ಭಾರತ, ಪಾಕಿಸ್ತಾನ ದಾಖಲೆ ಮುರಿದು ವಿಶ್ವ ಕ್ರಿಕೆಟ್‌ಗೆ ನಡುಕ ಹುಟ್ಟಿಸಿದ ಬಾಂಗ್ಲಾದೇಶ!

Published : Aug 17, 2026, 08:26 AM IST
Bangladesh Win

ಸಾರಾಂಶ

ವಿಶ್ವದ ನಂ.1 ಆಸ್ಟ್ರೇಲಿಯಾ ತಂಡವನ್ನು ಅದರದೇ ನೆಲದಲ್ಲಿ ಮಣಿಸಿದ ಬಾಂಗ್ಲಾದೇಶ, ಐತಿಹಾಸಿಕ ಟೆಸ್ಟ್ ಗೆಲುವು ದಾಖಲಿಸಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ಗೆದ್ದ ಏಷ್ಯಾದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಭಾರತ ಮತ್ತು ಪಾಕಿಸ್ತಾನವನ್ನು ಹಿಂದಿಕ್ಕಿದೆ. 2 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ 1-0 ಮುನ್ನಡೆ ಸಾಧಿಸಿದೆ.

ಡಾರ್ವಿನ್: ವಿಶ್ವ ನಂ.1 ಆಸ್ಟ್ರೇಲಿಯಾ ವಿರುದ್ಧ, ಅದರದೇ ತವರಿನಲ್ಲಿ ಬಾಂಗ್ಲಾದೇಶ ತಂಡ ಐತಿಹಾಸಿಕ ಟೆಸ್ಟ್ ಗೆಲುವು ಸಾಧಿಸಿದೆ. ಈ ಮೂಲಕ ಬಾಂಗ್ಲಾ ತಂಡ ಆಸ್ಟ್ರೇಲಿಯಾದಲ್ಲಿ ತಾನಾಡಿದ 3ನೇ ಟೆಸ್ಟ್ ಪಂದ್ಯದಲ್ಲೇ ಗೆಲುವು ತನ್ನದಾಗಿಸಿಜೊಂಡಿತು. ಈ ಮೂಲಕ ಅತ್ಯಂತ ಕಡಿಮೆ ಪಂದ್ಯಗಳನ್ನಾಡಿ ಆಸ್ಟ್ರೇಲಿಯಾದಲ್ಲಿ ಗೆದ್ದ ಏಷ್ಯಾದ ತಂಡ ಎನಿಸಿಕೊಂಡಿತು. ಭಾರತವು ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಗೆಲುವಿಗೆ 12 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಪಾಕ್ ತನ್ನ 7ನೇ ಪಂದ್ಯದಲ್ಲೇ ಈ ಸಾಧನೆ ಮಾಡಿತ್ತು.ಈ ಮೂಲಕ ಭಾರತ ಮತ್ತು ಪಾಕ್ ತಂಡಗಳನ್ನು ಬಾಂಗ್ಲಾದೇಶ ಹಿಂದಿಕ್ಕಿತು.

ಆಸೀಸ್ ನೆಲದಲ್ಲೇ ಭರ್ಜರಿ ಜಯಭೇರಿ

ಬರೋಬ್ಬರಿ 23 ವರ್ಷ ಬಳಿಕ ಆಸ್ಟೇಲಿಯಾದಲ್ಲಿ ಟೆಸ್ಟ್ ಆಡಿದ ಬಾಂಗ್ಲಾದೇಶ, ಅಲ್ಲಿ ತನ್ನ ಚೊಚ್ಚಲ ಗೆಲುವು ದಾಖಲಿಸಿತು. 9 ವರ್ಷ ಹಿಂದೆ ಬಾಂಗ್ಲಾದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಆಸೀಸ್ ವಿರುದ್ಧ ಬಾಂಗ್ಲಾ ಮೊದಲ ಬಾರಿ ಗೆದ್ದಿತ್ತು. ಈಗ ಆಸೀಸ್ ನೆಲದಲ್ಲೇ ಜಯಭೇರಿ ಮೊಳಗಿಸಿದೆ. ಈ ಮೂಲಕ ವಿಶ್ವದ ನಂಬರ್ 1 ಟೆಸ್ಟ್ ತಂಡವಾಗಿರುವ ಆಸ್ಟ್ರೇಲಿಯಾವನ್ನು ತನ್ನದೇ ದೇಶದಲ್ಲಿ ಬಗ್ಗುಬಡಿದು ವಿಶ್ವದ ಎಲ್ಲ ಕ್ರಿಕೆಟ್ ತಂಡಗಳಿಗೆ ಎಚ್ಚರಿಕೆಯನ್ನು ರವಾನಿಸಿದೆ. ಇನ್ನುಮುಂದೆ ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಜೊತೆಗೆ ಬಾಂಗ್ಲಾದೇಶವೂ ಕೂಡ ಶಕ್ತಿಶಾಲಿ ತಂಡ ಎನ್ನುವುದನ್ನು ಪರಿಗಣಿಸುವಂತೆ ಎಚ್ಚರಿಕೆಯನ್ನು ರವಾನಿಸಿದಂತಿದೆ.

ಸರಣಿಯಲ್ಲಿ 1-0 ಮುನ್ನಡೆ

ಭಾನುವಾರ ಕೊನೆಗೊಂಡ ಪಂದ್ಯದಲ್ಲಿ ಬಾಂಗ್ಲಾ 9 ವಿಕೆಟ್ ಗೆಲುವು ಸಾಧಿಸಿ, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ ಆಸೀಸ್ 198 ರನ್ ಗಳಿಸಿದ್ದರೆ, ಬಾಂಗ್ಲಾ 426 ರನ್ ಕಲೆಹಾಕಿ 228 ರನ್ ಮುನ್ನಡೆ ಸಾಧಿಸಿತ್ತು. 2ನೇ ಇನಿಂಗ್ಸ್‌ನಲ್ಲಿ ಆಸೀಸ್‌, ಕ್ಯಾಮರೂನ್ ಗ್ರೀನ್‌(104 ರನ್‌) ಶತಕದಿಂದಾಗಿ 284 ರನ್‌ಗೆ ಆಲೌಟಾಯಿತು. ಮೆಹಿದಿ ಹಸನ್ ಮಿರಾಜ್ 5 ವಿಕೆಟ್ ಪಡೆದರೆ, ಹಸನ್ ಮಹ್ಮೂದ್ 3 ವಿಕೆಟ್ ಕಿತ್ತು ಪಂದ್ಯದಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 9ಕ್ಕೆ ಏರಿಸಿದರು. ಗೆಲುವಿಗೆ ಕೇವಲ 57 ರನ್ ಗುರಿ ಪಡೆದ ಬಾಂಗ್ಲಾ 14.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಜಯ ತನ್ನದಾಗಿಸಿಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಚ್‌ನಲ್ಲಿ ಕೂತು ಬೇರೆಯವರ ಆಟ ನೋಡೋದು ಸುಲಭ ಅಲ್ಲ -ಒಂದೂವರೆ ವರ್ಷದ ತಪ್ಪಸ್ಸಿಗೆ ಪಡಿಕ್ಕಲ್ ಭಾವುಕ
ಮಹಾತ್ಮನಿಗೆ ಐಸಿಸಿ ವಿಶೇಷ ಗೌರವ.. 2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ..!