟದ ತಿರುವು ಪಡೆದುಕೊಂಡಿತು.

IPL Broadcasting Rights : ಕಂಪನಿಗಳು ಬಿಡ್ ಮಾಡೋಕೆ ರೆಡಿಯಾಗಿರೋ ಮೊತ್ತ ಎಷ್ಟು ಗೊತ್ತಾ?
2013ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಬಾರಿಸಿದ ಅಜೇಯ 175 ರನ್ ಗಳನ್ನು ಹೇಗೆ ತಾನೆ ಮರೆಯಲು ಸಾಧ್ಯ? 2021ರ ಐಪಿಎಲ್ ಬಳಿಕ ಪಂಜಾಬ್ ತಂಡ ಇವರನ್ನು ಹರಾಜಿಗೆ ಬಿಡುಗಡೆ ಮಾಡಿದ್ದು, 15 ವರ್ಷದ ಬಳಿಕವೂ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಬಿನ್ ಉತ್ತಪ್ಪ: 2008ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಂಡಿದ್ದ ರಾಬಿನ್ ಉತ್ತಪ್ಪ (Robin Uthappa), ತಮ್ಮ ಇಷ್ಟು ವರ್ಷಗಳ ಕ್ರಿಕೆಟ್ ಜೀವನದಲ್ಲಿ ಆರ್ ಸಿಬಿ, ಪುಣರ ವಾರಿಯರ್ಸ್, ಕೆಕೆಆರ್, ಆರ್ ಆರ್ ಹಾಗೂ ಸಿಎಸ್ ಕೆ ತಂಡದ ಪರವಾಗಿ ಆಟವಾಡಿದ್ದಾರೆ. 2014ರ ಐಪಿಎಲ್ ರಾಬಿನ್ ಉತ್ತಪ್ಪ ಪಾಲಿಗೆ ಯಶಸ್ವಿ ವರ್ಷವಾಗಿತ್ತು. ಅಂದು ಕೆಕೆಆರ್ ತಂಡದ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಬಿನ್ ಉತ್ತಪ್ಪ ಆರೆಂಜ್ ಕ್ಯಾಪ್ ಅನ್ನೂ ಜಯಿಸಿದ್ದರು.

ದಿನೇಶ್ ಕಾರ್ತಿಕ್: 2018ರಲ್ಲಿ ಬಾಂಗ್ಲಾದೇಶ ವಿರುದ್ಧ ನಿಧಹಾಸ್ ಟ್ರೋಫಿ(Nidahas Trophy)ಫೈನಲ್ ನಲ್ಲಿ ತಮ್ಮ ಸೂಪರ್ ಸ್ಟಾರ್ ನಿರ್ವಹಣೆಯ ಮೂಲಕ ವಿಶ್ವದ ಗಮನಸೆಳೆದಿದ್ದ ದಿನೇಶ್ ಕಾರ್ತಿಕ್ (Dinesh Karthik), 2008ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಸೇರಿಕೊಂಡಿದ್ದರು. ಆ ಬಳಿಕ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಆರ್ ಸಿಬಿ, ಗುಜರಾತ್ ಲಯನ್ಸ್ ಹಾಗೂ ಕೆಕೆಆರ್ ಪರ ಆಡಿದ್ದರು.

IPL Auction 2022: ಈ ಐವರು ವಿದೇಶಿ ಆಲ್ರೌಂಡರ್‌ ಮೇಲೆ ಹದ್ದಿನ ಕಣ್ಣಿಟ್ಟಿವೆ ಫ್ರಾಂಚೈಸಿಗಳು..!
2022ರ ಐಪಿಎಲ್ ಹರಾಜಿನಲ್ಲಿ ಯಾವ ತಂಡ ಇವರನ್ನು ಖರೀದಿಸಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲಿದೆ. 36 ವರ್ಷದ ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್ ನಲ್ಲಿದ್ದರೂ, ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇಶಾಂತ್ ಶರ್ಮ: ಭಾರತ ಟೆಸ್ಟ್ ತಂಡದ ಪ್ರಮುಖ ಕೊಂಡಿಯಾಗಿರುವ ಇಶಾಂತ್ ಶರ್ಮ (Ishant Sharma), 2008ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡ ಕೂಡಿಕೊಂಡಿದ್ದರು. ಕೆಟ್ಟ ಫಾರ್ಮ್ ನಲ್ಲಿರುವ ಇಶಾಂತ್, 2022ರ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿ ಕಂಡುಕೊಳ್ಳುವುದು ಅನುಮಾನ ಎನ್ನಲಾಗಿದೆ. ಕೆಕೆಆರ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರವಾಗಿ ಆಡಿದ್ದಾರೆ.

click me!