ಮಾಜಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಮನಸ್ತಾಪ, ಕೋಚ್ ಹುದ್ದೆಗೆ ಕುಂಬ್ಳೆ ರಾಜೀನಾಮೆ ಸೇರಿದಂತೆ ನಾಟಕೀಯ ಬೆಳವಣಿಗೆಗಳು ರಹಸ್ಯವಾಗಿ ಉಳಿದಿಲ್ಲ. ಆದರೆ ಒಳಜಗಳ, ಕೊಹ್ಲಿ ನಿಲುವು, ಬಿಸಿಸಿಐ ಒಲವಿನ ಕುರಿತು ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ನಿರ್ಗಮಿತಿ ಬಿಸಿಸಿಐ COA ಈ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.
ಮುಂಬೈ(ಅ.24): ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಕಳೆದ 33 ತಿಂಗಳಿಂದ ಬಿಸಿಸಿಐ ಚುಕ್ಕಾಣಿ ಹಿಡಿದಿದ್ದ ಸುಪ್ರೀಂ ಕೋರ್ಟ್ ನೇಮಿಸಿದ COA ವಿನೋದ್ ರೈ ಅಧಿಕಾರ ಅಂತ್ಯವಾಯಿತು. ಬಿಸಿಸಿಐನಿಂದ ನಿರ್ಗಮಿಸೋ ವೇಳೆ ವಿನೋದ್ ಹಲವು ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ. ಇದರಲ್ಲಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಗುದ್ದಾಟದ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: IPL 2020:ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್!
ಅನಿಲ್ ಕುಂಬ್ಳೆ ಮೇಲೆ ನನಗೆ ಅಪಾರ ಗೌರವವಿದೆ. ಭಾರತದ ಕೋಚ್‌ಗಳಲ್ಲಿ ಅತ್ಯಂತ ಯಶಸ್ವಿ ಕೋಚ್ ಹೆಸರಿನಲ್ಲಿ ಕುಂಬ್ಳೆಗೆ ಮೊದಲ ಸ್ಥಾನ. ಮೂರು ಮಾದರಿಯಲ್ಲೂ ಕುಂಬ್ಳೆ ಯಶಸ್ಸು ಸಾಧಿಸಿದ್ದರು. ಶಿಸ್ತಿನ ವಿಚಾರದಲ್ಲೂ ಕುಂಬ್ಳೆಯನ್ನು ಮೀರಿಸುವವರಿಲ್ಲ. ಕುಂಬ್ಳೆ ಕೋಚ್ ಆಗಿ ಮುಂದುವರಿಯಬೇಕು ಅನ್ನೋದು ನನ್ನ ಮಹದಾಸೆಯಾಗಿತ್ತು. ಇದು ತಂಡಕ್ಕೂ ಸಹಕಾರಿಯಾಗಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಸುತಾರಾಂ ಸಿದ್ದವಿರಲಿಲ್ಲ ಎಂದು 'ಹಿಂದೂಸ್ತಾನ್ ಟೈಮ್ಸ್' ಇಂಗ್ಲೀಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ಗಮಿತ COA ವಿನೋದ್ ರೈ ಹೇಳಿದ್ದಾರೆ.
ಇದನ್ನೂ ಓದಿ: ಕುಂಬ್ಳೆ, ದ್ರಾವಿಡ್‌ಗಿಂತ ಗ್ರೇಟಾ ರವಿ ಶಾಸ್ತ್ರಿ?ಸಂಬಳದಲ್ಲೂ ಅನ್ಯಾಯ!
ಕುಂಬ್ಳೆ ಹಾಗೂ ಕೊಹ್ಲಿ ನಡುವಿನ ಜಗಳ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ತಾರಕಕ್ಕೇರಿತ್ತು. ಹೀಗಾಗಿ ನಾನು ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗೂಲಿಯನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಕ್ರಿಕೆಟ್ ಸಲಹಾ ಸಮಿತಿಗೂ ಕುಂಬ್ಳೆ ಮುಂದುವರಿಯಬೇಕೆಂಬ ಆಸೆ ಇತ್ತು. ಈ ಕುರಿತು ಸಚಿನ್ ಹಾಗೂ ಸೌರವ್, ನಾಯಕ ವಿರಾಟ್ ಕೊಹ್ಲಿ ಮನ ಒಲಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ ಎಂದು ಸಂದರ್ಶನದಲ್ಲಿ ವಿನೋದ್ ರೈ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಆಯ್ಕೆಗಾರ ಆಗಬೇಕು: ಸೆಹ್ವಾಗ್!
ಡ್ರೆಸ್ಸಿಂಗ್ ರೂಂ, ತಂಡದ ನಿರ್ಧಾರ, ಶಿಸ್ತಿನ ವಿಚಾರದಲ್ಲಿ ಕೊಹ್ಲಿ ಹಾಗೂ ಕುಂಬ್ಳೆ ಅಭಿಪ್ರಾಯಗಳು ಬೇರೆ ಬೇರೆಯಾಗಿತ್ತು. ಕೋಚ್‌ಗಿಂತ ನಾಯಕ ಮಿಗಿಲು ಎಂಬಂತೆ ಕೊಹ್ಲಿ ವರ್ತಿಸಿದರು. ಕೊಹ್ಲಿ ಮನಒಲಿಸುವಲ್ಲಿ ಬಿಸಿಸಿಐ ವಿಫಲವಾಯಿತು. ಹೆಚ್ಚಿನ ಅನಾಹುತವಾಗೋ ಮೊದಲು ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದರು. ಈಗ ಈ ಪರಿಸ್ಥಿತಿ ಉದ್ಭವವಾದರೆ, ಅಧ್ಯಕ್ಷ ಸೌರವ್ ಗಂಗೂಲಿ, ನಾಯಕ ಕೊಹ್ಲಿ ಬಾಯಿ ಮುಚ್ಚಿಸುತ್ತಿದ್ದರು. ಆದರೆ ಅಂದಿನ ಪರಿಸ್ಥಿತಿ ಬೇರೆಯಾಗಿತ್ತು ಎಂದು ಕೊಹ್ಲಿ ಹಾಗೂ ಕುಂಬ್ಳೆ ನಡುವಿನ ಮನಸ್ತಾನಪ ವಿವರವನ್ನು ರೈ ನೀಡಿದ್ದಾರೆ.