ಇಂಗ್ಲೆಂಡ್ ತಂಡದ ಭಾರತ ಪ್ರವಾಸ; ಟೆಸ್ಟ್, ಏಕದಿನ,ಟಿ20 ವೇಳಾಪಟ್ಟಿ ಪ್ರಕಟ!

By Suvarna NewsFirst Published Dec 10, 2020, 9:59 PM IST
Highlights

ಟೀಂ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಆಸೀಸ್ ಪ್ರವಾಸದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಆರಂಭಗೊಳ್ಳಲಿದೆ. ಇದೀಗ ಬಿಸಿಸಿಐ ತವರಿನಲ್ಲಿ ನಡೆಯಲಿರುವ ಮಹತ್ವದ ಸರಣಿ ವೇಳಾಪಟ್ಟಿ ಘೋಷಿಸಿದೆ.

ನವದೆಹಲಿ(ಡಿ.10):  ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ. ಡಿಸೆಂಬರ್ 17 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಫೆಬ್ರವರಿಯಿಂದ ಭಾರತದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ICC ಏಕದಿನ ಬ್ಯಾಟಿಂಗ್, ಬೌಲಿಂಗ್ ರ‍್ಯಾಂಕಿಂಗ್ ಪ್ರಕಟ, ಇಲ್ಲಿದೆ ಫುಲ್ ಲಿಸ್ಟ್!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಮೊದಲು ಟೆಸ್ಟ್ ಸರಣಿ ಆಯೋಜಿಸಲಾಗಿದೆ. ಫೆಬ್ರವರಿ 5 ರಿಂದ ಕೊರೋನಾ ಆತಂಕದ ನಡುವೆ ಭಾರತ ಮೊದಲ ಸರಣಿ ಆಯೋಜಿಸಲಿದೆ. 4 ಟೆಸ್ಟ್, 5 ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿ ಆಯೋಜಿಸಲಾಗಿದೆ.

ಭಾರತದಲ್ಲಿ ಆಯೋಜಿಸುವ ಪ್ರತಿ ಸರಣಿಯ ಪ್ರತಿ ಪಂದ್ಯಗಳು ಒಂದು ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ. ಆದರೆ ಈ ಬಾರಿ ಕೊರೋನ ಕಾರಣ ತಂಡದ ಪ್ರವಾಸವನ್ನು ತಪ್ಪಿಸಲು 4 ಟೆಸ್ಟ್ ಪಂದ್ಯಕ್ಕೆ ಚೆನ್ನೈ ಹಾಗೂ ಅಹಮ್ಮದಾಬಾದ್ ಮೈದಾನ ಆಯ್ಕೆ ಮಾಡಲಾಗಿದೆ. ಇನ್ನು ಟಿ20 ಪಂದ್ಯವನ್ನು ಅಹಮ್ಮದಾಬಾದ್ ಹಾಗೂ ಏಕದಿನ ಸರಣಿಯನ್ನು ಪುಣೆಯಲ್ಲಿ ಆಯೋಜಿಸಲಾಗಿದೆ.

ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ:
1ನೇ ಟೆಸ್ಟ್ : ಫೆ.5 ರಿಂದ 9 (ಚೆನ್ನೈ) 
2ನೇ ಟೆಸ್ಟ್ : ಫೆ.13 ರಿಂದ 17(ಚೆನ್ನೈ)
2ನೇ ಟೆಸ್ಟ್ : ಫೆ.24 ರಿಂದ 28( ಅಹಮ್ಮದಾಬಾದ್)
3ನೇ ಟೆಸ್ಟ್ : ಮಾ.4 ರಿಂದ 8 (ಅಹಮ್ಮದಾಬಾದ್) 

ಟಿ20 ಸರಣಿ
1ನೇ ಟಿ20 : ಮಾರ್ಚ್ 12 (ಅಹಮ್ಮದಾಬಾದ್)
2ನೇ ಟಿ20 : ಮಾರ್ಚ್ 14,(ಅಹಮ್ಮದಾಬಾದ್)
3ನೇ ಟಿ20 : ಮಾರ್ಚ್ 16,(ಅಹಮ್ಮದಾಬಾದ್)
4ನೇ ಟಿ20 : ಮಾರ್ಚ್ 18,(ಅಹಮ್ಮದಾಬಾದ್)
5ನೇ ಟಿ20 : ಮಾರ್ಚ್ 20, (ಅಹಮ್ಮದಾಬಾದ್)

ಏಕದಿನ ಸರಣಿ:
1ನೇ ಏಕದಿನ ; ಮಾರ್ಚ್ 23 (ಪುಣೆ)
2ನೇ ಏಕದಿನ ;ಮಾರ್ಚ್ 26 (ಪುಣೆ)
3ನೇ ಏಕದಿನ ;ಮಾರ್ಚ್ 28 (ಪುಣೆ)

click me!