ವಿಮಾನದಲ್ಲಿ ಚಾಹಲ್ ಕೈಯಲ್ಲಿ ಇ-ಸಿಗರೇಟ್? ಅರ್ಶದೀಪ್ ವಿಡಿಯೋದಿಂದ ಶುರುವಾಯ್ತು ಸಂಕಷ್ಟ

Published : May 08, 2026, 12:24 PM IST
Yuzvendra Chahal Caught Vaping on Flight

ಸಾರಾಂಶ

ಐಪಿಎಲ್ ಟೂರ್ನಿಯಲ್ಲಿ ರಿಯಾನ್ ಪರಾಗ್ ವೇಪಿಂಗ್ (ಧೂಮಪಾನ) ಚಟ ಭಾರಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ಚಹಾಲ್ ವಿಮಾನದಲ್ಲಿ ವೇಪಿಂಗ್ ಮಾಡುತ್ತಿರುವ ಕುರಿತ ವಿಡಿಯೋ ವಿವಾದ ಸೃಷ್ಚಿಸಿದೆ.

ಹೈದರಾಬದ್ (ಮೇ.08) ಐಪಿಎಲ್ ಟೂರ್ನಿಯಲ್ಲಿ ಒಂದರ ಮೇಲೊಂದರಂತೆ ವಿವಾದಗಳು ಸೃಷ್ಟಿಯಾಗುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡದ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಂನಲ್ಲಿ ವೇಪಿಂಗ್ ಮಾಡುತ್ತಿರುವ ದೃಶ್ಯ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ಗರಂ ಆಗಿತ್ತು. ಈ ವಿವಾದ ಮರೆಯಾಗುತ್ತಿದ್ದಂತೆ ಇದೀಗ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ವೇಪಿಂಗ್ ವಿವಾದ ಭಾರಿ ಸದ್ದು ಮಾಡುತ್ತಿದೆ. ವಿಮಾನದಲ್ಲಿ ಕುಳಿತ ಯಜುವೇಂದ್ರ ಚಹಾಲ್ ವೇಪಿಂಗ್ ಮಾಡಿ ಸಿಕ್ಕಿಬಿದ್ರಾ? ವೇಗಿ ಅರ್ಶದೀಪ್ ಸಿಂಗ್ ವ್ಲಾಗಿಂಗ್ ವಿಡಿಯೋದಲ್ಲಿ ಚಹಾಲ್ ದೃಶ್ಯವೊಂದು ಸರೆಯಾಗಿದೆ. ಇದರಲ್ಲಿ ಚಹಾಲ್ ವೇಪಿಂಗ್ ಮಾಡುತ್ತಿರುವ ರೀತಿಯ ದೃಶ್ಯವೇ ಈ ವಿವಾದಕ್ಕೆ ಕಾರಣವಾಗಿದೆ.

ಏನಿದು ಘಟನೆ?

ಮೇ 6 ರಂದು ಪಂಜಾಬ್ ಕಿಂಗ್ಸ್ ತಂಡ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ವೇಗಿ ಅರ್ಶದೀಪ್ ಸಿಂಗ್ ತಮ್ಮ ಟ್ರಾವೆಲ್ ವ್ಲಾಗ್‌ಗಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ತಂಡದ ಸಹ ಆಟಗಾರರನ್ನು ಮಾತನಾಡಿಸುತ್ತಾ,ತಮಾಷೆ ಮಾಡುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವಿಮಾನದಲ್ಲಿ ಅರ್ಶದೀಪ್ ಸಿಂಗ್ ವಿಡಿಯೋ ರೆಕಾರ್ಡ್ ಮಾಡುತ್ತಿರುವಾಗ ಕುಳಿತಿದ್ದ ಯಜುವೇಂದ್ರ ಚಹಾಲ್, ವೇಪಿಂಗ್ ಮಾಡುತ್ತಿರುವ ರೀತಿಯ ದೃಶ್ಯ ರೆಕಾರ್ಡ್ ಆಗಿದೆ. ಅರ್ಶದೀಪ್ ಟ್ರಾವೆಲ್ ವ್ಲಾಗ್ ವಿಡಿಯೋವನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ ಈ ತುಣುಕು ಭಾರಿ ಕೋಲಾಹಲ ಸೃಷ್ಟಿಸಿದೆ.

