ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬೆಂಗಳೂರು ತಂಡವನ್ನು ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.17): ಐಪಿಎಲ್ 14ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ(ಫೆ.18)ರಂದು ನಡೆಯಲಿದ್ದು, ಆಸ್ಪ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೊಂಡಿರುವ ಮ್ಯಾಕ್ಸ್‌ವೆಲ್, ‘ಎಬಿ ಡಿ ವಿಲಿಯರ್ಸ್ ಜೊತೆ ಆಡುವುದು ನನ್ನ ಕನಸು. ಎಬಿಡಿಯನ್ನು ನಾನು ಆರಾಧಿಸುತ್ತೇನೆ. ಕೊಹ್ಲಿ ನಾಯಕತ್ವದಲ್ಲಿ ಆಡುವುದು ಸಹ ಅತ್ಯುತ್ತಮ ಅನುಭವ. ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಕೊಹ್ಲಿ ಜೊತೆ ಬ್ಯಾಟ್ ಮಾಡಲು ಸಹ ಇಚ್ಛಿಸುತ್ತೇನೆ’ ಎಂದಿದ್ದಾರೆ.
IPL 2021: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಹೆಸರು ಬದಲು..!
ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಕಾರಣ, ಈ ಬಾರಿ ತಂಡ ಅವರನ್ನು ಕೈಬಿಟ್ಟಿದೆ. ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಡೆಲ್ಲಿ, ಮುಂಬೈ ತಂಡದ ಪರವೂ ಆಡಿದ್ದಾರೆ.
ಐಪಿಎಲ್ ಮುಕ್ತಾಯವಾದ ಬಳಿಕ ತವರಿನಲ್ಲಿ ಭಾರತ ವಿರುದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಫ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಸದ್ಯ ಮ್ಯಾಕ್ಸ್‌ವೆಲ್ ಮೂಲಬೆಲೆ 2 ಕೋಟಿ ರುಪಾಯಿ ನಿಗದಿಯಾಗಿದ್ದು, ಆಸೀಸ್ ಸ್ಟಾರ್ ಆಲ್ರೌಂಡರ್ ಈ ಬಾರಿ ಯಾವ ತಂಡದ ಪಾಲಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಚೆನ್ನೈನಲ್ಲಿ ಫೆಬ್ರವರಿ 18ರ ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದೆ.