
ನವದೆಹಲಿ(ಏ.19): ಕೊರೋನಾ ಸೋಂಕನ್ನು ತಡೆಗಟ್ಟಲು ಮಾಸ್ಕ್ ಧರಿಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ‘ಟೀಂ ಮಾಸ್ಕ್ ಫೋರ್ಸ್’ ಎಂಬ ತಂಡವನ್ನು ಸಿದ್ಧಪಡಿಸಿದೆ.
ಕ್ರಿಕೆಟಿಗರು ವಿಡಿಯೋ ಮೂಲಕ ಜನರಲ್ಲಿ ಮಾಸ್ಕ್ ಧರಿಸುವುದು ಏಕೆ ಮುಖ್ಯ ಎನ್ನುವುದನ್ನು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಸೇರಿದಂತೆ ಇನ್ನೂ ಅನೇಕರು ಸಂದೇಶಗಳನ್ನು ನೀಡಿದ್ದಾರೆ. ‘ಭಾರತ ತಂಡದ ಭಾಗವಾಗಿರುವುದು ಬಹಳ ದೊಡ್ಡ ಹೆಮ್ಮೆಯ ವಿಚಾರ. ಇಂದು ನಾವು ಅದಕ್ಕಿಂತ ದೊಡ್ಡ ತಂಡವನ್ನು ಕಟ್ಟುತ್ತಿದ್ದೇವೆ. ಅದುವೇ ಟೀಂ ಮಾಸ್ಕ್ ಫೋರ್ಸ್’ ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ ಬೌಂಡರಿ ಬಾರಿಸು ಎಂದ ಪತ್ನಿ ಅನುಷ್ಕಾ!
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸ್ಮೃತಿ ಮಂಧನಾ, ರೋಹಿತ್ ಶರ್ಮಾ, ಹರ್ಭಜನ್ ಸಿಂಗ್, ಹರ್ಮನ್‌ಪ್ರೀತ್ ಕೌರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಹಾಗೂ ಮಿಥಾಲಿ ರಾಜ್, ಮಾಸ್ಕ್ ಮಹತ್ವದ ಬಗ್ಗೆ ತಿಳಿಸಿದ್ದಾರೆ.
ಈಗಾಗಲೇ ಹಲವು ಕ್ರಿಕೆಟಿಗರು ಕೊರೋನಾ ಸಂಕಷ್ಟಕ್ಕೆ ದೇಶದ ನೆರವಿಗೆ ಧಾವಿಸಿದ್ದಾರೆ. ಹಲವು ಕ್ರೀಡಾ ತಾರೆಯರು PM CARES ಫಂಡ್‌ಗೆ ದೇಣಿಗೆ ನೀಡಿದ್ದಾರೆ. ಬಿಸಿಸಿಐ ಕೂಡಾ ಉದಾರ ದೇಣಿಗೆ ನೀಡಿದ್ದು 51 ಕೋಟಿ ರುಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದೆ. ಇದರ ಜತೆಗೆ ಕೊರೋನಾ ಹರಡಂತೆ ತಡೆಯಲು ಪ್ರಧಾನಿ ಮೋದಿ ಘೋಷಿಸಿರುವ ಲಾಕ್‌ಡೌನ್ ಬಗ್ಗೆ ಅಭಿಮಾನಿಗಳಿಗೆ ಹಾಗೂ ದೇಶದ ಜನತೆಗೆ ಮನೆತಲ್ಲೇ ಇರಿ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.