ಯಜುವೇಂದ್ರ ಚಹಾಲ್ ವಿಮಾನದ ವಿಂಡೋ ಸೀಟ್ ಬಳಿ ಕುಳಿತಿದ್ದಾರೆ. ಕೈಯಲ್ಲಿ ಏನೋ ಹಿಡಿದು ವೇಪಿಂಗ್ ಮಾಡುತ್ತಿರುವಂತೆ ದೃಶ್ಯದಲ್ಲಿ ದಾಖಲಾಗಿದೆ. ಈ ವಿಡಿಯೋ ಅರ್ಶದೀಪ್ ಸಿಂಗ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಹಲವರು ಚಹಾಲ್ ವಿಡಿಯೋ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

 

 

ಚಹಾಲ್ ವೇಪಿಂಗ್ ಮಾಡುವುದು ನಿಜವೇ?

ಚಹಾಲ್ ವಿಮಾನದಲ್ಲಿ ವೇಪಿಂಗ್ ಮಾಡಿರುವುದು ನಿಜವೆ? ಹಲವರು ಇದು ರಿಯಾನ್ ಪರಾಗ್‌ಗೆ ಠಕ್ಕರ್ ನೀಡಿದ ಪ್ರಯತ್ನ ಎಂದಿದ್ದಾರೆ. ಚಹಾಲ್ ಬೇರೆ ವಸ್ತು ಬಳಸಿ ವೇಪಿಂಗ್ ಮಾಡುವ ರೀತಿ ನಟಿಸಿದ್ದಾರೆ. ಮಿಮಿಕ್ ಮಾಡಿ ಅಣಕಿಸಿದ್ದಾರೆ. ಆದರೆ ವಿಡಿಯೋದಲ್ಲಿ ಇದರ ತುಣುಕು ಮಾತ್ರ ಕತ್ತರಿಸಿ ಪೋಸ್ಟ್ ಮಾಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಸ್ಪೇ ಹಿಡಿದು ಚಹಾಲ್ ಈ ರೀತಿ ಮಾಡಿದ್ದಾರೆ. ಇದು ತಮಾಷೆಗಾಗಿ, ಅಣಕಿಸಲು ಮಾಡಿದ ಪ್ರಯತ್ನ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಇದೇ ವೇಳೆ ಹಲವರು ಚಹಾಲ್ ವಿರುದ್ದ ಕಿಡಿಕಾರಿದ್ದಾರೆ. ವಿಮಾನದಲ್ಲಿ ಧೂಮಪಾನ, ವೇಪಿಂಗ್ ಕಾನೂನು ಬಾಹಿರ. ಇದೇ ವೇಳೆ ಒಬ್ಬ ಕ್ರಿಕೆಟಿಗ ಆದರ್ಶವಾಗಿರಬೇಕು. ರಿಯಾನ್ ಪರಾಗ್ ಬೆನ್ನಲ್ಲೇ ಇದೀಗ ಯಜುವೇಂದ್ರ ಚಹಾಲ್ ವೇಪಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ. ಭಾರತೀಯ ಕ್ರಿಕೆಟ್, ಐಪಿಎಲ್ ಮೂಲಕ ಅಪಾಯದಲ್ಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20 World Cup ಗೆದ್ದರೂ ಸೂರ್ಯಕುಮಾರ್‌ಗೆ ಬಂತು ಕುತ್ತು ! ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿ ಹೊಸ ಆಟಗಾರ ಎಂಟ್ರಿ?
ಆರ್‌ಸಿಬಿ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್: ಸರ್ಕಾರದ ಪಾತ್ರ ಇಲ್ಲ, ವಾಣಿಜ್ಯ ಕಾರಣವಿರಬಹುದು: ಗೃಹ ಸಚಿವ ಪರಮೇಶ್ವರ